Share this news

 

 

 

 

 

 

 

ವರದಿ: ಕರಾವಳಿನ್ಯೂಸ್ ಡೆಸ್ಕ್

ಈ ಬಾರಿ ಮುಂಗಾರು ಆರಂಭದಲ್ಲೇ ಕೈಕೊಟ್ಟಿದ್ದು, ಗದ್ದೆ ಉಳುಮೆ ಮಾಡಿ ಮಳೆಗಾಗಿ ಕಾದಿದ್ದ ರೈತರು ಬಾರದ ಮಳೆಯಿಂದ ಅಕ್ಷರಶಃ ಕಂಗೆಟ್ಟಿದ್ದಾರೆ. ಜೂನ್ ಮೊದಲ ವಾರದ ಮುಂಗಾರು ಕರ್ನಾಟಕಕ್ಕೆ ಆಗಮಿಸಲಿದೆ ಎಂದು ಹವಾಮಾನ ಇಲಾಖೆ ಮಾಹಿತಿ ನೀಡಿ ಇದೀಗ ಬರೋಬ್ಬರಿ ಎರಡು ವಾರಗಳೇ ಕಳೆದರೂ ಇನ್ನೂ ಕೂಡ ಮುಂಗಾರು ಮಳೆಯ ಸುಳಿವೇ ಇಲ್ಲದಂತಾಗಿದೆ.
ಪ್ರಬಲ ಮಾನ್ಸೂನ್ ಮಾರುತಗಳಿಂದ ನಿರಂತರವಾಗಿ ಜಡಿ ಮಳೆ ಸುರಿಯಬೇಕಿದ್ದ ದಿನಗಳಲ್ಲಿ ಆಕಾಶದ ಮೋಡಗಳ ಸುಳಿವೇ ಇಲ್ಲದೇ ಬಿರುಬೇಸಗೆಯಂತೆ ಸುಡುಬಿಸಿಲಿನಿಂದ ಕರೆ,ಬಾವಿ ಹಾಗೂ ಹಳ್ಳಗಳಲ್ಲಿ ಇದ್ದ ಅಲ್ಪಸ್ವಲ್ಪ ನೀರು ಕೂಡ ಬತ್ತಿಹೋಗುತ್ತಿದ್ದರೆ, ಇನ್ನು ಹಲವೆಡೆ ಕುಡಿಯುವ ನೀರಿಗೂ ತತ್ವಾರ ಬಂದಿದೆ. ಸಾಮಾನ್ಯವಾಗಿ ಮೇ ಕೊನೆಯ ವಾರದಲ್ಲಿ ಮುಂಗಾರುಪೂರ್ವ ಮಳೆಯಿಂದ ಬಹುತೇಕ ಕೆರೆ ಬಾವಿಗಳಲ್ಲಿ ಸಾಧಾರಣವಾಗಿ ನೀರಿನ ಮಟ್ಟ ಏರಿಕೆಯಾಗುತ್ತದೆ. ಬಳಿಕ ಜೂನ್ 3ನೇ ವಾರದಲ್ಲಿ ಕೆರೆ ಬಾವಿಗಳು ತುಂಬಿ ಹರಿಯುವುದು ಸರ್ವೇಸಾಮಾನ್ಯ. ಆದರೆ ಈ ಬಾರಿ ಮಾತ್ರ ಕೆರೆ,ಬಾವಿಗಳಲ್ಲಿ ನೀರು ಪಾತಾಳಕ್ಕೆ ಕುಸಿದಿದೆ. ಮಳೆಗಾಲದಲ್ಲೂ ಜನ ಕುಡಿಯುವ ನೀರಿಗಾಗಿ ಅಲೆದಾಡುವ ಪರಿಸ್ಥಿತಿ ನಿರ್ಮಾಣವಾಗಿದೆ.

ಈ ಬಾರಿಯ ಮುಂಗಾರು ಮಳೆಗೆ ಕ್ಷೀಣಿಸಲು ‘ಎಲ್-ನಿನೋ’ ಪ್ರಮುಖ ಕಾರಣವಾಗಿದೆ ಎಂದು ಹವಾಮಾನ ಇಲಾಖೆಯ ವರದಿಯಲ್ಲಿ ತಿಳಿಸಿದೆ. ಜೂನ್ ಮೊದಲ ವಾರವೇ ಕೇರಳಕ್ಕೆ ಮುಂಗಾರು ಮಾರುತಗಳು ಅಪ್ಪಳಿಸಿದರೂ ಮುಂದೆ ಕರಾವಳಿ ತೀರದ ಮಂಗಳೂರು,ಉಡುಪಿ ಜಿಲ್ಲೆಗೆ ಮಾರುಗಳ ಆಗಮನಕ್ಕೆ ಎಲ್-ನಿನೋ ಅಡ್ಡಿಯಾಗಿದೆ. ಎಲ್-ನಿನೋ ಸಕ್ರಿಯವಾಗುವುದರಿಂದ ಭಾರತದಾದ್ಯಂತ ಕಳೆದ ಮೂರು ವರ್ಷಗಳಲ್ಲೇ ಅತ್ಯಂತ ಕನಿಷ್ಠ ಪ್ರಮಾಣದ ಮಳೆ ಬೀಳುವ ಅಪಾಯವಿದೆ. ಜೂನ್‌ನಲ್ಲಿ ಇದರ ಲಕ್ಷಣಗಳು ಗೋಚರಿಸಿದರೂ, ಜುಲೈ, ಆಗಸ್ಟ್ ಮತ್ತು ಸೆಪ್ಟೆಂಬರ್ ತಿಂಗಳುಗಳಲ್ಲಿ ಇದರ ತೀವ್ರತೆ ಅತ್ಯಂತ ಹೆಚ್ಚಿರಲಿದ್ದು, ಹವಾಮಾನ ಇಲಾಖೆಯ ಅಂದಾಜಿನ ಪ್ರಕಾರ ಮಳೆ ಬಹುತೇಕ ಕ್ಷೀಣಿಸುವ ಸಾಧ್ಯತೆಯಿದೆ ಎನ್ನುವ ಆಘಾತಕಾರಿ ಮಾಹಿತಿ ಲಭಿಸಿದೆ.

ಮಳೆಯ ಕೊರತೆಗೆ ಅವ್ಯಾಹತ ಅರಣ್ಯ ನಾಶವೇ ಕಾರಣ!

ಸಾಕಷ್ಟು ಅರಣ್ಯ ಪ್ರದೇಶಗಳು ಇದ್ದಲ್ಲಿ ಮಳೆಯ ಪ್ರಮಾಣ ಹೆಚ್ಚಿರುತ್ತದೆ. ಆದರೆ ಇಂದಿನ ದಿನಗಳಲ್ಲಿ ಅಭಿವೃದ್ಧಿಯ ನೆಪದಲ್ಲಿ ರಸ್ತೆ ಅಗಲೀಕರಣ, ಹೊಸ ಹೊಸ ಯೋಜನೆಗಳಿಗೆ ನಿರಂತರವಾಗಿ ಕಾಡು ಕಡಿದು ನಾಶ ಮಾಡಲಾಗುತ್ತಿದೆ. ಯಥೇಚ್ಚವಾಗಿ ಮರಗಳಿದ್ದ ಪ್ರದೇಶಗಳು ಇಂದು ನಗರಗಳಾಗಿ ಕಾಂಕ್ರೀಟ್ ಕಾಡುಗಳಾಗಿ ಬದಲಾಗುತ್ತಿವೆ. ಅರಣ್ಯ ನಾಶ ಪರಿಣಾಮವಾಗಿ ತಾಪಮಾನ ಏರಿಕೆಯಾಗಿ ಮಳೆಯ ಮೋಡಗಳು ಕಣ್ಮರೆಯಾಗುತ್ತಿವೆ. ಉಷ್ಣಾಂಶ ಏರಿಕೆಯಿಂದ ವಾತಾವರಣದಲ್ಲಿನ ತೇವಾಂಶ ಕಡಿಮೆಯಾಗಿ ಪ್ರಕೃತಿ ಅಸಮತೋಲನದಿಂದ ಕೆಲವೊಮ್ಮೆ ಅಕಾಲಿಕ ಮಳೆ, ಪ್ರವಾಹ, ಬರಗಾಲದಂತಹ ಪರಿಸ್ಥಿತಿ ಉಂಟಾಗುತ್ತದೆ. ಮನುಷ್ಯನ ದುರಾಸೆಗೆ ಪ್ರಕೃತಿ ಮುನಿಸಿಕೊಂಡಿದ್ದು, ನಾವು ಪರಿಸರದ ಮೇಲಿನ ದಬ್ಬಾಳಿಕೆ ನಿಲ್ಲಿಸದಿದ್ದಲ್ಲಿ ಮುಂದೊAದು ದಿನ ಭೂಮಿಯಲ್ಲಿ ಕುಡಿಯಲು ಒಂದು ಹನಿ ನೀರೂ ಇಲ್ಲದ ಪರಿಸ್ಥಿತಿ ಖಂಡಿತವಾಗಿಯೂ ಬಂದೇ ಬರುತ್ತದೆ.

 

 

   

.

 

 

 

 

 

 

 

 

 

 

 

 

 

 

 

 

 

 

 

 

 

.

 

 

 

 

 

 

 

 

 

 

 

 

                 

 

 

 

.

 

 

 

 

 

 

 

 

 

 

 

 

 

 

 

 

 

 

 

 

 

.

 

 

 

 

 

 

 

 

 

 

 

 

 

 

 

 

 

 

 

 

 

 

 

 

 

 

 

 

.

 

 

 

 

 

 

 

 

 

 

 

 

                 

 

 

 

.

 

 

 

 

 

 

 

 

 

 

 

 

 

 

 

 

 

 

 

 

 

.

 

 

 

 

 

 

 

 

 

 

 

 

 

 

 

 

 

 

 

 

 

 

 

 

 

 

 

 

 

 

 

 

.

 

 

 

 

 

 

 

 

 

 

 

 

                 

 

 

 

.

 

 

 

 

 

 

 

 

 

 

 

 

 

 

 

 

 

 

 

 

 

.

 

 

 

 

 

 

                                       

.

 

 

 

 

 

 

 

 

 

 

 

 

 

 

 

 

 

 

 

 

 

.

 

 

 

 

 

 

 

 

 

 

 

 

                 

 

 

 

.

 

 

 

 

 

 

 

 

 

 

 

 

 

 

 

 

 

 

 

 

 

.

 

 

 

 

 

 

 

 

 

 

 

 

 

 

 

 

 

 

 

 

 

 

 

 

 

 

 

 

.

 

 

 

 

 

 

 

 

 

 

 

 

                 

 

 

 

.

 

 

 

 

 

 

 

 

 

 

 

 

 

 

 

 

 

 

 

 

 

.

 

 

 

 

 

 

 

 

 

 

 

 

 

 

 

 

 

 

 

 

 

 

 

 

 

 

 

 

 

 

 

 

.

 

 

 

 

 

 

 

 

 

 

 

 

                 

 

 

 

.

 

 

 

 

 

 

 

 

 

 

 

 

 

 

 

 

 

 

 

 

 

.

 

 

 

 

 

 

 

 

 

Leave a Reply

Your email address will not be published. Required fields are marked *