
ಉಡುಪಿ,ಫೆ.23 : ವಾಹನಗಳ ಸಂಚಾರದ ನಡುವೆಯೇ ಯುವಕನೋರ್ವ ರಸ್ತೆಯಲ್ಲೇ ಮೈ ಮೇಲೆ ಪೆಟ್ರೋಲ್ ಸುರಿದುಕೊಂಡು ಬೆಂಕಿ ಹಚ್ಚಿಕೊಳ್ಳಲು ಯತ್ನಿಸಿದ ಆಘಾತಕಾರಿ ಘಟನೆ ಉಡುಪಿ ನಗರದ ಕಲ್ಸಂಕ ಜಂಕ್ಷನ್ ನಲ್ಲಿ ಸಂಭವಿಸಿದೆ. ಪೆಟ್ರೋಲ್ ಮೈಮೇಲೆ ಸುರಿದುಕೊಂಡು ರಂಪಾಟ ನಡೆಸುತ್ತಿದ್ದ ಯುವಕ ಕೈಯಲ್ಲಿದ್ದ ಪೆಟ್ರೋಲ್ ಬಾಟಲಿಯನ್ನು ಸ್ಥಳೀಯ ಸಂಚಾರಿ ಪೊಲೀಸರ ಕಸಿದುಕೊಂಡ ಹಿನ್ನಲೆಯಲ್ಲಿ ಭಾರಿ ಅನಾಹುತ ತಪ್ಪಿದಂತಾಗಿದೆ.
ಮೈಮೇಲೆ ಪೆಟ್ರೋಲ್ ಮೈ ಮೇಲೆ ಸುರಿದುಕೊಂಡು ಆತ್ಮಹತ್ಯೆಗೆ ಯತ್ನಿಸಿರುವ ವ್ಯಕ್ತಿ ಗದಗ ಮೂಲದವನು ಎಂದು ತಿಳಿದುಬಂದಿದೆ. ರಸ್ತೆಯಲ್ಲಿ ಯುವಕನ ಹುಚ್ಚಾಟಕ್ಕೆ ಕೆಲ ಹೊತ್ತು ಭಯದ ವಾತಾವರಣ ನಿರ್ಮಾಣವಾಗಿತ್ತು. ಪೆಟ್ರೋಲ್ ಬಾಟಲ್ ಅನ್ನು ವ್ಯಕ್ತಿ ಕೈಯಲ್ಲಿ ಹಿಡಿದುಕೊಂಡು ಬಂದಿದ್ದ ಹಲವು ಬಾರಿ ಪೆಟ್ರೋಲ್ ಬಾಟಲಿಯನ್ನು ಸಂಚಾರಿ ಪೊಲೀಸರು ಕಸಿದುಕೊಂಡಿದ್ದಾರೆ. ಆದರೆ ಮತ್ತೆ ಬಾಟಲಿಯಲ್ಲಿ ಪೆಟ್ರೋಲ್ ತಂದು ಯುವಕ ಮೈ ಮೇಲೆ ಸುರಿದುಕೊಂಡಿದ್ದಾನೆ.
ಗAಡ ಹೆಂಡತಿ ಜಗಳದಿಂದ ನೊಂದ ಯುವಕ ಆತ್ಮಹತ್ಯೆಗೆ ಯತ್ನಿಸಿರುವ ಶಂಕೆ ವ್ಯಕ್ತವಾಗಿದೆ. ಯುವಕನನ್ನು ಉಡುಪಿ ನಗರ ಪೊಲೀಸರು ವಶಕ್ಕೆ ಪಡೆದಿದ್ದಾರೆ. ಪೊಲೀಸರ ಸಮಯ ಪ್ರಜ್ಞೆಗೆ ಸಾರ್ವಜನಿಕರಿಂದ ಮೆಚ್ಚುಗೆ ವ್ಯಕ್ತವಾಗಿದ್ದು, ಆತ್ಮಹತ್ಯೆಗೆ ಯತ್ನಿಸಿದ ಯುವಕನಿಗೆ ಬುದ್ದಿಮಾತು ಹೇಳಿ ಆತನ ಊರಿಗೆ ಕಳುಹಿಸಲು ಪೊಲೀಸರು ವ್ಯವಸ್ಥೆ ಮಾಡಿದ್ದಾರೆ.

.
.
.
.
.
.
.
.
.
.
