Share this news

ಕಾರ್ಕಳ: ಕಾರ್ಕಳದ ಡಾ ಟಿ ಎಂ ಎ ಪೈ ರೋಟರಿ ಆಸ್ಪತ್ರೆಯಲ್ಲಿ ಶುಕ್ರವಾರ (ಜೂ. 28)ರಂದು ಕಿವಿ, ಮೂಗು ಹಾಗೂ ಗಂಟಲು ತಪಾಸಣಾ ಶಿಬಿರ ಆಯೋಜಿಸಲಾಗಿದೆ. ಶಿಬಿರವು ಬೆಳಿಗ್ಗೆ ಗಂಟೆ 9:30 ರಿಂದ ಸಂಜೆ 5ರ ವರೆಗೆ ಕಾರ್ಕಳದ ಡಾ ಟಿ ಎಂ ಎ ಪೈ ರೋಟರಿ ಆಸ್ಪತ್ರೆಯ ಇ.ಏನ್.ಟಿ ಓ ಪಿ ಡಿ ಯಲ್ಲಿ ನಡೆಯಲಿದೆ.

ಕಿವಿ ಮತ್ತು ಗಂಟಲು ನೋವು, ಅಲರ್ಜಿ ಸಂಬAಧಿತ ಶೀತ ಮತ್ತು ಕೆಮ್ಮು, ತಲೆ ಸುತ್ತುವಿಕೆ, ಮೂಗು ಕಟ್ಟುವುದು, ಕಿವಿ ಅಥವಾ ಮೂಗಿನಲ್ಲಿ ರಕ್ತಸ್ರಾವ, ಟಾನ್ಸಿಲ್ ಮತ್ತು ಥೈರಾಯಿಡ್ ಸಮಸ್ಯೆ, ಮತ್ತು ಇತರ ಯಾವುದೇ ಕಿವಿ, ಮೂಗು, ಗಂಟಲು ಸಮಸ್ಯೆ ಉಳ್ಳವರು ಶಿಬಿರದಲ್ಲಿ ಭಾಗವಹಿಸಬಹುದು. ವೈದ್ಯರ ಸಮಾಲೋಚನೆಯು ಉಚಿತವಾಗಿದ್ದು, ಅಗತ್ಯವುಳ್ಳವರಿಗೆ ರಕ್ತ ಪರೀಕ್ಷೆ ಮತ್ತು ಓ ಪಿ ಡಿ ಕಾರ್ಯವಿಧಾನ (ಪ್ರೊಸೀಜರ್ ) ಮತ್ತು ಶಸ್ತ್ರಚಿಕಿತ್ಸೆಯನ್ನು ರಿಯಾಯಿತಿ ದರದಲ್ಲಿ ಮಾಡಲಾಗುವುದು. ಮೊದಲು ನೋಂದಾಯಿಸಿದ 50 ಜನರಿಗೆ ಮಾತ್ರ ಅವಕಾಶ. ಹೆಚ್ಚಿನ ಮಾಹಿತಿ ಮತ್ತು ನೋಂದಾವಣೆಗೆ ದೂರವಾಣಿ ಸಂಖ್ಯೆ: 9731601150 ಅಥವಾ 08258 230583 ಸಂಪರ್ಕಿಸಲು ಕೋರಲಾಗಿದೆ.

 

 

                        

                          

 

 

 

 

 

                        

                          

 

 

 

 

Leave a Reply

Your email address will not be published. Required fields are marked *