ನವದೆಹಲಿ: ದೆಹಲಿಯ ಮತದಾರರು ಆಮ್ ಆದ್ಮಿ ಪಕ್ಷದ ನಾಯಕರನ್ನು ಅವರ ಕೆಲಸದಿಂದಾಗಿ ಗೌರವಿಸುತ್ತಾರೆ ಎಂದು ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ಹೇಳಿದ್ದಾರೆ.
ಲೋಕಸಭಾ ಚುನಾವಣೆಯ ಮತದಾನಕ್ಕೂ ಮುನ್ನ ಕೇಜ್ರಿವಾಲ್ ಭಾನುವಾರ ಪಕ್ಷದ ಹಿರಿಯ ನಾಯಕರು ಮತ್ತು ಶಾಸಕರೊಂದಿಗೆ ಸಭೆ ನಡೆಸಿದರು. ತಮ್ಮ ಅನುಪಸ್ಥಿತಿಯಲ್ಲಿ ಒಗ್ಗಟ್ಟಾಗಿ ಉಳಿದಿದ್ದಕ್ಕಾಗಿ ಮತ್ತು “ದೆಹಲಿಯ ಜನರು ವಿದ್ಯುತ್, ನೀರು ಮತ್ತು ಔಷಧಿಗಳನ್ನು ಪಡೆಯುವಲ್ಲಿ ಯಾವುದೇ ಸಮಸ್ಯೆಯನ್ನು ಎದುರಿಸುವುದಿಲ್ಲ ಎಂದು ಖಚಿತಪಡಿಸಿಕೊಳ್ಳಲು ಕೆಲಸ ಮಾಡುತ್ತಿದ್ದಾರೆ” ಎಂದು ಅವರು ಶ್ಲಾಘಿಸಿದರು. ಕೌನ್ಸಿಲರ್’ಗಳನ್ನು ಉದ್ದೇಶಿಸಿ ಮಾತನಾಡಿದ ಕೇಜ್ರಿವಾಲ್, ಲೋಕಸಭಾ ಚುನಾವಣಾ ಫಲಿತಾಂಶವನ್ನು ಜೈಲಿನಿಂದ ನೋಡುತ್ತಿದ್ದೇನೆ ಎಂದು ಹೇಳಿದರು. “ನೀವು ಕಷ್ಟಪಟ್ಟು ಕೆಲಸ ಮಾಡಿ INDIA ಬಣವನ್ನು ಗೆಲ್ಲಿಸಿದರೆ, ನಾನು ಜೂನ್ 5 ರಂದು ಜೈಲಿನಿಂದ ಹಿಂತಿರುಗುತ್ತೇನೆ. ನೀವು ಕಷ್ಟಪಟ್ಟು ಕೆಲಸ ಮಾಡದಿದ್ದರೆ, ನಾವು ಮತ್ತೆ ಯಾವಾಗ ಭೇಟಿಯಾಗುತ್ತೇವೆ ಎಂದು ನೋಡೋಣ” ಎಂದು ಅವರು ಕೌನ್ಸಿಲರ್ ಗಳಿಗೆ ಹೇಳಿದರು.
ಮೂರು ತಿಂಗಳ ಹಿಂದಿನವರೆಗೂ ಬಿಜೆಪಿ ನಾಯಕರು 400 ಕ್ಕೂ ಹೆಚ್ಚು ಸ್ಥಾನಗಳನ್ನು ಪಡೆಯುತ್ತೇವೆ ಎಂದು ಹೇಳುತ್ತಿದ್ದರು, ಇದೀಗ ಅವರಿಗೆ 250 ಸ್ಥಾನಗಳು ಸಿಗುವುದು ಕೂಡ ಕಷ್ಟ ಎನ್ನಲಾಗಿದೆ. ಈ ಕುರಿತು ಬೆಟ್ಟಿಂಗ್ ಜನ ನಡೆಸುತ್ತಿದ್ದಾರೆ ಎಂದು ಕೇಜ್ರಿವಾಲ್ ಲೇವಡಿ ಮಾಡಿದರು.
ದೆಹಲಿಯಲ್ಲಿ ಮುಂದಿನ ಸರ್ಕಾರ ನಮ್ಮದೇ ಬಿಜೆಪಿ ದುರಾಡಳಿತಕ್ಕೆ ಜನ ಪಾಠ ಕಲಿಸಲಿದ್ದಾರೆ ಎಂದು ಬಿಜೆಪಿ ವಿರುದ್ಧ ವಾಗ್ದಾಳಿ ನಡೆಸಿದರು





