Share this news

ಮಂಗಳೂರು: ಬಜಪೆ ಚತುಷ್ಪಥ ಹೆದ್ದಾರಿ ಕಾಮಗಾರಿಯ ಅವ್ಯವಸ್ಥೆ ಹಾಗೂ ಅಧಿಕಾರಿಗಳ ಬೇಜವಾಬ್ದಾರಿ ವಿರುದ್ಧ ಬಜಪೆ ನಾಗರಿಕ ಹಿತರಕ್ಷಣಾ ವೇದಿಕೆಯ ಸದಸ್ಯರು ಪ್ರತಿಭಟನೆಗೆ ಮುಂದಾಗಿದ್ದಾರೆ.

ಈ ಕುರಿತು ಬಜಪೆಯ ಎಂಜೆಎಂ ಮಸೀದಿಯ ಸಭಾಂಗಣದಲ್ಲಿ ಸಭೆ ನಡೆಸಿ,ಅಸಮರ್ಪಕ ಕಾಮಗಾರಿಯಿಂದ ವಾಹನ ಸವಾರರಿಗೆ ಹಾಗೂ ಸಾರ್ವಜನಿಕರ ಓಡಾಟಕ್ಕೆ ತೀವ್ರ ತೊಂದರೆಯಾಗುತ್ತಿದೆ,ಸೂಕ್ತ ಕ್ರಮಕ್ಕೆ ಆಗ್ರಹಿಸಿದರೂ ಅಧಿಕಾರಿಗಳು ಕ್ರಮಕೈಗೊಳ್ಳದ ಹಿನ್ನೆಲೆಯಲ್ಲಿ ಬಜ್ಪೆ ನಾಗರಿಕರ ಹಿತರಕ್ಷಣಾ ವೇದಿಕೆಯ ವತಿಯಿಂದ ನವೆಂಬರ್ 16ರಂದು ಪ್ರತಿಭಟನೆಗೆ ನಿರ್ಧರಿಸಲಾಗಿದೆ. ಈ ಸಭೆಯಲ್ಲಿ ದಲಿತ ಸಂಘರ್ಷ ಸಮಿತಿಯ ರಾಜ್ಯ ಸಂಚಾಲಕರಾದ ದೇವದಾಸ್ , ಜಿಲ್ಲಾ ಸಂಚಾಲಕ ಸಿರಾಜ್ ಬಜ್ಪೆ ,ಸಹ ಸಂಚಾಲಕರಾದ ಇಸ್ಮಾಯಿಲ್,ಎಂಜೆಎಂ ಮಸೀದಿಯ ಅಧ್ಯಕ್ಷ ಖಾದರ್ ಸಾಬ್,ಅಥಾವುಲ್ಲಾ ಜೋಕಟ್ಟೆ ,
ದಲಿತ ಸಂಘ ಸಮಿತಿಯ ರಾಕೇಶ್ ಕರಂಬಾರ್,ಹಿರಿಯರಾದ ಥೋಮಸ್,
SSF ಮುಖಂಡ ಸಲೀಲ್ ,ಮುಫೀದ್ ,ಮುಲ್ಕಿ ಮೂಡಬಿದ್ರೆ ಕಾಂಗ್ರೆಸ್ ಐಟಿ ಸೆಲ್ ಅಧ್ಯಕ್ಷರಾದ ನಿಸಾರ್ ಕರಾವಳಿ,ರಹಿಮಾನ್ ಕಳವಾರ್,ಅಝರ್, ಅನ್ವರ್ ಬಜ್ಪೆ ,ಹಕೀಮ್ ಕೊಳಂಬೆ ,ಅಶ್ರಫ್ ಕೊಳಂಬೆ, ಹಕೀಮ್ ,ದಲಿತ ಸಂಘ ಸಮಿತಿಯ ಲಕ್ಷ್ಮೀಶ, ಹಿರಿಯರಾದ ಮೋನಕ್ಕ,ಅಬ್ಬಾಸ್ ಸೂರಲ್ಪಾಡಿ ,ಇರ್ಷಾದ್ ಬಜ್ಪೆ ,ಅಶ್ರಫ್ ಜೋಕಟ್ಟೆ ,ಇಕ್ಬಾಲ್ ಪ್ಯಾರಾ ,ಹಸೈನಾರ್ ಬಜ್ಪೆ ,ನಿಸಾರ್, ಗ್ರಾ ಪಂ ಮಾಜಿ ಅಧ್ಯಕ್ಷ ಮೊಹಮದ್ ಷರೀಫ್ ಗ್ರಾ ,ಪಂ .ಸದಸ್ಯರುಗಳಾದ ಜೇಕಬ್ ಪಿರೇರಾ,ನಜೀರ್ ಕಿನ್ನಿಪದವು, ಮನ್ಸೂರು,ಕುಡುಬಿ ಸಮಾಜದ ನಾಯಕರಾದ ಶೇಖರ್ ಗೌಡ ,
ಮುಖಂಡರಾದ ಯಶೋಧರ ಆಚಾರ್ಯ ಮುಂತಾದವರು ಉಪಸ್ಥಿತರಿದ್ದರು

Leave a Reply

Your email address will not be published. Required fields are marked *