
ಬೆಂಗಳೂರು,ಮೇ.18:ಆನ್ಲೈನ್ ಇ-ಫಾರ್ಮಸಿ ಮಾರಾಟದ ವಿರುದ್ಧ ಅಖಿಲ ಭಾರತ ಕೆಮಿಸ್ಟ್ ಮತ್ತು ಡ್ರಗ್ಗಿಸ್ಟ್ ಅಸೋಸಿಯೇಷನ್ ದೇಶವ್ಯಾಪಿ ಮುಷ್ಕರಕ್ಕೆ ಕರೆ ನೀಡಿದ್ದು, ಇಂದು ಮಧ್ಯರಾತ್ರಿಯಿಂದಲೇ ಬೆಂಗಳೂರು ಸೇರಿ ರಾಜ್ಯಾದ್ಯಂತ ಮೆಡಿಕಲ್ ಶಾಪ್ ಬಂದ್ ಆಗಲಿವೆ. ಈ ಮುಷ್ಕರದಿಂದ ರೋಗಿಗಳು ಔಷಧಕ್ಕಾಗಿ ಪರದಾಡುವ ಸಾಧ್ಯತೆಯಿದ್ದು,ನಿಯಮಿತವಾಗಿ ಔಷಧಿ ಕೊಳ್ಳುವವರು ಇಂದೇ ಖರೀದಿಸಿಟ್ಟುಕೊಳ್ಳುವುದು ಉತ್ತಮ. ಏಕೆಂದರೆ ಇಂದು (ಮೇ 19) ಮಧ್ಯರಾತ್ರಿ 12 ಗಂಟೆಯಿAದ ಮುಂದಿನ 24 ಗಂಟೆಗಳ ಕಾಲ ರಾಜ್ಯಾದ್ಯಂತ ಮೆಡಿಕಲ್ ಶಾಪ್ಗಳು ಬಂದ್ ಆಗುವ ಸಾಧ್ಯತೆಯಿದೆ.
ಅನೇಕ ರಾಜ್ಯಗಳ ರೀಟೇಲ್ ಫಾರ್ಮಸಿ ಸಂಘಟನೆಗಳು ಈ ಬಂದ್ನಲ್ಲಿ ಭಾಗವಹಿಸದಿರಲು ನಿರ್ಧರಿಸಿವೆ. ಹಾಗಾಗಿ, ಔಷಧಗಳ ಲಭ್ಯತೆಗೆ ಯಾವುದೇ ರೀತಿಯ ಧಕ್ಕೆಯಾಗುವುದಿಲ್ಲ ಎಂದು ಸರಕಾರಿ ಮೂಲಗಳು ಮಾಹಿತಿ ನೀಡಿವೆ.



.
.
.
.
.
.
.
.
.
.
.
.
.
.
.
.
.
.
.
.
