
ಮಣಿಪಾಲ,ಏ.24: ಮಣಿಪಾಲದ ರಜತಾದ್ರಿಯಲ್ಲಿರುವ ಉಡುಪಿ ಜಿಲ್ಲಾಧಿಕಾರಿಯವರ ಕಚೇರಿಯ ಆವರಣದಲ್ಲಿ ಮಾವಿನ ಹಣ್ಣು ಕೊಯ್ಯಲು ಮರ ಹತ್ತಿದ ನೌಕರ ವಿದ್ಯುತ್ ಶಾಕ್ ತಗುಲಿ ದಾರುಣವಾಗಿ ಮೃತಪಟ್ಟ ಘಟನೆ ಶುಕ್ರವಾರ ಬೆಳಗ್ಗೆ ಸಂಭವಿಸಿದೆ.
ಡಿಸಿ ಕಚೇರಿಯಲ್ಲಿ ಗ್ರಾಮ ಸಹಾಯಕನಾಗಿ ಕರ್ತವ್ಯ ನಿರ್ವಹಿಸುತ್ತಿದ್ದ ಸದಾನಂದ ಶೇರಿಗಾರ್ (52) ಎಂಬವರು ಮೃತಪಟ್ಟ ದುರ್ದೈವಿ.
ಸದಾನಂದ ಶೇರಿಗಾರ್ ಅವರು ಕಬ್ಬಿಣದ ದೋಟಿಯಿಂದ ಮಾವಿನ ಹಣ್ಣು ಕೊಯ್ಯಲು ಹೋದ ವೇಳೆ ಮೇಲಿನಿಂದ ಹಾದುಹೋಗಿದ್ದ ಹೈಟೆನ್ಷನ್ ವಯರ್ ಗೆ ದೋಟಿ ತಗುಲಿದ ಪರಿಣಾಮವಾಗಿ ವಿದ್ಯುತ್ ಪ್ರವಹಿಸಿ ಸ್ಥಳದಲ್ಲೇ ಮೃತಪಟ್ಟಿದ್ದಾರೆ. ವಿದ್ಯುತ್ ಶಾಕ್ ನಿಂದ ಅವರ ಮೃತ ದೇಹ ಮರದ ಟೊಂಗೆಯಲ್ಲಿ ಸಿಲುಕಿಕೊಂಡಿತ್ತು.ಬಳಿಕ ವಿದ್ಯುತ್ ನಿಲುಗಡೆಗೊಳಿಸಿ ಮೃತದೇಹವನ್ನು ಇಳಿಸಿ ಶವಾಗಾರಕ್ಕೆ ರವಾನಿಸಲಾಗಿದೆ.


.
.
.
.
.
.
.
.
.
.
.
.
.
.
.
.
.
.
.
.
