ಕಾರ್ಕಳ: ಕಾರ್ಕಳ ತಾಲೂಕು ಬೆಳ್ಮಣ್ ಗ್ರಾಮದ ಜಂತ್ರ ಎಂಬಲ್ಲಿ ಮನೆಯೊಂದರ ಬೀಗ ಮುರಿದು ಚಿನ್ನಾಭರಣಗಳನ್ನು ದರೋಡೆಗೈದಿರುವ ಘಟನೆ ನಡೆದಿದೆ.
ಜ್ಯೂಲಿಯಾನ ಮಥಾಯಸ್ ಎಂಬವರು ವಿದೇಶದಲ್ಲಿದ್ದು, ಜಂತ್ರದಲ್ಲಿರುವ ಅವರ ಮನೆಯಲ್ಲಿ ದರೋಡೆ ನಡೆದಿದೆ. ಜುಲೈ.28 ರಿಂದ ಆಗಸ್ಟ್.10 ರ ಮಧ್ಯಾವಧಿಯಲ್ಲಿ ಜ್ಯೂಲಿಯಾನ ಮಥಾಯಸ್ ಅವರ ಮನೆಯ ಮುಂಬಾಗಿಲು ಮತ್ತು ಹಿಂಬಾಗಿಲನ ಬೀಗವನ್ನು ಮುರಿದು ಅವರು ತಮ್ಮ ಮನೆಯ ಅಡುಗೆ ಕೋಣೆಯ ಸ್ಟೀಲಿನ ಡಬ್ಬದಲ್ಲಿ ಇರಿಸಿದ್ದ ಸುಮಾರು 15 ಗ್ರಾಂ ತೂಕದ, ಅಂದಾಜು 60,000/- ರೂ. ಮೌಲ್ಯದ 6 ಜೋಡಿ ವಿವಿಧ ಡಿಸೈನ್ ಇರುವ ಕಿವಿಯ ಚಿನ್ನದ ಸಣ್ಣ ಓಲೆಗಳನ್ನು ದರೋಡೆಗೈದಿದ್ದಾರೆ.
ಈ ಕುರಿತು ಕಾರ್ಕಳ ಗ್ರಾಮಾಂತರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.















`
