
ಕಾರ್ಕಳ,ಜೂ.25: ನಾವು ಗಳಿಸಿದ ಹಣದಲ್ಲಿ ದಾನ ಮಾಡಿದರೆ ನಮ್ಮ ಜೀವನ ಸಾರ್ಥಕವಾಗುವುದರಲ್ಲಿ ಎರಡು ಮಾತಿಲ್ಲ. ವಿದ್ಯಾದಾನವೂ ಅತಿಶ್ರೇಷ್ಠ, ಮಾನವನ ಜೀವನಕ್ಕೆ ಅರ್ಥಬರಬೇಕಿದ್ದರೆ ಆತನು ಇತರರಿಗಾಗಿ ಬದುಕಬೇಕು. ವಿದ್ಯಾರ್ಥಿಗಳು ವಿದ್ಯೆಯೊಂದಿಗೆ, ಗುರಿಯನ್ನು ಹೊಂದಿರಬೇಕು. ಗುರು ಮತ್ತು ಗುರಿಯಿಂದ ವಿದ್ಯಾರ್ಥಿಗಳ ಶೈಕ್ಷಣಿಕ ಅಭಿವೃದ್ಧಿ ಸಾಧ್ಯ. ಕೆ.ಎಮ್.ಇ.ಎಸ್ ವಿದ್ಯಾಸಂಸ್ಥೆ ಎಲ್ಲಾ ದೃಷ್ಟಿಯಲ್ಲಿಯೂ ಅತ್ಯುತ್ತಮವಿದ್ಯಾಸಂಸ್ಥೆಯಾಗಿದೆ. ತಂದೆ-ತಾಯಿ, ಗುರುಹಿರಿಯರ ಆಶೀರ್ವಾದವೇ ನಮ್ಮನ್ನುಕೊನೆಯವರೆಗೆ ಸಲಹುತ್ತದೆ ಎಂದು ಕಮಲಾಕ್ಷ ಕಾಮತ್ ಸಿ.ಎ ಹೇಳಿದರು.
ಅವರು ಕಾರ್ಕಳ ಕೆಎಂಇಎಸ್ ಶಿಕ್ಷಣ ಸಂಸ್ಥೆಯಲ್ಲಿ ಸಂಸ್ಥೆಗೆ ನೀಡಿದ ನೀರಿನ ಫಿಲ್ಟರನ್ನು ಹಸ್ತಾಂತರಗೊಳಿಸಿ ಮಾತನಾಡಿದರು.
ಅಭಿಶೇಕ್ ಮಡಿವಾಳ ಅವರು ಕೆ.ಎಂ.ಇ.ಎಸ್ ವಿದ್ಯಾಸಂಸ್ಥೆಯಲ್ಲಿ ಕ್ರೀಡೆಗಳಲಿ ್ಲಭಾಗವಹಿಸಿದ ಕ್ಷಣಗಳನ್ನು ಮೆಲುಕುಹಾಕಿದರು.
ಕಾಲೇಜು ವಿಭಾಗದ ಉನ್ನತ ಶ್ರೇಣಿಯಲ್ಲಿ ಪಾಸಾದ 46 ವಿದ್ಯಾರ್ಥಿಗಳನ್ನು ಮತ್ತು ಹೈಸ್ಕೂಲು ವಿಭಾಗದಲ್ಲಿ ಉನ್ನತ ಶ್ರೇಣಿಯಲ್ಲಿ ಪಾಸಾಗಿರುವ 21 ವಿದ್ಯಾರ್ಥಿಗಳನ್ನು ಈ ಸಂದರ್ಭದಲ್ಲಿ ಸನ್ಮಾನಿಸಲಾಯಿತು. ಕಾಲೇಜಿನ ಅಂತಿಮ ಪರೀಕ್ಷೆಯಲ್ಲಿ 11ನೆಯ ಅಂಕಗಳಿಸಿರುವ ದೀಕ್ಷಾಆಚಾರ್ಯ, ಪ್ರೌಢಶಾಲೆಯ 6ನೇ ಅಂಕಗಳಿಸಿರುವ ಮೊಹಮ್ಮದ್ ಅರ್ಮಾನ್ ಶಾಹೀದ್ ಕಾರ್ಯಕ್ರಮದ ಕೇಂದ್ರಬಿAದುಗಳಾಗಿದ್ದರು.
ಕಾಲೇಜಿನ ಪ್ರಾಂಶುಪಾಲರಾಗಿರುವ ಕೆ.ಬಾಲಕೃಷ್ಣರವರು ದಾನಿ ಕಮಲಾಕ ್ಷಕಾಮತ್‌ರವರ ಕೊಡುಗೆಯನ್ನು ಪ್ರಶಂಶಿಸಿದರು. ಆಡಳಿತ ಮಂಡಳಿಯ ಅಧ್ಯಕ್ಷ ಕೆ.ಎಸ್ ಇಮ್ತಿಯಾಜ್ ಅಹಮ್ಮದ್ ಅಧ್ಯಕ್ಷತೆ ವಹಿಸಿ ಮಾತನಾಡಿ, ನಮ್ಮ ಶಾಲೆಯಲ್ಲಿ ಅತಿ ಕಡಿಮೆ ಶುಲ್ಕಕ್ಕೆ ಅತ್ಯುನ್ನತಮಟ್ಟದಶಿಕ್ಷಣವನ್ನುನೀಡಲಾಗುತ್ತಿದೆ ಎಂದರು.
ಈ ಸಂದರ್ಭದಲ್ಲಿ ಸಂಸ್ಥೆಯ ಮೊಹಮ್ಮದ್ ಶರೀಫ್, ಉಪನ್ಯಾಸಕರಾದ ಗುರುಕುಮಾರ್, ಸಂಗೀತ, ಅಧ್ಯಾಪಕಿ ಹಿಲ್ಡಾ ಮತ್ತು ವಿದ್ಯಾರ್ಥಿಗಳ ಪೋಷಕರು ಉಪಸ್ಥಿತರಿದ್ದರು.
ಪ್ರಾಥಮಿಕ ಶಾಲೆಯ ಮುಖ್ಯೋಪಾಧ್ಯಾಯಿನಿ ಲೊಲಿಟಾ ಡಿಸಿಲಾ ್ವ ಸ್ವಾಗತಿಸಿ, ಪ್ರೌಢಶಾಲೆಯ ಮುಖ್ಯೋಪಾಧ್ಯಾಯಿನಿ ಪಾಟ್ಕರ್ ಪ್ರಸ್ತಾವನೆಗೈದರು.
ಉಪನ್ಯಾಸಕಿ ನಿವೇದಿತಾ ವಂದಿಸಿ, ರಾಸಾಯನಶಾಸ್ತ್ರ ಉಪನ್ಯಾಸಕಿ ಅಲ್ವಿನಾ ಡಿಸೋಜ ಕಾರ್ಯಕ್ರಮ ನಿರ್ವಹಿಸಿದರು.



.
.
.
.
.
.
.
.
.
.
.
.
.
.
.
.
.
.
.
.
