

ಕಾರ್ಕಳ,ನ.02: ಕಾರ್ಕಳ ಸರಕಾರಿ ಕೈಗಾರಿಕಾ ತರಬೇತಿ ಸಂಸ್ಥೆಯಲ್ಲಿ ನೂರು ದಿನಗಳ ಅಲ್ಪಾವಧಿ ತರಬೇತಿ ಕಾರ್ಯಕ್ರಮದ 240 ಗಂಟೆಗಳ MMV, MRAC, ELECTRICIAN ವಿಭಾಗಳ ಅಲ್ಪಾವದಿ ತರಬೇತಿಯ ಉದ್ಘಾಟನೆ ನ.02 ರಂದು ಜರಗಿತು. ನಿತ್ಯಾನಂದ ಎಲೆಕ್ಟ್ರಿಕಲ್ ನ ಎಂಡಿ ನಿತ್ಯಾನಂದ ತರಬೇತಿ ಕಾರ್ಯಕ್ರಮ ಉದ್ಘಾಟಿಸಿದರು.
ಈ ತರಬೇತಿ ಕಾರ್ಯಕ್ರಮದಲ್ಲಿ ಪ್ರತಿಷ್ಠಿತ ಏಳು ಕಂಪನಿಗಳಾದ ಆಭರಣ ಮೋಟರ್ , ಅರವಿಂದ ಮೋಟಾರ್ ಕೆಏನ್ ಎನ್ ಡಿ, ಸುನಿತ ಮೋಟರ್ಸ್, ಸಾನ್ವಿ ರೆಫ್ರಿಜರೇಷನ್, ನಿತ್ಯಾನಂದ ಎಲೆಕ್ಟ್ರಿಕಲ್ಸ್, ಮೆಸಿಲಿ, ಇವರೊಂದಿಗೆ ಎಂ ಓ ಯು ಮಾಡಿಕೊಂಡಿದ್ದು ಅವರ ಸಹಯೋಗದೊಂದಿಗೆ ಕೈಗಾರಿಗೆ ಹಾಗೂ ತರಬೇತಿ ಸಂಸ್ಥೆ ನೀಡುವ ತರಬೇತಿ ಯಲ್ಲಿ ರುವ ಸ್ಕಿಲ್ ಗ್ಯಾಪ್ ಅನ್ನು ಈ ಅಲ್ಪಾವಧಿ ತರಬೇತಿಯಲ್ಲಿ ತರಬೇತು ದಾರರಿಗೆ ನೀಡಿ ಪೂರ್ಣಗೊಂಡ ನಂತರ ಎಲ್ಲಾ ತರಬೇತಿದಾರರಿಗೆ ಶೇಕಡ 100ರಷ್ಟು ಉದ್ಯೋಗ ದೊರಕಿ ಸುವ ಯೋಜನೆ ಇದಾಗಿದೆ.
ಈ ಸಂದರ್ಭದಲ್ಲಿ ಸರಕಾರಿ ತರಬೇತಿ ಸಂಸ್ಥೆ ಕಾರ್ಕಳ ದ ಪ್ರಾಚಾರ್ಯರಾದ ಮಮತಾ ಎಸ್ ಎಲ್, ತರಬೇತಿ ಅಧಿಕಾರಿಗಳಾದ ಸಂತೋಷ್ ನಾಯಕ್, ಸಂಸ್ಥೆಯ ಸಿಬ್ಬಂದಿಗಳು ಹಾಗೂ ತರಬೇತುದಾರರು ಉಪಸ್ಥಿತರಿದ್ದರು.





.
.
.
.
.
.
.
.
.
.
.
.
.
.
.
.
.
.
.
.
