ಕಾರ್ಕಳ : ಕಾರ್ಕಳದ ನಿಟ್ಟೆಯಲ್ಲಿ ಬಸ್ಸಿನಿಂದ ಬಿದ್ದು ಕಾಲೇಜ್ ವಿದ್ಯಾರ್ಥಿಯೋರ್ವ ಮೃತಪಟ್ಟ ದಾರುಣ ಘಟನೆ ಬುಧವಾರ ಸಂಭವಿಸಿದೆ.
ಮಾಳ ಗ್ರಾಮದ ಹುಕ್ರಟ್ಟೆಯ ಜನಿತ್ ಶೆಟ್ಟಿ (19) ಮೃತ ವಿದ್ಯಾರ್ಥಿ. ಜನಿತ್ ನಿಟ್ಟೆ ವಿದ್ಯಾಸಂಸ್ಥೆಯಲ್ಲಿ ದ್ವಿತೀಯ ವರ್ಷದ ಬಿಎಸ್ಸಿ ವಿದ್ಯಾಭ್ಯಾಸ ಮಾಡುತ್ತಿದ್ದು, ಇಂದು ಬೆಳಿಗ್ಗೆ ಕಾರ್ಕಳದಿಂದ ಮಂಗಳೂರಿಗೆ ಹೋಗುವ ಖಾಸಗಿ ಬಸ್ಸಿನಲ್ಲಿ ಕಾಲೇಜಿಗೆ ಹೋಗುತ್ತಿದ್ದ ವೇಳೆ ಈ ಘಟನೆ ನಡೆದಿದೆ.
ಬಸ್ ಚಲಿಸುತ್ತಿದ್ದ ವೇಳೆ ಆಯತಪ್ಪಿ ಬಸ್ಸಿನಿಂದ ಕೆಳಗೆ ಎಸೆಯಲ್ಪಟ್ಟಿದ್ದು ಕೆಳಕ್ಕೆ ಬಿದ್ದ ಆತನ ಮೈ ಮೇಲೆ ಬಸ್ಸಿನ ಹಿಂಬದಿಯ ಚಕ್ರ ಹರಿದ ಪರಿಣಾಮ ಗಂಭೀರ ಗಾಯಗೊಂಡಿದ್ದ.
ಕೂಡಲೇ ಜನಿತ್ ನನ್ನು ಗಾಜ್ರಿಯಾ ಆಸ್ಪತ್ರೆಗೆ ಕರೆದೊಯ್ದಿದ್ದು, ಅಲ್ಲಿಂದ ಹೆಚ್ಚಿನ ಚಿಕಿತ್ಸೆಗಾಗಿ ಮಣಿಪಾಲ ಕೆ.ಎಂ.ಸಿ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆದರೆ ಚಿಕಿತ್ಸೆ ಫಲಿಸದೆ ಜನಿತ್ ಕೊನೆಯುಸಿರೆಳೆದಿದ್ದಾರೆ.
























`
