Share this news

ಹುಬ್ಬಳ್ಳಿ : ಇತ್ತೀಚಿಗೆ ಹುಬ್ಬಳ್ಳಿಯಲ್ಲಿ ಪ್ರೀತಿ ನಿರಾಕರಿಸಿದ ಕಾರಣಕ್ಕೆ ಅಂಜಲಿ ಅಂಬಿಗೇರ ಎಂಬ ಯುವತಿಯನ್ನು ಆಕೆಯ ಪ್ರಿಯಕರ ಬರ್ಬರ ಹತ್ಯೆಗೈದಿದ್ದ. ಈ ಒಂದು ಘಟನೆಗೆ ಸಂಬಂಧಿಸಿದಂತೆ ಇಂದು ಅಂಬಿಗೇರ ಚೌಡಯ್ಯ ಪೀಠದ ಶಾಂತಭೀಷ್ಮ ಶ್ರೀಗಳು ಮಾತನಾಡಿ ಉತ್ತರ ಪ್ರದೇಶದ ಸಿಎಂ ಯೋಗಿ ಆದಿತ್ಯನಾಥ್ ಅವರು ಜಾರಿಗೆ ತಂದಿರುವ ಕಠಿಣ ಕಾನೂನು ನಮ್ಮ ರಾಜ್ಯದಲ್ಲೂ ಜಾರಿಯಾಗಬೇಕಿದೆ ಎಂದು ಆಗ್ರಹಿಸಿದರು.

ಹುಬ್ಬಳ್ಳಿಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಅಂಜಲಿ ಕೊಲೆ ಪ್ರಕರಣಕ್ಕೆ ಸರ್ಕಾರವೇ ನೇರ ಕಾರಣ. ಪೊಲೀಸರ ನಿರ್ಲಕ್ಷವೇ ಈ ಅನಾಹುತಕ್ಕೆ ಕಾರಣ. ನೇಹಾ ಹಿರೇಮಠ್ ಕೊಲೆಯ ಬಳಿಕ ಮತ್ತೆ ಇದೇ ರೀತಿಯ ಕೃತ್ಯ ನಡೆದಿದೆ.ಯಾರೇ ಆಗಲಿ ತೊಂದರೆ ಅಂತ ಬಂದಾಗ ನ್ಯಾಯ ಕೊಡಿಸಬೇಕು. ಉತ್ತರ ಪ್ರದೇಶದ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ತಂದಿರುವ ಕಾನೂನು ಇಲ್ಲಿಯೂ ತರಬೇಕು. ಅಂಜಲಿಯದ್ದು ಬಡ ಕುಟುಂಬ ಅವರಿಗೆ ಮನೆ ಕೊಡಬೇಕು. ಕುಟುಂಬದ ಒಬ್ಬ ಸದಸ್ಯನಿಗೆ ಸರ್ಕಾರಿ ನೌಕರಿ ನೀಡಬೇಕು. ಅಂಜಲಿ ಕುಟುಂಬದವರಿಗೆ ಸೂಕ್ತ ರಕ್ಷಣೆ ಕೊಡಬೇಕು.ಅಂಜಲಿ ಸಾವಿಗೆ ನ್ಯಾಯ ಸಿಗುವವರೆಗೂ ಹೋರಾಟ ಮಾಡಲಾಗುತ್ತದೆ ಎಂದು ಅಂಬಿಗೇರ ಚೌಡಯ್ಯ ಪೀಠದ ಶಾಂತಭೀಷ್ಮ ಚೌಡಯ್ಯ ಮಹಾಸ್ವಾಮಿಗಳು ತಿಳಿಸಿದರು.

 

 

 

                        

                          

 

Leave a Reply

Your email address will not be published. Required fields are marked *