
ಕಾರ್ಕಳ,ಜೂ. 04: ವಾಟ್ಸಾಪ್ ಗೆ ತನ್ನ ಸ್ನೇಹಿತರೊಬ್ಬರು ಕಳುಹಿಸಿದ APK ಫೈಲ್ ಓಪನ್ ಮಾಡಿದ ಪರಿಣಾಮವಾಗಿ ವ್ಯಕ್ತಿಯೊಬ್ಬರು ತನ್ನ ಬ್ಯಾಂಕ್ ಖಾತೆಯಿಂದ ಬರೋಬ್ಬರಿ 5.50 ಲಕ್ಷಕ್ಕೂ ಮಿಕ್ಕಿ ಹಣ ಕಳೆದುಕೊಂಡ ಘಟನೆ ಬೆಳಕಿಗೆ ಬಂದಿದೆ.
ಕಾರ್ಕಳ ತಾಲೂಕಿನ ನೀರೆ ಗ್ರಾಮದ ಜಡ್ಡಿನಕಟ್ಟ ನಿವಾಸಿ ವಾಸುದೇವ ಶೆಟ್ಟಿಗಾರ್ ಎಂಬವರು ಹಣ ಕಳೆದುಕೊಂಡವರು. ಅವರಿಗೆ ಕಳೆದ ಎರಡು ದಿನಗಳ ಹಿಂದೆ ಅವರ ವಾಟ್ಸಾಪ್ ನಂಬರಿಗೆ ತನ್ನ ಸ್ನೇಹಿತರೊಬ್ಬರು ಕಳುಹಿಸಿದ ಡಾಕ್ಯುಮೆಂಟ್ ಫೈಲ್ ಓಪನ್ ಮಾಡಿ ಬ್ಯಾಂಕಿಂಗ್ ಆನ್ ಲೈನ್ ವಂಚನೆಗೆ ಒಳಗಾಗಿದ್ದಾರೆ. ಆದರೆ ಸ್ನೇಹಿತನ ವಾಟ್ಸಾಪ್ ಹ್ಯಾಕ್ ಮಾಡಿದ ಖದೀಮರು ಅದರಿಂದ RTO ಚಲನ್ ಎನ್ನುವ APK ಫೈಲ್ ಕಳುಹಿಸಿದ್ದಾರೆ. ಇದನ್ನು ತೆರೆದಾಗ ಅದರ ಮೂಲಕ ಮೊಬೈಲ್ ನಲ್ಲಿರುವ ಎಲ್ಲಾ ಡೇಟಾ ಮಾಹಿತಿ ಕಲೆಹಾಕುವ ಸೈಬರ್ ವಂಚಕರು ವಾಸುದೇವ ಶೆಟ್ಟಿಗಾರ್ ಅವರ ಬ್ಯಾಂಕ್ ಖಾತೆಯನ್ನು ಹ್ಯಾಕ್ ಮಾಡಿ, ಜೂ. 4 ರಂದು ಮಧ್ಯರಾತ್ರಿ ಹಂತ ಹಂತವಾಗಿ 5.63,117 ಹಣವನ್ನು ದೋಚಿದ್ದಾರೆ.
ವಂಚನೆ ವಿಚಾರ ಗಮನಕ್ಕೆ ಬಂದ ತಕ್ಷಣವೇ ವಾಸುದೇವ ಶೆಟ್ಟಿಗಾರ್ ತನ್ನ ಬ್ಯಾಂಕ್ ಖಾತೆಯನ್ನು ಫ್ರೀಜ್ ಮಾಡಿ ಉಳಿದ ಹಣ ವಂಚಕರ ಪಾಲಾಗದಂತೆ ತಡೆದು,ವಂಚನೆ ಕುರಿತು ಕಾರ್ಕಳ ನಗರ ಠಾಣೆಗೆ ದೂರು ನೀಡಿದ್ದಾರೆ.


.
.
.
.
.
.
.
.
.
.
.
.
.
.
.
.
.
.
.
.
