
ಉಡುಪಿ, ಮೇ.18: ಅಸಹಾಯಕ ಸ್ಥಿತಿಯಲ್ಲಿದ್ದ ಹಿಂದೂ ಮಹಿಳೆಗೆ ಮುಸ್ಲಿಂ ಮಹಿಳೆಯರು ನೆರವು ಕೋರಿ ಉಡುಪಿ ಜಿಲ್ಲಾ ಉಸ್ತುವಾರಿ ಸಚಿವೆ ಲಕ್ಷ್ಮಿ ಹೆಬ್ಬಾಳ್ಕರ್ ಅವರ ಬಳಿ ಕರೆತಂದು ಈ ಪ್ರಕರಣದ ಅಸಲಿಯತ್ತು ಬಹಿರಂಗವಾಗಿದೆ. ಅಸಲಿಗೆ ಬಡ ಹಿಂದೂ ಮಹಿಳೆ ಗಿರಿಜಾ ಶೆಟ್ಟಿಗಾರ್ ಅವರಿಗೆ ನೆರವುನೀಡಲು ಬಂದಿದ್ದ ಮುಸ್ಲಿಂ ಮಹಿಳೆ ಆಕೆಯ ಮಗಳು ಎನ್ನುವ ವಿಚಾರ ಬಯಲಾಗಿದ್ದು, ಆ ಮೂಲಕ ಹಿಂದೂ ಮುಸ್ಲಿಂ ಸೌಹಾರ್ದತೆ ಬಿಂಬಿಸಿ ಆ ಮೂಲಕ ಬಿಜೆಪಿಗೆ ಟಕ್ಕರ್ ಕೊಡಲು ಮುಂದಾಗಿದ್ದ ಸಚಿವರಿಗೆ ಬಿಜೆಪಿ ತಿರುಗೇಟು ನೀಡಿದೆ.
ಘಟನೆಯ ಹಿನ್ನೆಲೆ:
ಉಡುಪಿ ತಾಲೂಕಿನ 80 ಬಡಗಬೆಟ್ಟು ನಿವಾಸಿ ಗಿರಿಜಾ ಶೆಟ್ಟಿಗಾರ್ ಎಂಬ ಬಡ ಹಿಂದೂ ಮಹಿಳೆಗೆ 1989ರಲ್ಲಿ ಸರ್ಕಾರವು 5 ಸೆಂಟ್ಸ್ ನಿವೇಶನ ಮಂಜೂರು ಮಾಡಿ ಹಕ್ಕುಪತ್ರ ನೀಡಿತ್ತು. ಆದರೆ, ಆ ಜಾಗ ರಕ್ಷಿತಾರಣ್ಯ ವ್ಯಾಪ್ತಿಗೆ ಬರುತ್ತದೆ ಎಂದು ಅರಣ್ಯ ಇಲಾಖೆ ಆಕ್ಷೇಪಿಸಿದ್ದರಿಂದ ಅವರಿಗೆ ಸ್ವಂತ ಜಾಗದಲ್ಲಿ ಮನೆ ಕಟ್ಟಿಕೊಳ್ಳಲು ಸಾಧ್ಯವಾಗಿರಲಿಲ್ಲ. ಗಿರಿಜಾ ಶೆಟ್ಟಿಗಾರ್ ಐದು ಸೆಂಟ್ಸ್ ಜಾಗದಲ್ಲಿ ಜೀವನ ಮಾಡಿಕೊಂಡಿದ್ದು, ಭೂಮಿಯ ದಾಖಲೆ ಸಮಸ್ಯೆಯಿಂದಾಗಿ ಮನೆ ಕಟ್ಟಲು ಸಾಧ್ಯವಾಗದೇ ದಾಖಲೆಗಾಗಿ ಸಾಕಷ್ಟು ಅಲೆದಾಟ ನಡೆಸಿದ್ದರು.
ಬಡ ಮಹಿಳೆಯಾಗಿದ್ದರಿಂದ ಭೂಮಿಯ ವಾಸ್ತವ್ಯ ಸಿಗದೇ ಮನೆಯನ್ನೂ ಕಟ್ಟಲಾಗದೇ ಕೂಲಿ ಮಾಡಿಕೊಂಡು ಬಾಡಿಗೆ ಮನೆಯಲ್ಲಿ ವಾಸವಿದ್ದರು. ಕಾನೂನು ಪ್ರಕಾರ, ಭೂಮಿಯ ವಾಸ್ತವ್ಯ ಪಡೆಯಲು ನೆರೆಮನೆಯ ಸಲಹುದ್ದೀನ್ ಕುಟುಂಬಸ್ಥರು ಗಿರಿಜಾ ಅವರನ್ನ ಹಲವು ಅಧಿಕಾರಿಗಳ ಬಳಿಗೆ ಕರೆದೊಯ್ದಿದ್ದಾರೆ. ಆದ್ರೂ ಯಾವುದೇ ಪ್ರಯೋಜನ ಆಗಿಲ್ಲ. ಈಗ ಜಾಗ ಸ್ವಂತದ್ದು ಇದ್ದರೆ ಮನೆ ಕಟ್ಟಿಕೊಡಲು ನೆರವು ಕೊಡುವ ಉದಾರಿಗಳಿದ್ದಾರೆ, ಆದರೆ ಹಕ್ಕುಪತ್ರ ಇದ್ದರೂ ವಾಸ್ತವ್ಯಕ್ಕೆ ಅರಣ್ಯ ಇಲಾಖೆ ಅಡ್ಡಿಯಾಗಿದೆ ಎಂದು ಜಿಲ್ಲಾ ಉಸ್ತುವಾರಿ ಸಚಿವರ ಮೊರೆ ಹೋಗಿದ್ದಾರೆ. ಇದೇವೇಳೆ ಸಚಿವೆ ಹೆಬ್ಬಾಳ್ಕರ್ ಮಾತನಾಡಿ, ಮುಸ್ಲಿಂ ಮಹಿಳೆ ಹಿಂದೂ ಮಹಿಳೆಯ ಸಮಸ್ಯೆಗೆ ಸ್ಪಂದಿಸಿ ಮಾನವೀಯತೆ ತೋರಿದ್ದಾರೆ, ಬಿಜೆಪಿಯವರು ಇದನ್ನು ನೋಡಿ ಕಲಿಯಬೇಕು ಎಂದು ಮಾಧ್ಯಮದವರ ಮುಂದೆ ಹೇಳಿಕೆ ನೀಡಿದ್ದರು. ಇದೀಗ ಸಮಾಜಿಕ ಜಾಲತಾಣಗಳಲ್ಲಿ ಸಿಕ್ಕಾಪಟ್ಟೆ ಟ್ರೋಲ್ ಆಗಿದ್ದಾರೆ,ಯಾಕೆಂದರೆ ಈ ಪ್ರಕರಣದಲ್ಲಿ ಮುಸ್ಲಿಂ ಮಹಿಳೆ ಕಳೆದ 25 ವರ್ಷಗಳ ಹಿಂದೆಯೇ ಹಿಂದೂ ಧರ್ಮ ತೊರೆದು ಇಸ್ಲಾಂ ಧರ್ಮ ಸೇರಿದ್ದಾರೆ ಎಂದು ಬಿಜೆಪಿಗರು ಆರೋಪಿಸಿದ್ದಾರೆ. ಅಲ್ಲದೇ ಸಚಿವೆ ಹೆಬ್ಬಾಳ್ಕರ್ ವಿರುದ್ಧ ಬಿಜೆಪಿ ಮಹಿಳಾ ಘಟಕ ಕಿಡಿಕಾರಿದೆ.
ಉಡುಪಿ ಬಿಜೆಪಿಯವರು ಇದನ್ನು ನೋಡಿ ಸೌಹಾರ್ದತೆ ಕಲಿಯಬೇಕು ಎಂದಿದ್ದ ಹೆಬ್ಬಾಳ್ಕರ್ ಗೆ ಬಿಜೆಪಿ ಮಹಿಳಾ ಮೋರ್ಚಾ ತಿರುಗೇಟು:
ಅಸಹಾಯಕ ವೃದ್ಧ ಮಹಿಳೆ ಹಾಗೂ ಮನವಿ ಮಾಡಿದ ಮುಸ್ಲಿಂ ಮಹಿಳೆ ತಾಯಿ- ಮಗಳು ಎನ್ನುವ ವಿಚಾರ ತಿಳಿಯುತ್ತಿದ್ದಂತೆಯೇ ಇತ್ತ ಉಡುಪಿ ಜಿಲ್ಲಾ ಬಿಜೆಪಿ ಮಹಿಳಾ ಮೋರ್ಚಾ ಸಚಿವೆ ಲಕ್ಷ್ಮಿ ಹೆಬ್ಬಾಳ್ಕರ್ ಅವರಿಗೆ ತಿರುಗೇಟು ನೀಡಿದೆ. ಮಹಿಳಾ ಮೋರ್ಚಾ ಅಧ್ಯಕ್ಷೆ ಸಂಧ್ಯಾ ರಮೇಶ್ ಈ ಕುರಿತು ಮಾತನಾಡಿ, ತಾಯಿಯನ್ನು ಕರೆದುಕೊಂಡು ಬಂದ ಮುಸ್ಲಿಂ ಮಹಿಳೆ ಲಕ್ಷ್ಮಿ ಹೆಬ್ಬಾಳ್ಕರ್ ಅವರನ್ನೇ ಯಾಮಾರಿಸಿದ್ದಾರೆ. ಆಕೆಯ ಕಪಟ ನಾಟಕ ತಿಳಿಯದೇ ಹಿಂದೂ ಮುಸ್ಲಿಂ ಸೌಹಾರ್ದತೆಯ ಪಾಠ ಮಾಡಿದ ಸಚಿವೆ ಅಪಹಾಸ್ಯಕ್ಕೆ ಗುರಿಯಾಗಿದ್ದಾರೆ ಎಂದು ಲೇವಡಿ ಮಾಡಿದ್ದಾರೆ. ಉಡುಪಿಯವರ ಸೌಹಾರ್ದತೆ ಕುರಿತು ಬೆಳಗಾವಿಯಿಂದ ಅತಿಥಿಯಂತೆ ಬಂದುಹೋಗಿ ಅಭಿವೃದ್ದಿ ಮರೆತ ನಿಮ್ಮಿಂದ ಪಾಠ ಕಲಿಯಬೇಕಿಲ್ಲ ಎಂದು ತಿರುಗೇಟು ನೀಡಿದ್ದಾರೆ. ಜಿಲ್ಲೆಯ ಅಭಿವೃದ್ಧಿಗೆ ಎಳ್ಳುನೀರು ಬಿಟ್ಟು ಜನಪ್ರತಿನಿಧಿಗಳ ವಿರುದ್ಧ ಬೇಜವಾಬ್ದಾರಿ ಹೇಳಿಕೆಯನ್ನು ಮುಂದುವರಿಸಿದರೆ ಮುಂದಿನ ದಿನಗಳಲ್ಲಿ ಲಕ್ಷಿö್ಮÃ ಹೆಬ್ಬಾಳ್ಕರ್ ವಿರುದ್ಧ ಉಗ್ರ ಹೋರಾಟ ನಡೆ¸ಬೇಕಾಗುತ್ತದೆ ಎಂದು ಸಂಧ್ಯಾ ರಮೇಶ್ ಎಚ್ಚರಿಸಿದ್ದಾರೆ.



.
.
.
.
.
.
.
.
.
.
.
.
.
.
.
.
.
.
.
.
