
ಕಾರ್ಕಳ,ಏ.18: ಅಖಿಲ ಕರ್ನಾಟಕ ಜನಜಾಗೃತಿ ವೇದಿಕೆ ಮಿಯ್ಯಾರು ವಲಯದ ಜನಜಾಗೃತಿ ಸಭೆಯು ವಲಯಾಧ್ಯಕ್ಷರಾದ ಜಯರಾಮ್ ಬಂಗೇರ ಉಪಸ್ಥಿತಿಯಲ್ಲಿ ಮಿಯ್ಯಾರು ವಲಯ ಕಚೇರಿಯಲ್ಲಿ ನಡೆಯಿತು. ನೂತನ ವಲಯ ಅಧ್ಯಕ್ಷರಾಗಿ ಶಶಿಧರ್ ಕುಲಾಲ್ ಅವರನ್ನು ಸರ್ವಾನುಮತದಿಂದ ಆಯ್ಕೆಗೊಳಿಸಲಾಯಿತು.
ಸಭೆಯಲ್ಲಿ ಸಮಿತಿ ಸದಸ್ಯರಾದ ಕೆ.ಕೆ.ದೇವಾಡಿಗ, ಸತ್ಯೇಂದ್ರ ನಾಯಕ್, ಕಿಶೋರ್ ಶೆಟ್ಟಿ, ವಲಯದ ಮೇಲ್ವಿಚಾರಕ ದಿನೇಶ್ ಹೆಗ್ಡೆ, ಸೇವಾಪ್ರತಿನಿಧಿಗಳು ಹಾಗೂ ವಿ ಎಲ್ ಇ ಅನುಷಾ ಶೆಟ್ಟಿ ಉಪಸ್ಥಿತರಿದ್ದರು.



.
.
.
.
.
.
.
.
.
.
