Share this news

ಧಾರವಾಡ : ಕ್ರಿಶ್ಚಿಯನ್ ಶಿಕ್ಷಣ ಸಂಸ್ಥೆಗಳು ದಸರಾ ಹಬ್ಬಕ್ಕೆ ರಜೆ ನೀಡದೇ ಶಿಕ್ಷಣ ಇಲಾಖೆಯ ನಿಯಮಾವಳಿ ಉಲ್ಲಂಘಿಸಿದ್ದಾರೆ ಎಂದು ಶ್ರೀರಾಮ ಸೇನೆ ಮುಖಂಡ ಮುತಾಲಿಕ್ ಆರೋಪಿಸಿದ್ದಾರೆ.

ದಸರಾ ರಜೆಯನ್ನು ಸರ್ಕಾರ ವು ಕರ್ನಾಟಕದಲ್ಲಿ ಅಧಿಕೃತವಾಗಿ ಘೋಷಣೆ ಮಾಡಿದೆ. ಆದರೆ ಕ್ರಿಶ್ಚಿಯನ್ ಶಾಲೆಗಳಲ್ಲಿ ದಸರಾ ರಜೆ ಉಲ್ಲಂಘನೆ ಆಗುತ್ತಿವೆ. ಕ್ರಿಶ್ಚಿಯನ್ ಶಾಲೆಗಳು ನಡೆಯುತ್ತಿವೆ. ಪರೀಕ್ಷೆಗಳನ್ನು ನಡೆಸುತ್ತಿದ್ದಾರೆ.ಹಿಂದೂ ಸಂಸ್ಕೃತಿ ಅಪಮಾನ, ಅವಮಾನ, ಅವಹೇಳನ ಮಾಡುವ ಪ್ರವೃತ್ತಿ ಇದು ಎಂದು ಮುತಾಲಿಕ್ ಆಕ್ರೋಶ ವ್ಯಕ್ತಪಡಿಸಿದರು.

ರಾಷ್ಟ್ರೀಯತೆ ಮತ್ತು ನಮ್ಮ ಸಂಪ್ರದಾಯದ ಕಡೆಗಣಿಸುತ್ತ ಬಂದಿದ್ದಾರೆ.ಅವರ ಶಿಕ್ಷಣ ಸಂಸ್ಥೆಗಳಲ್ಲಿ ಅಂಬೇಡ್ಕರ್, ಗಾಂಧೀಜಿ ಫೋಟೋ ಕೂಡ ಇಡುವುದಿಲ್ಲ. ರಾಷ್ಟ್ರೀಯತೆ ಹಿನ್ನೆಲೆಯಲ್ಲಿ ವಿಷ ಬೀಜ ಬಿತ್ತುವ ಪ್ರಯತ್ನ ಮಾಡುತ್ತಿದ್ದಾರೆ.

ಬಳೆ, ಕುಂಕುಮ ಧರಿಸುವಂತಿಲ್ಲ, ಹೂವು ಮೂಡಿಯುವಂತಿಲ್ಲ. ಕಾಲ್ಗೆಜ್ಜೆ ಹಾಕುವಂತಿಲ್ಲ ಅನ್ನುತ್ತಾರೆ. ಹಿಂದೂಗಳ ಆಚರಣೆಯನ್ನು ಅವಮಾನಿಸುವ ಪ್ರಯತ್ನ ನಿರಂತರವಾಗಿ ನಡೆದಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು.

ಇದು ನಾಡಹಬ್ಬ ದಸರಾ. ಮನೆಯಲ್ಲಿ ಪೂಜೆ ಮಾಡೋ ವೇಳೆ ಪರೀಕ್ಷೆ ಇಟ್ಟಿದ್ದಾರೆ. ಸರ್ಕಾರದ ಆಜ್ಞೆ ಉಲ್ಲಂಘನೆ ಮಾಡಿದ್ದಾರೆ. ಈ ಅವಧಿಯಲ್ಲಿ ಶಾಲೆ ನಡೆಸಿರುವವರ ಮಾನ್ಯತೆ ರದ್ದು ಮಾಡಬೇಕು. ಅನುದಾನ ವಾಪಸ ಪಡೆಯಬೇಕು. ಸಂಬoಧಿಸಿದವರ ಬಂಧನ ಮಾಡಬೇಕು. ಕ್ರಿಶ್ಚಿಯನ್ ಶಾಲೆಗಳಲ್ಲಿ ಇರೋದು ಹೆಚ್ಚು ಹಿಂದೂಗಳೇ ಬ್ರಿಟಿಷ್ ಕಾಲದ ಈ ರಜೆ ಪದ್ಧತಿ ಹೋಗಬೇಕು ಎಂದು ಆಗ್ರಹಿಸಿದರು.

ಇನ್ನು ಹುಬ್ಬಳ್ಳಿ ದತ್ತ ಮೂರ್ತಿ ಭಗ್ನ ವಿಚಾರವಾಗಿ ಆಕ್ರೋಶ ವ್ಯಕ್ತಪಡಿಸಿ, ಇದು ರಾಕ್ಷಸಿ ಕೃತ್ಯ, ತಪ್ಪಿತಸ್ಥರ ಬಂಧನ ಆಗಬೇಕು. ಪೊಲೀಸರು ಕಠಿಣ ಕ್ರಮಕೈಗೊಳ್ಳಬೇಕು.ಯಾರೇ ಮಾಡಿದರೂ ಅವರಿಗೆ ದತ್ತಾತ್ರೇಯ ಶಾಪ ಕೊಡ್ತಾರೆ. ಆ ಕೃತ್ಯ ಮಾಡಿದವರು ಸರ್ವನಾಶ ಆಗುತ್ತಾರೆ ಎಂದರು.

 

 

Leave a Reply

Your email address will not be published. Required fields are marked *