
ಕಾರ್ಕಳ, ಫೆ.22: ಸನಾತನ ಧರ್ಮದ ಮೌಲ್ಯಗಳು ಶಾಶ್ವತ. ನಮ್ಮಲ್ಲಿ ದೈವಭಕ್ತಿ ಜಾಗೃತವಾಗಬೇಕು.ಈ ನಿಟ್ಟಿನಲ್ಲಿ ನಾಗಮಂಡಲೋತ್ಸವದಂತಹ ಧಾರ್ಮಿಕ ಕಾರ್ಯಕ್ರಮಗಳು ಇನ್ನಷ್ಟು ನಡೆಯುವಂತಾಗಲಿ ಎಂದು ಅದಮಾರು ಮಠದ ಈಶಪ್ರಿಯತೀರ್ಥ ಶ್ರೀಗಳು ಹೇಳಿದರು.
ಅವರು ಮುನಿಯಾಲಿನ ಗೋಧಾಮದಲ್ಲಿ ಶನಿವಾರ ನಡೆದ ಏಕಪವಿತ್ರ ನಾಗಮಂಡಲೋತ್ಸವದ ಅಂಗವಾಗಿ ನಡೆದ ಧಾರ್ಮಿಕ ಸಭಾ ಕಾರ್ಯಕ್ರಮದಲ್ಲಿ ಆಶೀರ್ವಚನ ನೀಡಿ, ನಾಗಾರಾಧನೆ ಎಂದರೆ ಪ್ರಕೃತಿಯ ಆರಾಧನೆ. ಪ್ರಕೃತಿಯಿಂದ ಪ್ರಕೃತಿಗೆ ಎನ್ನುವ ಧ್ಯೇಯ ವಾಕ್ಯದೊಂದಿಗೆ ನಡೆಯುತ್ತಿರುವ ನಾಗಮಂಡಲದಿಂದ ಸಮಾಜಕ್ಕೆ ಪರಿಸರ ಸಂರಕ್ಷಣೆಯ ಸಂದೇಶ ನೀಡುತ್ತಿರುವ ರಾಮಕೃಷ್ಣ ಅಚಾರ್ ಅವರ ಕಾರ್ಯ ಅಭಿನಂದನೀಯ ಎಂದರು.
ಸುಬ್ರಹ್ಮಣ್ಯ ಮಠದ ವಿದ್ಯಾಪ್ರಸನ್ನ ಶ್ರೀಪಾದರು ಆಶೀರ್ವಚನ ನೀಡಿ, ಪಕೃತಿಯ ಆರಾಧನೆಯೇ ಶ್ರೇಷ್ಠ ಪೂಜೆ,ಸಾಧಕರ ಸಿದ್ಧಿಯ ಫಲವೇ ಸನಾತನ ಧರ್ಮದ ಮೂಲ. ನಾಗಾರಾಧನೆಯಿಂದ ತುಳುನಾಡು ಸಮೃದ್ಧವಾಗಿದೆ ಎಂದರು.
ಈ ಸಂದರ್ಭದಲ್ಲಿ ಶಾಸಕ ಸುನಿಲ್ ಕುಮಾರ್, ಖ್ಯಾತ ಅಂಕಣಕಾರ್ತಿ, ಆಧ್ಯಾತ್ಮಿಕ ಚಿಂತಕಿ ರೂಪಾ ಅಯ್ಯರ್,ಉದ್ಯಮಿ
ಎಸ್.ಎಸ್ ನಾಯಕ್, ಕಾಪು ಶಾಸಕ ಗುರ್ಮೆ ಸುರೇಶ್ ಶೆಟ್ಟಿ,ಕಾಪು ವಾಸುದೇವ ಶೆಟ್ಟಿ, ಕಟಪಾಡಿ ಆನೆಗುಂದಿ ಮಹಾಸಂಸ್ಥಾನ ಸರಸ್ವತಿ ಪೀಠದ ಅಧ್ಯಕ್ಷ ಶ್ರೀಧರ ಆಚಾರ್, ವಡೇರಹೋಬಳಿ ಮುಂತಾದವರು ಉಪಸ್ಥಿತರಿದ್ದರು.
ನಾಗಮಂಡಲೋತ್ಸವದ ಕಾರ್ಯಾಧ್ಯಕ್ಷ
ರಾಜೇಶ್ವರಿ ಪಿಯು ಕಾಲೇಜು ಅಧ್ಯಕ್ಷ ದೇವಿಪ್ರಸಾದ್ ಶೆಟ್ಟಿ ಸಾಣೂರು ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು.
ಶ್ರೀಕಾಂತ್ ಶೆಟ್ಟಿ ಸ್ವಾಗತಿಸಿದರು.
ದಾಮೋದರ ಆಚಾರ್ ಕಾರ್ಯಕ್ರಮ ನಿರೂಪಿಸಿದರು.
ಸಭಾ ಕಾರ್ಯಕ್ರಮದ ಬಳಿಕ ವಿದ್ವಾನ್ ಕುಮಾರಗುರು ತಂತ್ರಿಯವರ ನೇತೃತ್ವದಲ್ಲಿ ಏಕಪವಿತ್ರ ನಾಗಮಂಡಲೋತ್ಸವ ಧಾರ್ಮಿಕ ಕಾರ್ಯಗಳು ಜರುಗಿದವು.
ಪ್ರಕೃತಿ ಆರಾಧನೆಯ ದ್ಯೋತಕವಾಗಿ ಬಂದ ಎಲ್ಲಾ ಭಕ್ತಾದಿಗಳಿಗೆ ಅಡಿಕೆ ಸಸಿಗಳು ಹಾಗೂ ಮಲ್ಲಿಗೆ ಗಿಡಗಳನ್ನು ವಿತರಿಸಲಾಯಿತು.

.
.
.
.
.
.
.
.
.
.
