
ಕಾರ್ಕಳ,ಜೂ.22 : ತಾಲೂಕಿನ ಸೂರಾಲು ಗುಂಡಾಜೆ ಸರಕಾರಿ ಹಿರಿಯ ಪ್ರಾಥಮಿಕ ಶಾಲಾ ಮಕ್ಕಳಿಗೆ ವಿವಿಧ ಸವಲತ್ತುಗಳ ವಿತರಣಾ ಕಾರ್ಯಕ್ರಮ ಶಾಲಾಭಿವೃದ್ಧಿ ಸಮಿತಿಯ ಅಧ್ಯಕ್ಷರಾದ ಉಮೇಶ್ ಕುಲಾಲ್ ಸೂರಾಲು ಅಧ್ಯಕ್ಷತೆಯಲ್ಲಿ ಶಾಲಾ ಸಭಾಂಗಣದಲ್ಲಿ ನಡೆಯಿತು.
ಕಾರ್ಯಕ್ರಮದ ಮುಖ್ಯ ಅತಿಥಿ ಉದ್ಯಮಿ ವಿಜೇಂದ್ರ ಪ್ರಭು ಕಾರ್ಕಳ ಅವರು ದೀಪ ಬೆಳಗಿಸಿ ಕಾರ್ಯಕ್ರಮವನ್ನು ಉದ್ಘಾಟಿಸಿ, ವಿದ್ಯಾರ್ಥಿಗಳು ತಮ್ಮನ್ನು ಹೆತ್ತು, ಹೊತ್ತು,ಸಾಕಿ ಸಲಹಿದ ತಂದೆ ತಾಯಿ ಮತ್ತು ವಿದ್ಯೆ ಕಲಿಸಿದ ಗುರುವನ್ನು ಸದಾ ಕಾಲ ಗೌರವಿಸುವ ಜೊತೆಗೆ ಜೀವನದಲ್ಲಿ ಉತ್ತಮ ಸಂಸ್ಕಾರವನ್ನು ಅಳವಡಿಸಿಕೊಳ್ಳುವ ಮೂಲಕ ಸಮಾಜದಲ್ಲಿ ಸತ್ಪ್ರಜೆಗಳಾಗಿ ಮೂಡಿ ಬರುವಂತಾಗಲಿ ಎಂದು ಶುಭ ಹಾರೈಸಿದರು.
ಕಾರ್ಯಕ್ರಮದಲ್ಲಿ ಶಾಲಾ ಮಕ್ಕಳಿಗೆ ದಾನಿಗಳು ಉಚಿತವಾಗಿ ನೀಡಿದ ಸುಮಾರು ರೂಪಾಯಿ 58,000/- ಮೌಲ್ಯದ ನೋಟ್ ಪುಸ್ತಕ ಬರವಣಿಗೆ ಸಾಮಗ್ರಿ ,ಬ್ಯಾಗ್ ,ಕೊಡೆ, ಸಮವಸ್ತ್ರ ಹಾಗೂ ಗುರುತಿನ ಚೀಟಿ ವಿತರಿಸಲಾಯಿತು.
ಮುಖ್ಯ ಅತಿಥಿ ಮಂಗಳೂರು ಎಂಸಿಸಿ ಬ್ಯಾಂಕ್ ಉಪಾಧ್ಯಕ್ಷರು ಹಾಗೂ ಉದ್ಯಮಿ ಜೆರಾಲ್ಡ್ ಡಿಸಿಲ್ವ ಮಿಯ್ಯಾರು ಅವರು ಮಾತನಾಡಿ, ಸರಕಾರಿ ಶಾಲೆಯಲ್ಲಿ ಕಲಿಯುವ ಗ್ರಾಮೀಣ ಪ್ರದೇಶದ ಬಡ ಮಕ್ಕಳು ಶಿಕ್ಷಣದಿಂದ ವಂಚಿತರಾಗಬಾರದೆಂಬ ಉದ್ದೇಶದಿಂದ ನಮ್ಮಿಂದಾದ ಸಹಕಾರವನ್ನು ನೀಡುತ್ತಿದ್ದು, ಉಚಿತ ಸವಲತ್ತುಗಳನ್ನು ಪಡೆದುಕೊಂಡ ವಿದ್ಯಾರ್ಥಿಗಳು ಉತ್ತಮ ಶಿಕ್ಷಣವನ್ನು ಪಡೆದು,ತಂದೆ ತಾಯಿಗೆ ಆದರ್ಶ ಮಕ್ಕಳಾಗಿ, ಸಮಾಜವನ್ನು ಮುನ್ನಡೆಸುವ ಉತ್ತಮ ನಾಯಕರಾಗಿ ಮೂಡಿ ಬರುವಂತಾಗಲಿ ಎಂದು ಶುಭ ಹಾರೈಸಿದರು.
ಕಾರ್ಯಕ್ರಮದಲ್ಲಿ ಕಾರ್ಕಳ ತಾಲೂಕು ಭೂನ್ಯಾಯ ಮಂಡಳಿಯ ಸದಸ್ಯರು ಹಾಗೂ ಮಿಯ್ಯಾರು ಶ್ರೀ ಮಹಾಲಿಂಗೇಶ್ವರ ದೇವಸ್ಥಾನದ ಆಡಳಿತ ಮೊಕ್ತೇಸರರಾದ ತಾರಾನಾಥ ಕೋಟ್ಯಾನ್ ಸೂರಾಲು, ಕಾರ್ಕಳ ಆಟೋರಿಕ್ಷಾ ಚಾಲಕ ಮಾಲಕ ಸಂಘದ ಸಂಘಟನಾ ಕಾರ್ಯದರ್ಶಿ ಸಂತೋಷ್ ರಾವ್, ಸೂರಾಲು ಸಾರ್ವಜನಿಕ ಗಣೇಶೋತ್ಸವ ಸಮಿತಿಯ ಗೌರವಾಧ್ಯಕ್ಷ ಸುಧಾಕರ.ಎಂ.ಶೆಟ್ಟಿ ,ಉಪಾಧ್ಯಕ್ಷೆ ಮೀರಾ ಜಯಪ್ರಕಾಶ್,ಆಟೋರಿಕ್ಷಾ ಚಾಲಕ ಮಾಲಕರ ಸಂಘದ ಸಹ ಸಂಘಟನಾ ಕಾರ್ಯದರ್ಶಿ ಶಿವಾನಂದ ಪೂಜಾರಿ,ಹಿರಿಯರಾದ ರಮೇಶ್ ದೇವಾಡಿಗ ಉಪಸ್ಥಿತರಿದ್ದರು.
ಉದ್ಯಮಿ ಜೆರಾಲ್ಡ್ ಡಿಸಿಲ್ವ ಮಿಯ್ಯಾರು – ಬರವಣಿಗೆ ಸಾಮಾಗ್ರಿ, ಕಾರ್ಕಳ ವಿಜೇಂದ್ರ ಪ್ರಭು – ಬ್ಯಾಗ್,ಅಶ್ವಿನಿ ರಾವ್ ಮುಂಬಾಯಿ – ಕೊಡೆ ಕಾರ್ಕಳ ಆಟೋರಿಕ್ಷ ಚಾಲಕಮಾಲಕರ ಸಂಘದ ಅಧ್ಯಕ್ಷ,ನ್ಯಾಯವಾದಿ ಸದಾನಂದ ಸಾಲ್ಯಾನ್ ಮತ್ತು ಕರಿಯಕಲ್ಲು ಮಾದವ ಪ್ರಕಾಶ್ ಕ್ಯಾಶ್ಯೂಸ್ ನ ದೀಪಾ ನಾಯಕ್ -ಸಮವಸ್ತ್ರ, ಸೂರಾಲು ಗ್ರಾಮಸೇವಾ ಟ್ರಸ್ಟ್ ವತಿಯಿಂದ ವಿದ್ಯಾರ್ಥಿಗಳಿಗೆ ಗುರುತಿನ ಚೀಟಿ ವಿತರಿಸಲಾಯಿತು.ವೇದಿಕೆಯಲ್ಲಿ ದಾನಿಗಳನ್ನು ಸನ್ಮಾನಿಸಿ ಅಭಿನಂದಿಸಲಾಯಿತು, ಶಾಲಾ ಮುಖ್ಯೋಪಾಧ್ಯಾಯಿನಿ ಜಬೀನ.ಇ ಪ್ರಾಸ್ತಾವಿಕವಾಗಿಮಾತನಾಡಿದರು.
ಶಾಲಾ ಅಭಿವೃದ್ಧಿ ಸಮಿತಿಯ ಉಪಾಧ್ಯಕ್ಷೆ ಸುನೀತಾ ಸತೀಶ್ ಪ್ರಮುಖರಾದ ಅಣ್ಣಿ ಮಡಿವಾಳ ಹರೀಶ್ ದೇವಾಡಿಗ ಹಾಗೂ ಶಾಲಾ ಮಕ್ಕಳ ಪೋಷಕರು, ಹಳೆ ವಿದ್ಯಾರ್ಥಿಗಳು ಉಪಸ್ಥಿತರಿದ್ದರು.ವಿದ್ಯಾಶ್ರೀ ಸ್ವಾಗತಿಸಿ,ಸ್ವಾತಿ ಜೈನ್ ವಂದನಾರ್ಪಣೆಗೆದರು.ಶಾಲಾ ಸಹ ಶಿಕ್ಷಕಿ ಬೇಬಿ ಗೀತಾ ಕಾರ್ಯಕ್ರಮ ನಿರೂಪಿಸಿದರು.



.
.
.
.
.
.
.
.
.
.
.
.
.
.
.
.
.
.
.
.
