
ನವದೆಹಲಿ, ಮೇ.04: ಪಂಚರಾಜ್ಯಗಳ ಚುನಾವಣಾ ಫಲಿತಾಂಶ ಇನ್ನು ಕೆಲವೇ ಗಂಟೆಗಳಲ್ಲಿ ಪ್ರಕಟಗೊಳ್ಳಲಿದ್ದು, ಈ ಚುನಾವಣೆಯಲ್ಲಿ ಬಿಜೆಪಿ ಭರ್ಜರಿ ಮುನ್ನಡೆ ಸಾಧಿಸಿದ್ದು ಮೂರು ರಾಜ್ಯಗಳಲ್ಲಿ ಅಧಿಕಾರ ಹಿಡಿಯುತ್ತ ಹೆಜ್ಜೆ ಹಾಕಿದೆ. ಈ ಚುನಾವಣೆಯಲ್ಲಿ ಪಶ್ಚಿಮ ಬಂಗಾಲ ವಿಧಾನಸಭಾ ಚುನಾವಣೆಯಲ್ಲಿ ಬಿಜೆಪಿ ಹಾಗೂ ಟಿಎಂಸಿ ಮದಗಜಗಳಂತೆ ಕಾದಾಡಿದ್ದವು. ಮಮತಾ ಬ್ಯಾನರ್ಜಿ ಅಕ್ರಮ ಬಾಂಗ್ಲಾ ವಲಸಗರ ಪರವಾಗಿದ್ದು, ಪಶ್ಚಿಮ ಬಂಗಾಳ ಟಿಎಂಸಿ ಗೂಂಡಾಗಳ ರಾಜ್ಯವಾಗಿದೆ ಎಂದು ಅಮಿತ್ ಶಾ ಆರೋಪಿಸಿದ್ದರು, ಮಾತ್ರವಲ್ಲದೇ ಬಂಗಾಲದಿAದ ಅಕ್ರಮವಸಿಗಳನ್ನು ನಿರ್ದಯವಾಗಿ ಹೊರಗಟ್ಟಿ ಬಂಗಾಲದ ಜನತೆ ನಿರ್ಭಯವಾಗಿ ಓಡಾಡುವಂತೆ ಮಾಡುವುದಾಗಿ ಬಿಜೆಪಿ ಚುನಾವಣಾ ಪ್ರಚಾರದಲ್ಲಿ ಭರವಸೆ ನೀಡಿತ್ತು.
ಹಾಲಿ ಸಿಎಂ ಮಮತಾ ಬ್ಯಾನರ್ಜಿಗೆ ಸರ್ಕಾರವನ್ನು ಉಳಿಸಿಕೊಳ್ಳುವ ನಿಟ್ಟಿನಲ್ಲಿ ಈ ಚುನಾವಣೆ ಪ್ರತಿಷ್ಠೆಯ ವಿಚಾರವಾಗಿದ್ದು, ಬಿಜೆಪಿಗೆ ಈ ಚುನಾವಣೆ ಅಳಿವು ಉಳಿವಿನ ಕಣವಾಗಿತ್ತು. ಈ ನಿಟ್ಟಿನಲ್ಲಿ ಬಿಜೆಪಿಯ ಚುನಾವಣಾ ಚಾಣಾಕ್ಯ ಅಮಿತ್ ಶಾ ಪಶ್ಚಿಮ ಬಂಗಾಳದಲ್ಲಿ ಬೀಡುಬಿಟ್ಟು ಚುನಾವಣಾ ರಣತಂತ್ರ ಹೆಣೆದ್ದಿದ್ದರು. ಇದೀಗ ಚುನಾವಣಾ ಫಲಿತಾಂಶದಲ್ಲಿ ಬಿಜೆಪಿಗೆ ಸ್ಪಷ್ಟ ಬಹುಮತಸ ಸುಳಿವು ಸಿಕ್ಕಿದ್ದು, ಮಮತಾ ಭದ್ರಕೋಟೆಯನ್ನೇ ಬಿಜೆಪಿ ಛಿದ್ರ ಮಾಡಿದ್ದು, ದೀದಿ ಸರ್ಕಾರದ ಪತನಕ್ಕೆ ಕ್ಷಣಗಣನೆ ಆರಂಭವಾಗಿದೆ.
ಪಶ್ಚಿಮ ಬಂಗಾಲ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷವು ಹೇಳಹೆಸರಿಲ್ಲದಂತೆ ನಾಮಾವಶೇಷವಾಗಿದ್ದು, ಈವರೆಗೂ ಒಂದೇ ಒಂದು ಸ್ಥಾನವನ್ನೂ ಕೂಡ ಪಡೆಯಲು ಸಾಧ್ಯವಾಗಿಲ್ಲ.



.
.
.
.
.
.
.
.
.
.
.
.
.
.
.
.
.
.
.
.
