
ಉಡುಪಿ, ಮೇ.26:ಮುಸ್ಲಿಮರ ಬಕ್ರೀದ್ ಹಬ್ಬದ ಸಂದರ್ಭದಲ್ಲಿ ಅಕ್ರಮ ಗೋಸಾಗಾಟ ಹಾಗೂ ಗೋ ಹತ್ಯೆಯ ವಿರುದ್ಧ ಸೂಕ್ತ ಕ್ರಮಕ್ಕೆ ಒತ್ತಾಯಿಸಿ ಹಿಂದೂ ಜಾಗರಣ ವೇದಿಕೆಯ ವತಿಯಿಂದ ಉಡುಪಿ ಜಿಲ್ಲಾ ಹೆಚ್ಚುವರಿ ಎಸ್ಪಿಗೆ ಮನವಿ ಸಲ್ಲಿಸಲಾಯಿತು.
ಈಗಾಗಲೇ ಉಡುಪಿ ಜಿಲ್ಲೆಯಲ್ಲಿ ಅಕ್ರಮ ಗೋಸಾಗಾಟ, ಗೋವುಗಳ ಹತ್ಯೆ ಪ್ರಕರಣಗಳು ನಡೆದಿದ್ದು ಇದರಿಂದ ಹಿಂದೂಗಳ ಧಾರ್ಮಿಕ ಭಾವನೆಗಳಿಗೆ ಅಡ್ಡಿಯಯಾಗುತ್ತಿದೆ. ಗೋವು ಕೇವಲ ಪ್ರಾಣಿಯಲ್ಲ ಅದು ಕಲಿಯುಗದ ಕಾಮಧೇನು, ಹಿಂದೂ ಧರ್ಮದ ಭಕ್ತಿ,ಶ್ರದ್ಧೆಯ ಸಂಕೇತ,ಸಮಸ್ತ ಹೈನುಗಾರರ ಹಾಗೂ ರೈತರ ಜೀವನಾಡಿಯಾಗಿದೆ.
ಬಕ್ರೀದ್ ಹಬ್ಬದ ಹಿನ್ನೆಲೆಯಲ್ಲಿ ಅಕ್ರಮ ಗೋವುಗಳ ಸಾಗಾಟ, ಗೋಹತ್ಯೆ ನಡೆಯುವ ಸಾಧ್ಯತೆಯಿದ್ದು,ಈ ನಿಟ್ಟಿನಲ್ಲಿ ಪೊಲೀಸರು ಕಟ್ಟೆಚ್ಚರ ವಹಿಸಬೇಕು, ಹಿಂದೂಗಳ ಧಾರ್ಮಿಕ ಭಾವನೆಗಳನ್ನು ಕದಡುವ ಪ್ರಯತ್ನ ಮಾಡಿದರೆ ಹಿಂದೂ ಸಮಾಜ ಸಹಿಸಲು ಸಾಧ್ಯವಿಲ್ಲ. ಆದ್ದರಿಂದ ಪೊಲೀಸ್ ಇಲಾಖೆ ಕಾನೂನು ಬಾಹಿರ ಚಟುವಟಿಕೆಗಳಿಗೆ ಆಸ್ಪದ ನೀಡದಂತೆ ಎಚ್ಚರಿಕೆ ವಹಿಸುವಂತೆ ಹಿಂ.ಜಾ.ವೇ ಮುಖಂಡರು ಮನವಿ ಸಲ್ಲಿಸಿದ್ದಾರೆ.
ಈ ಸಂದರ್ಭದಲ್ಲಿ ರಾಜೇಶ್ ಉಚ್ಚಿಲ ಜಿಲ್ಲಾ ಸಂಯೋಜಕ ರತ್ನಾಕರ ಅಮೀನ್, ರಮೇಶ್ ಕಲ್ಲೊಟ್ಟೆ, ಉಮೇಶ್ ಪಕ್ಕಳ, ಉಮೇಶ್ ಸೂಡ ,ನಿಖಿಲ್ ಮಂಚಿ, ಹರೀಶ್ ಬಜಗೋಳಿ ಸುನಿಲ್ ಮುಂತಾದವರು ಉಪಸ್ಥಿತರಿದ್ದರು.



.
.
.
.
.
.
.
.
.
.
.
.
.
.
.
.
.
.
.
.
