
ದಕ್ಷಿಣ ಕನ್ನಡ ಏ. 22: ಮಂಗಳೂರಿನ ಉರ್ವ ಠಾಣೆಯಲ್ಲಿ ASI ಆಗಿದ್ದ ಐತಪ್ಪ ಎಂಬವರ ಮೇಲೆ ರಾಡ್ ನಿಂದ ಹಲ್ಲೆ ನಡೆಸಿ ಹತ್ಯೆಗೆ ಯತ್ನಿಸಿದ ಪ್ರಕರಣದಲ್ಲಿ ಇಬ್ಬರು ಆರೋಪಿಗಳ ಅಪರಾಧ ಸಾಬೀತಾಗಿದೆ. ಶಿಕ್ಷೆ ಪ್ರಮಾಣ ಇನ್ನಷ್ಟೇ ಪ್ರಕಟವಾಗಬೇಕಿದೆ ಎಂದು ನಗರ ಪೊಲೀಸ್ ಕಮಿಷನರ್ ಸುಧೀರ್‌ಕುಮಾರ್ ರೆಡ್ಡಿ ತಿಳಿಸಿದ್ದಾರೆ.
ಹತ್ಯೆ ಯತ್ನ ಪ್ರಕರಣದ ಆರೋಪಿಗಳಾದ ಸುಲೈಮಾನ್ ಅಲಿಯಾಸ್ ಸಮೀರ್(38) ಹಾಗೂ ಮೊಹಮ್ಮದ್ ನಿಯಾಝ್(29) ಆರೋಪ ಸಾಬೀತಾಗಿದ್ದು, ಅಪರಾಧಿಗಳಿಗೆ ಶಿಕ್ಷೆ ಇನ್ನಷ್ಟೆ ಪ್ರಕಟವಾಗಬೇಕಿದೆ.
ASI ಐತಪ್ಪ ಅವರು ಕಳೆದ 2017ರ ಏ.5 ರಂದು ಮುಂಜಾನೆ ಲೇಡಿ ಹಿಲ್ ನಲ್ಲಿ ಗಸ್ತಿನಲ್ಲಿದ್ದ ಸಂದರ್ಭದಲ್ಲಿ ಬೈಕಿನಲ್ಲಿ ಬಂದ ಕುಶಾಲನಗರ ಸುಲೈಮಾನ್ ಅಲಿಯಾಸ್ ಸಮೀರ್ ಮತ್ತು ಮೊಹಮ್ಮದ್ ನಿಯಾಜ್ ಮಎಂಬವರು ಐತಪ್ಪ ಅವರ ತಲೆಗೆ ರಾಡ್ ನಿಂದ ಬಲವಾಗಿ ಹೊಡೆದು ಪರಾರಿಯಾಗಿದ್ದರು. ಆಗಿನ ಕಮಿಷನರ್‌ಆಗಿದ್ದ ಎಂ. ಚಂದ್ರಶೇಖರ್‌ಅವರ ನಿರ್ದೇಶನದಂತೆ ಆರೋಪಿಗಳ ವಿರುದ್ಧ ಕೊಲೆಯತ್ನ ಪ್ರಕರಣ ದಾಖಲಿಸಲಾಗಿತ್ತು.
ಈ ಘಟನೆ ಬಳಿಕ ಎರಡೇ ದಿನದಲ್ಲಿ ಇಬ್ಬರು ಆರೋಪಿಗಳ ಬಂಧನವಾಗಿತ್ತು.
ಇದಾದ ಬಳಿಕ ಜಾಮೀನು ಪಡೆದು ಹೊರಬಂದ ಸುಲೈಮಾನ್ ವಿದೇಶದಲ್ಲಿ ತಲೆ ಮರೆಸಿಕೊಂಡಿದ್ದು ಆತನ ಪತ್ತೆಗೆ ಇಂಟರ್‌ಪೋಲ್ ಮೂಲಕ ರೆಡ್ ಕಾರ್ನರ್ ನೋಟಿಸ್ ಜಾರಿಗೊಳಿಸಲಾಗಿದೆ.ಇನ್ನೋರ್ವ ಆರೋಪಿ ಮೊಹಮ್ಮದ್ ನಿಯಾಝ್ ನ್ಯಾಯಾಲಯದ ವಿಚಾರಣೆಗೆ ಹಾಜರಾಗುತ್ತಿದ್ದ.
ನ್ಯಾಯಾಲಯ ಈತನನ್ನು ದೋಷಿ ಎಂದು ಪರಿಗಣಿಸಿ ತೀರ್ಪು ನೀಡಿದ್ದು, ಶಿಕ್ಷೆ ಪ್ರಮಾಣ ಇನ್ನಷ್ಟೇ ಪ್ರಕಟಿಸಬೇಕಾಗಿದೆ.


.
.
.
.
.
.
.
.
.
.

ಕಾರ್ಕಳ, ಏ. 20: ಕಾರ್ಕಳ ತಾಲೂಕು ಮರ್ಣೆ ಗ್ರಾಮದಲ್ಲಿ ವ್ಯಕ್ತಿಯೊಬ್ಬರು ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡಿದ್ದಾರೆ.ಆನಂದ ಸೆರ್ವೆಗಾರ್ (65ವ) ಆತ್ಮಹತ್ಯೆ ಮಾಡಿಕೊಂಡ ದುರ್ದೈವಿ.
ಅವರು ಕಳೆದ 15 ವರ್ಷಗಳಿಂದ ಮರ್ಣೆ ಗ್ರಾಮದ ವಸಂತ ಶೆಟ್ಟಿಯವರ ಕುಂಠಿನಿ ಮನೆ ಎಂಬಲ್ಲಿ ಕೂಲಿ ಕೆಲಸ ಮಾಡಿಕೊಂಡಿದ್ದರು.ವಿಪರೀತ ಮದ್ಯಪಾನ ಮಾಡುವ ಚಟ ಹೊಂದಿದ್ದ ಅವರು ಅದೇ ಕಾರಣಕ್ಕೆ ಮನನೊಂದು ನಿನ್ನೆ(ಏ.19) ರಾತ್ರಿ ಮನೆಯ ಮುಂಭಾಗದ ಮಾವಿನ ಮರಕ್ಕೆ ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡಿದ್ದಾರೆ.
ಈ ಕುರಿತು ಅಜೆಕಾರು ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.



.
.
.
.
.
.
.
.
.
.
