
ಕಾರ್ಕಳ, ಫೆ.15: ಸರಕಾರದ ಮಹತ್ವಾಕಾಂಕ್ಷೆ ಯೋಜನೆಯಲ್ಲಿ ಒಂದಾದ ಕಂದಾಯ ಇಲಾಖೆಯ ಹಕ್ಕುಪತ್ರ ದರ್ಕಾಸ್ತು ಮಂಜೂರಾತಿ ಪ್ರಕರಣದ ಅತ್ಯುತ್ತಮ ಪೋಡಿ (ಪ್ಲಾಟಿಂಗ್ )ಯೋಜನೆಯನ್ನು ಯಶಸ್ವಿಯಾಗಿ ಅನುಷ್ಠಾನಗೊಳಿಸುವಲ್ಲಿ ಕಾರ್ಕಳ ಕಂದಾಯ ಇಲಾಖೆ ಅತ್ಯುತ್ತಮ ಸಾಧನೆ ಮಾಡಿದೆ.
ರಾಜ್ಯದ 236 ತಾಲೂಕುಗಳ ಪೈಕಿ 15 ತಾಲೂಕುಗಳು ಪೋಡಿ ಆಂದೋಲನದಲ್ಲಿ ಉತ್ತಮವಾಗಿ ಕಾರ್ಯನಿರ್ವಹಿಸಿವೆ. ಈ ಪೈಕಿ ಕಾರ್ಕಳ ತಾಲೂಕು ರಾಜ್ಯದಲ್ಲಿ 6ನೇ ಸ್ಥಾನಗಳಿಸಿ ಉಡುಪಿ ಜಿಲ್ಲೆಯಲ್ಲಿ ಎರಡನೇ ಸ್ಥಾನದಲ್ಲಿ ಗುರುತಿಸಿಕೊಂಡಿದೆ.
ಪೋಡಿಯಲ್ಲಿ ಹೆಚ್ಚಿನ ಪ್ರಗತಿ ಸಾಧಿಸಲು ಕಾರಣರಾದ ಕಾರ್ಕಳ ತಾಲೂಕುತಹಸೀಲ್ದಾರ್ ಪ್ರದೀಪ್ ಆರ್ ಅವರಿಗೆ ಕಂದಾಯ ಆಯುಕ್ತರು ಅಭಿನಂದನೆ ಸಲ್ಲಿಸಿದ್ದಾರೆ.
ತಾಲೂಕಿನಲ್ಲಿ 2251 ಸರ್ವೆ ನಂಬರ್ ಗಳ ಪೈಕಿ 7578 ಖಾತೆದಾರರಿಂದ ಯಾವುದೇ ದಾಖಲೆಗಳನ್ನು ಪಡೆಯದೇ ಕೇವಲ ತಂತ್ರಾಂಶದ ಮೂಲಕ ಅನುಬಂಧ 1 ನೀಡಿರುವ ಹಿನ್ನೆಲೆಯಲ್ಲಿ ಕಂದಾಯ ಅಧಿಕಾರಿಗಳ ಸೇವೆಯನ್ನು ಗುರುತಿಸಿ ಪ್ರಶಸ್ತಿ ಹಾಗೂ ಅಭಿನಂದನಾ ಪತ್ರ ನೀಡಲಾಗಿದೆ.

.
.
.
.
.
.
.
.
.
.
