
ಕಾರ್ಕಳ, ಜೂ.09: ಕಾರ್ಕಳ ತಾಲೂಕು ಪಂಚಾಯತಿ ಮಾಜಿ ಸದಸ್ಯ, ಪ್ರಗತಿಪರ ಕೃಷಿಕ ಪ್ರೇಮ್ ಕುಮಾರ್ ಜೈನ್( ಅಣ್ಣಾಜಿ) ಅವರು ನಿಧನರಾಗಿದ್ದು, ಶಾಸಕ ಸುನಿಲ್ ಕುಮಾರ್ ಸಂತಾಪ ಸೂಚಿಸಿದ್ದಾರೆ.
ಧರ್ಮಶ್ರೀ ಹೊಸ್ಮಾರು, ಅಣ್ಣಾಜೇರ್ ಎಂದು ಜನಾನುರಾಗಿಯಾಗಿ, ಯಶಸ್ವಿ ಉದ್ಯಮಿಗಳಾಗಿ,ಕೃಷಿಕರಾಗಿ, ಮಾಜಿ ತಾಲೂಕು ಪಂಚಾಯತ್ ಸದಸ್ಯರಾಗಿ ಹಾಗೂ ಧಾರ್ಮಿಕ ಹಾಗೂ ಶೈಕ್ಷಣಿಕ ಕ್ಷೇತ್ರದಲ್ಲಿ ಅದರಲ್ಲೂ ವಿಶೇಷವಾಗಿ ಧಾರ್ಮಿಕ ಕ್ಷೇತ್ರದಲ್ಲಿ ಉತ್ತಮ ಸಂಘಟಕ ಎಂಬ ಖ್ಯಾತಿ ಪಡೆದ ಪ್ರೇಮ್ ಕುಮಾರ್ ಜೈನ್ ಅವರ ಸೇವೆ ಎಂದೆಂದಿಗೂ ಅವಿಸ್ಮರಣೀಯ.
ಅವರ ಆತ್ಮಕ್ಕೆ ಚಿರಶಾಂತಿ ದೊರಕಲಿ. ಕುಟುಂಬ ವರ್ಗದವರಿಗೆ ಹಾಗೂ ಅಭಿಮಾನಿಗಳಿಗೆ ದುಃಖ ಭರಿಸುವ ಶಕ್ತಿ ಭಗವಂತ ಕರುಣಿಸಲಿ ಎಂದು ಶಾಸಕರಾದ ವಿ.ಸುನಿಲ್ ಕುಮಾರ್ ಸಂತಾಪ ಸೂಚಿಸಿದ್ದಾರೆ.


.
.
.
.
.
.
.
.
.
.
.
.
.
.
.
.
.
.
.
.
