Share this news

ಹೆಬ್ರಿ: ಕಾರ್ಕಳ ವಿಧಾನಸಭಾ ಕ್ಷೇತ್ರದ ಪಕ್ಷೇತರ ಅಭ್ಯರ್ಥಿ, ಶ್ರೀರಾಮ ಸೇನೆ ಮುಖಂಡ ಪ್ರಮೋದ್ ಮುತಾಲಿಕ್ ಏಪ್ರಿಲ್ 8 ರಂದು ನಡೆದ ಚುನಾವಣಾ ಪ್ರಚಾರ ಭಾಷಣದಲ್ಲಿ ಕಬ್ಬಿನಾಲೆ ಭಾಗದ ಜನಾಂಗದವರು ಕಾಡು ಜನರು ಪೂರ್ತಿಯಾಗಿ ಹಾಕಿಕೊಳ್ಳಲಿಕ್ಕೆ ಬಟ್ಟೆ ಇಲ್ಲವೆಂದು ದಲಿತ ಸಮಾಜವನ್ನು ಅವಹೇಳನ ಮಾಡಿದ್ದಾರೆ ಎಂದು ಆರೋಪಿಸಿ ಗೋಪಾಲ ಗೌಡ ಎಂಬವರು ಮುತಾಲಿಕ್ ಹಾಗೂ ಇತರರ ವಿರುದ್ಧ ಹೆಬ್ರಿ ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ.

ಪರಿಶಿಷ್ಟ ಜಾತಿ ಪಂಗಡ ದೌರ್ಜನ್ಯ ಪ್ರತಿರೋಧ ಕಾಯ್ದೆಯನ್ವಯ, ದಲಿತ ಜನಾಂಗದವರಿಗೆ ಅವಹೇಳನಕಾರಿಯಾಗಿ ಮಾತನಾಡಿದ ಪ್ರಮೋದ್ ಮುತಾಲಿಕ್ ಹಾಗೂ ಕಾರ್ಯಕ್ರಮವನ್ನು ಆಯೋಜಿಸಿದ ಹರೀಶ್ ಅಧಿಕಾರಿ,ವಿವೇಕಾನಂದ ಶೆಣೈ,ದಿವ್ಯ ನಾಯಕ್, ಪ್ರವೀಣ್ ಪೂಜಾರಿ,ಸುಭಾಷ್ ಚಂದ್ರ ಹೆಗ್ಡೆಯವರ ವಿರುದ್ಧ ಕಾನೂನು ಕ್ರಮವನ್ನು ಕೈಗೊಳ್ಳಬೇಕೆಂದು ಗೋಪಾಲ ಗೌಡ ದೂರು‌ ನೀಡಿದ್ದಾರೆ.

Leave a Reply

Your email address will not be published. Required fields are marked *