
ಕಾರ್ಕಳ, ಜೂ. 12: ತನ್ನ ಮಗನ ಸಾವಿನ ನೋವಿನಿಂದ ಹೊರಬರಲಾರದೆ, ಮದ್ಯಪಾನದ ಚಟದಿಂದ ಬೇಸತ್ತು ವ್ಯಕ್ತಿಯೊಬ್ಬರು ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡಿದ್ದಾರೆ.
ದುರ್ಗಾ ಗ್ರಾಮದ ತೆಳ್ಳಾರು ಹೊಸಮನೆ ದರ್ಖಾಸು ನಿವಾಸಿ ವಿಶ್ವನಾಥ (55) ಆತ್ಮಹತ್ಯೆ ಮಾಡಿಕೊಂಡವರು.
ಅವರಿಗೆ ವಿಪರೀತ ಮದ್ಯಪಾನದ ಚಟ ಇದ್ದು, ಜೂ. 10 ರಂದು ಮದ್ಯಪಾನ ಮಾಡಿ ಬಂದು ಮನೆಯಲ್ಲಿ ಮಲಗಿದ್ದರು. ಮರುದಿನ ಬೆಳಿಗ್ಗೆ ಪತ್ನಿ ಕೆಲಸಕ್ಕೆ ಹೋಗುವ ವೇಳೆಗೆ ಮನೆಯಲ್ಲಿ ಕುಳಿತಿದ್ದ ವಿಶ್ವನಾಥ್ ಪತ್ನಿ 11.30 ರ ವೇಳೆಗೆ ಮನೆಗೆ ಬಂದಾಗ ಮನೆಯೊಳಗೆ ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡಿದ್ದಾರೆ.
ಅವರ ಮಗ ಮೃತಪಟ್ಟಿದ್ದು ಅದೇ ಕಾರಣಕ್ಕೆ ಮನನೊಂದು, ತನಗಿರುವ ಕುಡಿತದ ಚಟಕ್ಕೆ ಬೇಸತ್ತು ಆತ್ಮಹತ್ಯೆ ಮಾಡಿಕೊಂಡಿದ್ದಾರೆಂದು ಶಂಕಿಸಲಾಗಿದ್ದು, ಈ ಕುರಿತು ಗ್ರಾಮಾಂತರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.


.
.
.
.
.
.
.
.
.
.
.
.
.
.
.
.
.
.
.
.
