
ಕಾರ್ಕಳ, ಏ.25: ಪಂಡಿತ್ ದೀನದಯಾಳ್ ಉಪಾಧ್ಯಾಯ ಪ್ರಶಿಕ್ಷಣ ವರ್ಗ 2026 ರ ಅಂಗವಾಗಿ ಭಾರತೀಯ ಜನತಾ ಪಾರ್ಟಿ ಕಾರ್ಕಳ ಮಂಡಲವು ಪಕ್ಷದ ಕಾರ್ಯಕರ್ತರಿಗಾಗಿ ಎರಡು ದಿನಗಳ ಪ್ರಶಿಕ್ಷಣವರ್ಗವು ಸಾಣೂರು ರಾಧಾ ಫಾರ್ಮ್ಸ್ ಆವರಣದಲ್ಲಿ ನಡೆಯಿತು.
ಏ.24 ರಿಂದ 25 ರವರೆಗೆ ಎರಡು ದಿನಗಳ ಪ್ರಶಿಕ್ಷಣ ವರ್ಗ ಕಾರ್ಯಕ್ರಮವನ್ನು ಬಿಜೆಪಿ ಹಿರಿಯ ಮುಖಂಡ ಬೋಳ ಶ್ರೀ ಪ್ರಭಾಕರ ಕಾಮತ್ ಉದ್ಘಾಟಿಸಿದರು.
ಕಾರ್ಕಳ ಬಿಜೆಪಿಯ ಮಂಡಲಾಧ್ಯಕ್ಷ ನವೀನ್ ನಾಯಕ್, ಕಾರ್ಕಳ ಶಾಸಕ ವಿ. ಸುನಿಲ್ ಕುಮಾರ್, ಜಿಲ್ಲಾ ಬಿಜೆಪಿ ಪ್ರಧಾನ ಕಾರ್ಯದರ್ಶಿ ಶ್ರೀಕಾಂತ್ ನಾಯಕ್, ಪ್ರಶಿಕ್ಷಣ ವರ್ಗ ಕಾರ್ಕಳ ಮಂಡಲದ ಸಂಯೋಜಕ ರವೀಂದ್ರ ಕುಮಾರ್ ಹಾಗೂ ಪಕ್ಷದ ಪ್ರಮುಖರಾದ ಮಣಿರಾಜ ಶೆಟ್ಟಿ ಉಪಸ್ಥಿತರಿದ್ದರು.
ಪಕ್ಷದ 400 ಕ್ಕೂ ಅಧಿಕ ಮಂದಿ ಕಾರ್ಯಕರ್ತರು ಈ ಕಾರ್ಯಕ್ರಮದಲ್ಲಿ ಭಾಗಿಯಾಗಿದ್ದು ಏ. 25 ರಂದು ಸಮಾರೋಪ ಸಮಾರಂಭ ನಡೆಯಿತು.


.
.
.
.
.
.
.
.
.
.
.
.
.
.
.
.
.
.
.
.
