
ಕಾರ್ಕಳ,ಏ.24:ಇನ್ಸ್ಟಾಗ್ರಾಂ ಖಾತೆ ಮೂಲಕ ಪರಿಚಯವಾದ ವ್ಯಕ್ತಿಯೊಬ್ಬ ಬೇರೆಬೇರೆ ಕಾರಣ ನೀಡಿ ತನ್ನ ಖಾತೆಗೆ ಲಕ್ಷಾಂತರ ರು. ಹಣ ವರ್ವಾವಣೆ ಮಾಡಿಸಿಕೊಂಡು ವಂಚನೆ ಎಸಗಿರುವ ಪ್ರಕರಣ ಕಾರ್ಕಳದಲ್ಲಿ ಬೆಳಕಿಗೆ ಬಂದಿದೆ.
ಕಾರ್ಕಳ ತಾಲೂಕು ನಲ್ಲೂರು ಗ್ರಾಮದ ಗಣೇಶ್ ಆಚಾರ್ಯ ಎಂಬವರಿಗೆ 2024ರ ಜುಲೈ 23ರಂದು ಇಸ್ಟಾಗ್ರಾಂ ಮೂಲಕ ಸುಜನ್ ಶೆಟ್ಟಿ ಸಿದ್ದಾಪುರ ಎಂಬ ಹೆಸರಿನಲ್ಲಿ ಪರಿಚಯ ಮಾಡಿಕೊಂಡ ವ್ಯಕ್ತಿಯೊಬ್ಬ ತನಗೆ ಕಾಲೇಜಿಗೆ ಹೋಗಲು 200 ರೂ. ಹಣ ಬೇಕೆಂದು ಒತ್ತಾಯಿಸಿ ಆತನ ಕೆನರಾ ಬ್ಯಾಂಕ್ ಖಾತೆಗೆ ಗೂಗಲ್ ಪೇ ಮೂಲಕ ಹಣ ಹಾಕಿಸಿಕೊಂಡಿದ್ದ. ಆ ಬಳಿಕ ಗಣೇಶ್ ಆಚಾರ್ಯ ಅವರಿಗೆ ಕರೆ ಮಾಡಿ ತನಗೆ ಕಾಲೇಜಿಗೆ ಹಣ ಕಟ್ಟಲು, ಅನಾರೋಗ್ಯದ ಬಗ್ಗೆ , ಲ್ಯಾಪ್‌ಟಾಪ್ ರಿಪೇರಿ ಮಾಡಲು , ಕೃಷಿ ಸಾಲದ ಹಣ ಕಟ್ಟಲು ಹಣ ಬೇಕು ಎಂದು ಬೇರೆ ಬೇರೆ ಕಾರಣ ನೀಡಿ ಹಣ ಪಡೆದಿದ್ದು ಅಲ್ಲದೇ ಪಡೆದ ಹಣವನ್ನು ವಾಪಾಸು ಕೊಡಲು ಬ್ಯಾಂಕ್ ಖಾತೆ ಸರಿಪಡಿಸಬೇಕಾದ ಕಾರಣ ಹಣ ಬೇಕೆಂದು ನಂಬಿಸಿ 24/07/2024 ರಿಂದ 04/04/2026 ರವರೆಗೆ ಹಂತಹAತವಾಗಿ 25,66,000/ ರೂ ಹಣವನ್ನು ತನ್ನ ಖಾತೆಗೆ ವರ್ಗಾವಣೆ ಮಾಡಿಸಿಕೊಂಡಿದ್ದು, ಹಣವನ್ನು ವಾಪಾಸು ನೀಡದೇ ವಂಚನೆ ಎಸಗಿದ್ದಾನೆ ಎಂದು ಗಣೇಶ್ ಆಚಾರ್ಯ ದೂರು ನೀಡಿದ್ದು, ಕಾರ್ಕಳ ಗ್ರಾಮಾಂತರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.


.
.
.
.
.
.
.
.
.
.
.
.
.
.
.
.
.
.
.
.
