
ಕಾರ್ಕಳ,ಜೂ.23: ಬೋಳ ಮಲ್ಲಿಗೆ ಗರಡಿ ಎಂಬ ಖ್ಯಾತಿ ಹೊಂದಿರುವ ಬ್ರಹ್ಮಬೈದರ್ಕಳ ಗರಡಿಯಲ್ಲಿ ಚೆನ್ನಯ್ಯ ಪಾತ್ರಿಯಾಗಿ ಸೇವೆ ಸಲ್ಲಿಸುತ್ತಿದ್ದ ಕಲ್ಲೊಟ್ಟೆ ರಮೇಶ್ ಸುವರ್ಣ ಅನಾರೋಗ್ಯದಿಂದ ನಿಧನರಾಗಿದ್ದಾರೆ.
ಬೋಳ ದಿ. ಬಾಬು ಪೂಜಾರಿ ಹಾಗೂ ದಿ. ಅಪ್ಪಿ ಪೂಜಾರ್ತಿಯವರ ಮಗನಾಗಿದ್ದ ರಮೇಶ್ ಸುವರ್ಣರವರು ಬಾಲ್ಯದಿಂದಲೂ ಬ್ರಹ್ಮಬೈದರ್ಕಳ ಗರಡಿಯ ಭಕ್ತರಾಗಿ ಬೋಳ ಮಲ್ಲಿಗೆ ಗರಡಿ, ಕಲ್ಯಾ ಗರಡಿ, ಮುಂಡ್ಕೂರು ಗರಡಿಯಲ್ಲಿ ಚಾಕಿರಿ ಮಾಣಿಯಾಗಿ ನಿಷ್ಠೆಯಿಂದ ಸೇವೆ ಸಲ್ಲಿಸಿದ್ದಾರೆ. ತದನಂತರ ಬೈದರ್ಕಳ ಗರಡಿ ಜೀರ್ಣೋದ್ಧಾರಗೊಂಡ ನೂತನ ಬೋಳ ಮಲ್ಲಿಗೆ ಗರಡಿಯಲ್ಲಿ ದರ್ಶನ ಪಾತ್ರಿಯಾಗಿ ಸೇವೆ ಸಲ್ಲಿಸುತ್ತಿದ್ದರು.ಇವರು ಸಾಮಾಜಿಕ ಕೆಲಸ ಕಾರ್ಯದಲ್ಲೂ ಆಸಕ್ತಿ ಹೊಂದಿದ್ದು ಶ್ರೀ ಬ್ರಹ್ಮ ಬೈದರ್ಕಳ ಸೇವಾ ಸಂಘ(ರಿ.), ಬೋಳದಲ್ಲಿ ಗೌರವ ಸದಸ್ಯರಾಗಿ, ಬಿಲ್ಲವ ಸಂಘ ಹಾಗೂ ಹಲವಾರು ಸಂಘ ಸಂಸ್ಥೆಯಲ್ಲಿ ಸದಸ್ಯರಾಗಿ ಸೇವೆ ಸಲ್ಲಿಸಿದ್ದಾರೆ.
ಮೃತರು ಪತ್ನಿ ಸುಜಾತ ಹಾಗೂ ರಕ್ಷಿತ್ ಮತ್ತು ಸುರಕ್ಷ ಎಂಬ ಮಕ್ಕಳು ಹಾಗೂ ಅಪಾರ ಬಂಧು ಮಿತ್ರರು ಹಾಗೂ ಅಭಿಮಾನಿಗಳನ್ನು ಅಗಲಿದ್ದಾರೆ.



.
.
.
.
.
.
.
.
.
.
.
.
.
.
.
.
.
.
.
.
