
ನವದೆಹಲಿ,ಮೇ.23: ವಿಭಿನ್ನ ಶೈಲಿಯ ಮೂಲಕ ಯುವ ಜನತೆಯ ಪಾಲಿಗೆ ಟ್ರೆಂಡಿAಗ್ ಆಗಿ, ಭಾರಿ ಸದ್ದು ಮಾಡುತ್ತಿರುವ ‘ಕಾಕ್ರೋಚ್ ಜನತಾ ಪಾರ್ಟಿ’ಯ ಅಧಿಕೃತ ಇನ್‌ಸ್ಟಾಗ್ರಾಮ್ ಖಾತೆಯು ಹ್ಯಾಕ್ ಆಗಿದೆ. ಸಾಮಾಜಿಕ ಜಾಲತಾಣಗಳಲ್ಲಿ ಸದಾ ಸಕ್ರಿಯವಾಗಿದ್ದುಕೊಂಡು ದೊಡ್ಡ ಮಟ್ಟದ ಫಾಲೋವರ್ಸ್ ಹೊಂದಿದ್ದ ಈ ಖಾತೆಯನ್ನು ಅಪರಿಚಿತರು ಹ್ಯಾಕ್ ಮಾಡಿದ್ದು, ಈ ಘಟನೆಯಿಂದ ಸ್ವತಃ ಸಂಸ್ಥಾಪಕ ಅಭಿಜೀತ್ ದೀಪ್ಕೆ ಕಂಗಾಲಾಗಿದ್ದಾರೆ.
ಈ ಕುರಿತು ಕಾಕ್ರೋಚ್ ಜನತಾ ಪಾರ್ಟಿಯ ಸ್ಥಾಪಕ ಅಭಿಜೀತ್ ತಮ್ಮ ಅಧಿಕೃತ ‘ಎಕ್ಸ್’ (ಟ್ವಿಟರ್) ಖಾತೆಯಲ್ಲಿ ಮಾಹಿತಿ ಹಂಚಿಕೊAಡಿದ್ದು, ನಮ್ಮ ಅಧಿಕೃತ ಇನ್‌ಸ್ಟಾಗ್ರಾಮ್ ಖಾತೆಯನ್ನು ಹ್ಯಾಕ್ ಮಾಡಲಾಗಿದೆ. ಇದರಿಂದಾಗಿ ನಮಗೆ ಅಕೌಂಟ್‌ಗೆ ಲಾಗಿನ್ ಆಗಲು ಸಾಧ್ಯವಾಗುತ್ತಿಲ್ಲ ಮತ್ತು ಯಾವುದೇ ಹೊಸ ಪೋಸ್ಟ್ಗಳನ್ನು ಹಾಕಲು ತೊಂದರೆಯಾಗುತ್ತಿದೆ ಎಂದು ಬೇಸರ ವ್ಯಕ್ತಪಡಿಸಿದ್ದಾರೆ. ಖಾತೆ ಹ್ಯಾಕ್ ಆದ ಬೆನ್ನಲ್ಲೇ ತಮ್ಮ ಬೆಂಬಲಿಗರಿಗೆ ಧೈರ್ಯ ತುಂಬಿರುವ ಅಭಿಜೀತ್, ಇಂತಹ ಸಣ್ಣಪುಟ್ಟ ಅಡೆತಡೆಗಳಿಗೆ ನಾವು ಕೃತಕವಾಗಿ ಸೃಷ್ಟಿಸಿದ ಸವಾಲುಗಳಿಗೆ ಹೆದರುವುದಿಲ್ಲ ಎಂದು ಸ್ಪಷ್ಟಪಡಿಸಿದ್ದಾರೆ. “ನಮ್ಮ ಅಧಿಕೃತ ಇನ್‌ಸ್ಟಾಗ್ರಾಮ್ ಖಾತೆಯನ್ನು ಹ್ಯಾಕ್ ಮಾಡಲಾಗಿದ್ದರೂ, ನಮ್ಮ ಸಿದ್ದಾಂತ ಮತ್ತು ನಮ್ಮ ಹೋರಾಟ ಎಂದಿಗೂ ನಿಲ್ಲುವುದಿಲ್ಲ. ಅದು ನಿರಂತರವಾಗಿ ಮುಂದುವರೆಯುತ್ತದೆ,” ಎಂದು ಅವರು ದೃಢವಾಗಿ ಹೇಳಿದ್ದಾರೆ.
ಖಾತೆಯನ್ನು ಮರಳಿ ಪಡೆಯಲು ತಾಂತ್ರಿಕ ತಂಡದೊAದಿಗೆ ಈಗಾಗಲೇ ಪ್ರಯತ್ನಗಳನ್ನು ಆರಂಭಿಸಲಾಗಿದೆ ಎಂದು ತಿಳಿದುಬಂದಿದೆ. ಸಾಮಾಜಿಕ ಮಾಧ್ಯಮದಲ್ಲಿ ಲಕ್ಷಾಂತರ ಜನರನ್ನು ತಲುಪುತ್ತಿದ್ದ ಈ ಪೇಜ್ ಹ್ಯಾಕ್ ಆಗಿರುವುದು ಅದರ ಬೆಂಬಲಿಗರು ಮತ್ತು ಫಾಲೋವರ್ಸ್ಗೆ ತೀವ್ರ ನಿರಾಶೆ ಉಂಟುಮಾಡಿದೆ. ಸೈಬರ್ ವಂಚಕರ ಈ ಕೃತ್ಯದ ವಿರುದ್ಧ ನೆಟ್ಟಿಗರು ಆಕ್ರೋಶ ಹೊರಹಾಕುತ್ತಿದ್ದಾರೆ.
ಜಾಗತಿಕ ಮಟ್ಟದಲ್ಲಿ ಭಾರೀ ಸಂಚಲನ ಮೂಡಿಸಿದ್ದ ಕಾಕ್ರೋಚ್ ಜನತಾ ಪಾರ್ಟಿ ಪ್ರಮುಖವಾಗಿ ಕೇಂದ್ರ ಸರ್ಕಾರ ಹಾಗೂ ಬಿಜೆಪಿ ವಿರುದ್ಧ ಯುವಜನತೆ ಒಂದಾಗುವAತೆ ಸಂದೇಶ ನೀಡಿತ್ತು. ಇದಲ್ಲದೇ ಕಾಕ್ರೋಚ್ ಜನತಾ ಪಾರ್ಟಿಗೆ ಕಾಂಗ್ರೆಸ್, ಆಮ್ ಆದ್ಮಿ ಪಕ್ಷ ಸೇರಿದಂತೆ ಸಾಕಷ್ಟು ವಿರೋಧ ಪಕ್ಷಗಳು ಬೆಂಬಲಿಸಿದ್ದವು. ಇದು ದೇಶ ವಿರೋಧಿಗಳ ಕೃತ್ಯ ಎಂದು ಕೇಂದ್ರ ಸರ್ಕಾರ ಹಾಗೂ ಬಿಜೆಪಿಗರಿಂದ ಆಕ್ರೋಶ ವ್ಯಕ್ತವಾಗಿತ್ತು.



.
.
.
.
.
.
.
.
.
.
.
.
.
.
.
.
.
.
.
.
