
ಕಾರ್ಕಳ, ಮೇ.23: ಯಾವುದೇ ಹಣಕಾಸು ಸಂಸ್ಥೆ ಸಧೃಡವಾಗಿ ಮುನ್ನಡೆಯಬೇಕಾದರೆ ಸಮರ್ಥ ಆಡಳಿತ ಮಂಡಳಿ ದಕ್ಷತೆ ಹಾಗೂ ಬದ್ದತೆಯಿಂದ ಕಾರ್ಯನಿರ್ವಹಿಸಬೇಕು. ಈ ನಿಟ್ಟಿನಲ್ಲಿ ಕಾರ್ಕಳದ ಆಶಯ ವಿವಿಧೋದ್ದೇಶ ಸಹಕಾರ ಸಂಘವು ಉತ್ತಮವಾಗಿ ಕಾರ್ಯನಿರ್ವಹಿಸುತ್ತಿದ್ದು, ಸಾಲಗಾರರು, ಠೇವಣಿದಾರರು ಹಾಗೂ ಸಮಸ್ತ ಗ್ರಾಹಕರ ಸಹಕಾರ, ಸಂಸ್ಥೆಯ ಸಿಬ್ಬಂದಿಗಳ ಶ್ರಮದಿಂದ ನಮ್ಮ ಸಹಕಾರಿ ಸಂಸ್ಥೆ ಉತ್ತಮ ಸಾಧನೆ ಮಾಡಲು ಸಾಧ್ಯವಾಗಿದೆ ಎಂದು ಸಂಘದ ಅಧ್ಯಕ್ಷ ಸುವ್ರತ್ ಕುಮಾರ್ ಹೇಳಿದರು.
ಅವರು ಆಶಯ ವಿವಿಧೋದ್ದೇಶ ಸಹಕಾರಿ ಸಂಘದ ಸ್ಥಳಾಂತರ ಕಾರ್ಯಕ್ರಮದ ಪ್ರಯುಕ್ತ ಕಾರ್ಕಳದ ಪ್ರೈಮ್ ಸಿಟಿ ಸೆಂಟರ್ ನಲ್ಲಿ ಶುಕ್ರವಾರ ನಡೆದ ಗ್ರಾಹಕರ ಸಮ್ಮಿಲನ ಕಾರ್ಯಕ್ರಮದಲ್ಲಿ ಮಾತನಾಡಿ,ಸಮಾಜದ ಜೊತೆಗೆ ಬೆರೆಯಬೇಕು ಎನ್ನುವ ಉದ್ದೇಶದಿಂದ ಕೆಲವೇ ಸದಸ್ಯರಿಂದ ಆರಂಭಗೊಂಡ ಈ ಸಂಸ್ಥೆ ಇಂದು ಸುಮಾರು 3 ಸಾವಿರಕ್ಕೂ ಅಧಿಕ ಸದಸ್ಯರನ್ನು ಒಳಗೊಂಡಿದ್ದು, ಕಳೆದ 2022ರಲ್ಲಿ 40 ಕೋಟಿ ಇದ್ದ ವಹಿವಾಟು ಇಂದು ಠೇವಣಿದಾರ ,ಸಾಲಗಾರರ ಸಹಕಾರ, ಸಿಬಂದಿ ಶ್ರಮದಿಂದ 300 ಕೋ.ರೂ. ವ್ಯವಹಾರ ನಡೆಸಿದೆ ಎಂದರು. ಸಾಲ ವಸೂಲಾತಿಯಲ್ಲಿ ಶೇ.100ರ ಸಾಧನೆಗೆ ಸಿಬಂದಿ ಪರಿಶ್ರಮವೂ ಕೂಡ ಅಷ್ಟೇ ಮುಖ್ಯವಾಗಿದೆ. ಸಂಸ್ಥೆಯ ಕಾರ್ಯದಕ್ಷತೆಯಿಂದಾಗಿ ಜನಸಾಮಾನ್ಯರ ಪಿಗ್ಮಿ ಠೇವಣಿದಾರರು ಇವರ ವಿಶ್ವಾಸ ಗಳಿಸಿದೆ. ಮುಂದಿನ ದಿನಗಳಲ್ಲಿ ಕೋರ್ ಬ್ಯಾಂಕಿಂಗ್ ಹಾಗೂ ಡಿಜಿಟಲ್ ಬ್ಯಾಂಕಿಂಗ್ ವ್ಯವಸ್ಥೆ ಅಳವಡಿಸಬೇಕು ಎನ್ನುವ ಆಶಯ ನಮ್ಮದಾಗಿದೆ ಎಂದರು.
ಮುಖ್ಯ ಅತಿಥಿಯಾಗಿ ಭುವನೇಂದ್ರ ಕಾಲೇಜಿನ ಪ್ರಾಂಶುಪಾಲ ಮಂಜುನಾಥ ಕೋಟ್ಯಾನ್ ಮಾತನಾಡಿ, ಜನಸಾಮಾನ್ಯರು ರಾಷ್ಟ್ರೀಕೃತ ಬ್ಯಾಂಕುಗಳಿಗಿಂತ ಸಹಕಾರಿ ಸಂಸ್ಥೆಗಳ ಬಗ್ಗೆ ಹೆಚ್ಚಿನ ವಿಶ್ವಾಸ ಇರಿಸಿದ್ದಾರೆ. ಯಾಕೆಂದರೆ ಜನರಿಗೆ ಉತ್ತಮ ಸೇವೆ ನೀಡುವ ಸಿಬ್ಬಂದಿಗಳ ಸೇವಾ ಮನೋಭಾವ ಸಹಕಾರಿ ಸಂಘಗಳಲ್ಲಿ ಮಾತ್ರ ಕಾಣಲು ಸಾಧ್ಯ ಎಂದರು. ಸಂಸ್ಥೆಯ ಸಾಧನೆ ಹಿಂದೆ ನಿರ್ದೇಶಕ ಮಂಡಳಿ ಹಾಗೂ ಸಿಬ್ಬಂದಿಗಳ ಬದ್ದತೆ,ಶ್ರಮ ಅಡಗಿದೆ. ಆಶಯ ಸಂಸ್ಥೆಯ ಮುಂದೆಯೂ ಉತ್ತರೋತ್ತರ ಯಶಸ್ಸು ಸಾಧಿಸಲಿ ಎಂದು ಶುಭಹಾರೈಸಿದರು.
ಜ್ಞಾನಸುಧಾ ಶಿಕ್ಷಣ ಸಂಸ್ಥೆ ಅಧ್ಯಕ್ಷ ಡಾ. ಸುಧಾಕರ್ ಶೆಟ್ಟಿ ಮಾತನಾಡಿ, ಆಶಯ ಸೊಸೈಟಿ ಎಲ್ಲರ ಆಶಯ ಈಡೇರಿಸುವ ಸಂಸ್ಥೆಯಾಗಿದೆ. ಸಾಲ ಪಡೆದವರು ಅಷ್ಟೇ ಬದ್ದತೆಯಿಂದ ಸಾಲ ತೀರಿಸುವ ಗುಣ ಹೊಂದಬೇಕುಸಾಲ ತೆಗೆಸುಕೊಂಡು ನಾವು ಬೆಳೆಯಬೇಕು, ಸಾಲ ಕೊಟ್ಟ ಬ್ಯಾಂಕ್ ಸಹ ಬೆಳೆಯಬೇಕು. ವಹಿವಾಟು ಬೆಳೆದಾಗ ಸಮಾಜದಲ್ಲಿ ಉದ್ಯೋಗ ಸೃಷ್ಟಿಯಾಗುತ್ತದೆ. ಆಶಯ ಸಂಸ್ಥೆಯೂ ಎತ್ತರಕ್ಕೇರಲಿ ಎನ್ನುವ ಆಶಯ ವ್ಯಕ್ತಪಡಿಸಿದರು.
ಉದ್ಯಮಿ ಬೋಳ ಪ್ರಭಾಕರ ಕಾಮತ್ ಮಾತನಾಡಿ, ಸಹಕಾರಿ ಸಂಘವು ಉತ್ತಮ ವ್ಯವಹಾರ ಮೂಲಕ ಜನರ ಪ್ರೀತಿಯ ಸಂಸ್ಥೆಯಾಗಿ ಗುರುತಿಸಿಕೊಂಡಿದೆ ಎಂದರು. ಸಂಸ್ಥೆಯ ಉಪಾಧ್ಯಕ್ಷ ರೋಬರ್ಟ್ ರೊನಾಲ್ಡ್ ಫೆರ್ನಾಂಡಿಸ್, ವೀಣಾ ಡಿಸೋಜಾ ದಂಪತಿ, ಬೈಂದೂರು ಶಾಸಕ ಗುರುರಾಜ್ ಗಂಟಿಹೊಳೆ ಶುಭ ಹಾರೈಸಿದರು.
ನಿರ್ದೇಶಕ ಮೋಹನ್ ಪಡಿವಾಳ ಸ್ವಾಗತಿಸಿದರು. ಆರ್ . ಜೆ. ಪ್ರಸನ್ನ ಕಾರ್ಯಕ್ರಮ ನಿರೂಪಿಸಿ ವಂದಿಸಿದರು.



.
.
.
.
.
.
.
.
.
.
.
.
.
.
.
.
.
.
.
.
