ವಿಜಯಪುರ:ಬುಧವಾರ ಸಂಜೆ ಕೊಳವೆ ಬಾವಿಯ 20 ಅಡಿ ಆಳಕ್ಕೆ ಬಿದ್ದಿದ್ದ ಪುಟ್ಟ ಬಾಲಕ ಸಾತ್ವಿಕ್’ನನ್ನು ಇದೀಗ ಬರೋಬ್ಬರಿ 21 ಗಂಟೆಗಳ ನಿರಂತರ ಯಶಸ್ವಿ ಕಾರ್ಯಾಚರಣೆ ಬಳಿಕ ಜೀವಂತವಾಗಿ ಹೊರಗಡೆ ತರಲಾಗಿದೆ. ಈ ಒಂದು ಕ್ಷಣಕ್ಕಾಗಿ ಇಡೀ ರಾಜ್ಯಕ್ಕೆ ರಾಜ್ಯವೇ ಕಾತರದಿಂದ ಕಾಯುತ್ತಿತ್ತು.ಕೊನೆಗೂ ಕರುನಾಡಿನ ಜನರ ಪ್ರಾರ್ಥನೆ ಫಲಿಸಿದೆ.
ಬುಧವಾರ ಸಂಜೆಯಿಂದ ರಾಷ್ಟ್ರೀಯ ವಿಪತ್ತು ನಿರ್ವಹಣಾ ತಂಡ(NDRF) ,ರಾಜ್ಯ ವಿಪತ್ತು ನಿರ್ವಹಣಾ ತಂಡ(SDRF) ಹಾಗೂ ಅಗ್ನಿಶಾಮಕ ದಳದ ಸಿಬ್ಬಂದಿಗಳ ನಿರಂತರ ಕಾರ್ಯಾಚರಣೆಯ ಫಲವಾಗಿ ಹಾಗೂ ಕೋಟ್ಯಾಂತರ ಜನರ ಪ್ರಾರ್ಥನೆ ಫಲವಾಗಿ ಸಾತ್ವಿಕ್ ಪ್ರಾಣಾಪಾಯವಿಲ್ಲದೇ ಬದುಕಿ ಬಂದಿರುವುದು ಪವಾಡ ಎಂದರೂ ತಪ್ಪಿಲ್ಲ.
ಇತ್ತ ಯಾವುದೇ ಮುಂಜಾಗ್ರತಾ ಕ್ರಮವಿಲ್ಲದೇ ಬೇಕಾಬಿಟ್ಟಿ ಬೋರ್ ವೆಲ್ ಕೊರೆಸುವವರ ವಿರುದ್ಧ ಕಠಿಣ ಕ್ರಮ ಜರುಗಿಸಬೇಕು.ಅನಧಿಕೃತ ರಿಗ್ಗಿಂಗ್ ಮಾಡುವವರ ವಿರುದ್ಧವೂ ಕ್ರಮ ಜರುಗಿಸಬೇಕಿದೆ




