
ಕಾರ್ಕಳ,ಮೇ.22: ಸಕ್ಕರೆ ಕಾಯಿಲೆಯಿಂದ ಬಳಲುತ್ತಿದ್ದ ಮದ್ಯವ್ಯಸನಿಯೊಬ್ಬರು ಮಲಗಿದ್ದ ಸ್ಥಿತಿಯಲ್ಲೇ ಮೃತಪಟ್ಟಿದ್ದಾರೆ. ಕೇರಳ ಮೂಲದ ಮಹಮ್ಮದ್ ಕುಂಜು ಎಂಬವರು(42) ಮೃತಪಟ್ಟವರು.
ಕೇರಳದ ತಿರುವನಂತಪುರ ಜಿಲ್ಲೆಯ ಪಣಕ್ಕೋಡು ನಿವಾಸಿ ಮಹಮ್ಮದ್ ಕುಂಜು ಎಂಬವರು ಈದು ಗ್ರಾಮದ ಹೊಸ್ಮಾರು ಎಂಬಲ್ಲಿರುವ ಮಧುಕರ ಶೆಟ್ಟಿ ಮತ್ತು ವಿನು ಕರುಣಾಕರ ರವರ ಜಂಟಿ ಮಾಲಕತ್ವದ ರಬ್ಬರ್ ತೋಟದಲ್ಲಿ ಕಳೆದ 3 ವರ್ಷಗಳಿಂದ ರಬ್ಬರ್ ಟ್ಯಾಪಿಂಗ್ ಮಾಡುತ್ತಿದ್ದರು. ವಿಪರೀತ ಮದ್ಯಪಾನ ಮಾಡುವ ಚಟ ಹೊಂದಿದ್ದ ಮಹಮ್ಮದ್ ಕುಂಜು ಮಧುಮೇಹ ಕಾಯಿಲೆಯಿಂದ ಬಳಲುತ್ತಿದ್ದರು.
ಕಳೆದ ಮೇ 19ರಂದು ಮಂಗಳವಾರ ರಾತ್ರಿ 9:30 ಕ್ಕೆ ತಾವು ಕೆಲಸ ಮಾಡುವ ರಬ್ಬರ್ ತೋಟದಲ್ಲಿರುವ ಶೆಡ್‌ನಲ್ಲಿ ವಿನು ಕರುಣಾಕರ ಇವರ ಜೊತೆಯಲ್ಲಿ ಮಲಗಿದ್ದವರು ಹೊಟ್ಟೆ ನೋವು ಎಂದು ತಿಳಿಸಿದ್ದು, ಈ ಸಮಯ ಜೊತೆಯಲ್ಲಿ ಮಲಗಿದ್ದ ವಿನುಕರುಣಾಕರ ಇವರು ಚಿಕಿತ್ಸೆಗೆ ಹೋಗುವ ಎಂದು ತಿಳಿಸಿದ್ದು, ಸ್ವಲ್ಪ ಹೊತ್ತಿನಲ್ಲಿ ಹೊಟ್ಟೆ ನೋವು ಕಡಿಮೆಯಾಗಿರುವುದಾಗಿ ತಿಳಿಸಿದ್ದರಿಂದ, ಪುನಃ ಮಲಗಿದ್ದು, ರಾತ್ರಿ 11:30ರ ಸುಮಾರಿಗೆ ವಿನು ಕರುಣಾಕರವರು ಶೆಡ್‌ನ ರೂಮ್ ನ ಲೈಟ್ ಉರಿಸಿ ನೋಡಿದಾಗ ಮಹಮ್ಮದ್ ಕುಂಜು ರವರನ್ನು ಮಾತನಾಡಿಸಿದಾಗ ಅವರಿಂದ ಯಾವುದೇ ಪ್ರತಿಕ್ರಿಯೆ ಬಾರದೇ ಇದ್ದುದರಿಂದ ತಕ್ಷಣವೇ 108 ಆಂಬ್ಯುಲೆನ್ಸ್ ವಾಹನಕ್ಕೆ ಪೋನ್ ಮಾಡಿ ತಿಳಿಸಿದ್ದು, ಆಂಬುಲೆನ್ಸ್ ಬರುವ ಮೊದಲೇ ಮಹಮ್ಮದ್ ಕುಂಜು ಮೃತಪಟ್ಟಿದ್ದಾರೆ. ಈ ಕುರಿತು ಕಾರ್ಕಳ ಗ್ರಾಮಾಂತರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ



.
.
.
.
.
.
.
.
.
.
.
.
.
.
.
.
.
.
.
.
