Share this news

ಹೆಬ್ರಿ,ಜೂ. 26: ಮುನಿಯಾಲು-ಪಡುಕುಡೂರು-ಶಿವಪುರ ರಸ್ತೆಯು ಶಿವಪುರ ಹಾಗೂ ಮುನಿಯಾಲು ಭಾಗದ ಜನರಿಗೆ ಅತೀ ಪ್ರಮುಖ ಸಂಪರ್ಕ ರಸ್ತೆಯಾಗಿದೆ. ಲೋಕೋಪಯೋಗಿ ಇಲಾಖೆ ಆಧೀನದಲ್ಲಿರುವ ಈ ರಸ್ತೆಯನ್ನು ಕಳೆದ ಬೇಸಿಗೆಯಲ್ಲಿ ಯಾವುದೇ ಟೆಂಡರ್ ಪಡೆಯದೆ ಎಕಾಏಕಿ ಕಾರ್ಕಳದ ಕಾಂಗ್ರೆಸ್ ಮುಖಂಡ ಪರಾಜಿತ ಕಾಂಗ್ರೆಸ್ ಅಭ್ಯರ್ಥಿ ಮುನಿಯಾಲು ಉದಯಕುಮಾರ್ ಶೆಟ್ಟಿ ಅವರು ಕಾನೂನು ಬಾಹಿರವಾಗಿ ಇಲಾಖೆಯ ಅನುಮತಿ ಇಲ್ಲದೆ ತನ್ನ ಯಂತ್ರೋಪಕರಣ ಮತ್ತು ವಾಹನಗಳನ್ನು ಉಪಯೋಗಿಸಿ ರಸ್ತೆ ಅಗೆದು ಹಾಗೆಯೇ ಬಿಟ್ಟಿದ್ದಾರೆ. ಇದೀಗ ಮಳೆಗಾಲ ಆರಂಭವಾದ ಬಳಿಕ ರಸ್ತೆಗಳಲ್ಲಿ ದೊಡ್ಡ ದೊಡ್ಡ ಗುಂಡಿಗಳು ನಿರ್ಮಾಣವಾಗಿದ್ದು, ವಾಹನ ಸವಾರರು ಪರದಾಡುವ ಸ್ಥಿತಿ ನಿರ್ಮಾಣವಾಗಿದೆ. ಯಾರದೋ ಪ್ರತಿಷ್ಠೆಗಾಗಿ ಮಾಡಿದ ಕೆಲಸದಿಂದ ಈ ಭಾಗದ ಜನರು ಸಂಕಷ್ಟ ಅನುಭವಿಸುವಂತಾಗಿದೆ.

ಈ ರಸ್ತೆಯು ಸಾವಿರಾರು ವಾಹನಗಳು ಸಂಚರಿಸುವ ಪ್ರಮುಖ ರಸ್ತೆಯಾಗಿದ್ದು, ಅದನ್ನು ಅಗೆದು ಹಾಳು ಮಾಡಿದರೂ ಕೂಡ ರಸ್ತೆ ಅಗೆದವರ ಮೇಲೆ ಕಾನೂನು ಕ್ರಮ ಆಗದೇ ಇರುವುದು ಆಶ್ಚರ್ಯವಾಗಿದ್ದು, ಅಧಿಕಾರಿಗಳ ಮೌನ ಇದರ ಹಿಂದೆ ಯಾರ ಕೈವಾಡ ಇದೆ ಎನ್ನುವ ಪ್ರಶ್ನೆ ಮೂಡಿಸಿದೆ.
ರಾಜ್ಯದಲ್ಲಿ ತನ್ನ ಪಕ್ಷದ ಸರ್ಕಾರ ಇದೆ ಎಂಬ ದರ್ಪದಲ್ಲಿ ರಸ್ತೆ ಅಗೆದು ಹಾಕಿರುವುದು ಎಷ್ಟು ಸರಿ ಎಂದು ಬಿಜೆಪಿ ಕಾರ್ಕಳ ಮಂಡಲ ತಾಲೂಕು ಪ್ರಧಾನ ಕಾರ್ಯದರ್ಶಿ ಸುರೇಶ್ ಶೆಟ್ಟಿ ಶಿವಪುರ ಪ್ರಶ್ನಿಸಿದ್ದಾರೆ.

ಕಾರ್ಕಳ ಕ್ಷೇತ್ರದಲ್ಲಿ ಬೇರೆ ಯಾವುದೇ ಅಭಿವೃದ್ಧಿ ಚಟುವಟಿಕೆಗಳು ನಡೆದರೂ ಅದು ನಾನೆ ಮಾಡಿದ್ದು ಎಂದು ಪೋಸ್ ಕೊಡುವ ಮುನಿಯಾಲು ಉದಯ ಶೆಟ್ಟಿ ಅಕ್ರಮವಾಗಿ ತನ್ನ ಯಂತ್ರಗಳಿಂದ ಸಾರ್ವಜನಿಕ ರಸ್ತೆ ಅಗೆದು ಸಾರ್ವಜನಿಕರು ಅನುಭವಿಸುವ ತೊಂದರೆ ಕಣ್ಣೆದುರು ಕಂಡರೂ ಕಾಣದಂತೆ ವರ್ತಿಸುತ್ತಿದ್ದು, ಅವರ ವರ್ತನೆ ನೋಡಿದರೆ ಈ ಭಾಗದ ಜನತೆಗೆ ತೊಂದರೆ ಕೊಡುವುದೇ ಇದರ ಮುಖ್ಯ ಉದ್ದೇಶ ಎಂದು ಭಾಸವಾಗುತ್ತಿದೆ. ಕಾನೂನುಬಾಹಿರವಾಗಿ ರಸ್ತೆ ಆಗೆದಿರುವ ಬಗ್ಗೆ ಶಾಸಕರು ಹಾಗೂ ಸ್ಥಳೀಯರು ಇಲಾಖೆಗೆ ದೂರು ಕೊಟ್ಟಿದ್ದರೂ ಯಾವುದೇ ಕ್ರಮವಾಗದೇ ಇರುವುದು ಸಾರ್ವಜನಿಕರಲ್ಲಿ ಅಧಿಕಾರಿಗಳ ನಡೆಯ ಮೇಲೆ ಸಂಶಯ ಮೂಡಿದೆ. ಇದೇ ಜಾಗದಲ್ಲಿ ಬೇರೆ ಯಾರಾದರೂ ಒಂದು ಇಂಚು ರಸ್ತೆ ಆಗಿದಿದ್ದರೂ ಕ್ರಮ ಕೈಗೊಳ್ಳುವ ಇಲಾಖೆ ಇಲ್ಲಿ ಇಷ್ಟು ಅಕ್ರಮ ಕೆಲಸ ಮಾಡಿದ್ದರೂ ಮೌನ ವಹಿಸಿರುವುದು ಯಾಕೆ? ಈ ಕೂಡಲೇ ಅಧಿಕಾರಿಗಳು ಇದರ ಕುರಿತು ಗಮನ ಹರಿಸಿ ರಸ್ತೆಯನ್ನು ಸಂಚಾರ ಯೋಗ್ಯ ರಸ್ತೆಯನ್ನಾಗಿಸಬೇಕು ಸುಮಾರು ಒಂದು ಕಿಲೋಮೀಟರ್ ರಸ್ತೆಯಲ್ಲಿ ವಾಹನ ಸಂಚಾರ ಮಾಡುವುದು ತುಂಬಾ ಕ್ಲಿಷ್ಟಕರವಾಗಿದ್ದು, ಇಲ್ಲಿಯ ಜನರು ಪರ್ಯಾಯ ಮಾರ್ಗ ಹುಡುಕುವ ಅನಿವಾರ್ಯತೆ ಎದುರಾಗಿದೆ. ಅದರಲ್ಲೂ ದ್ವಿಚಕ್ರ ವಾಹನ ಸವಾರರಂತೂ ಈ ರಸ್ತೆಯಲ್ಲಿ ಸಂಚರಿಸಲು ಸಾಧ್ಯವೇ ಇಲ್ಲದಂತಾಗಿದೆ. ಆದ್ದರಿಂದ ಉದಯ ಶೆಟ್ಟಿ ಅವರಿಗೆ ನಿಜವಾಗಿಯೂ ಜನರ ಕುರಿತು ಕಾಳಜಿ ಇದ್ದರೆ ತಾನು ಮಾಡಿದ ತಪ್ಪನ್ನು ಅರಿತುಕೊಂಡು ಈ ಭಾಗದ ಜನರಲ್ಲಿ ಕ್ಷಮೆಯಾಚಿಸಿ ಇಲಾಖೆಗೆ ದಂಡ ಕಟ್ಟಬೇಕು. ಅಲ್ಲದೇ ಸಂಬಂಧಪಟ್ಟ ಇಲಾಖೆ ಈ ರಸ್ತೆಯನ್ನು ಸಾರ್ವಜನಿಕ ಸುಗಮ ಸಂಚಾರಕ್ಕೆ ಸಿದ್ದ ಮಾಡಿ ಕೊಡಬೇಕೆಂದು ಆ ಭಾಗದ ಜನತೆಯ ಪರವಾಗಿ ಆಗ್ರಹಿಸಿದ್ದಾರೆ. ತಪ್ಪಿದಲ್ಲಿ ಅದೇ ರಸ್ತೆಯಲ್ಲಿ ತೀವೃ ಪ್ರತಿಭಟನೆ ನಡೆಸಲಾಗುವುದು ಎಂದು ಸುರೇಶ್ ಶೆಟ್ಟಿ ಪತ್ರಿಕಾ ಹೇಳಿಕೆಯಲ್ಲಿ ತಿಳಿಸಿದ್ದಾರೆ.

   

.

 

 

 

 

 

 

 

 

 

 

 

 

 

 

 

 

 

 

 

 

 

.

 

 

 

 

 

 

 

 

 

 

 

 

                 

 

 

 

.

 

 

 

 

 

 

 

 

 

 

 

 

 

 

 

 

 

 

 

 

 

.

 

 

 

 

 

 

 

 

 

 

 

 

 

 

 

 

 

 

 

 

 

 

 

 

 

 

 

 

.

 

 

 

 

 

 

 

 

 

 

 

 

                 

 

 

 

.

 

 

 

 

 

 

 

 

 

 

 

 

 

 

 

 

 

 

 

 

 

.

 

 

 

 

 

 

 

 

 

 

 

 

 

 

 

 

 

 

 

 

 

 

 

 

 

 

 

 

 

 

 

 

.

 

 

 

 

 

 

 

 

 

 

 

 

                 

 

 

 

.

 

 

 

 

 

 

 

 

 

 

 

 

 

 

 

 

 

 

 

 

 

.

 

 

 

 

 

 

                                       

.

 

 

 

 

 

 

 

 

 

 

 

 

 

 

 

 

 

 

 

 

 

.

 

 

 

 

 

 

 

 

 

 

 

 

                 

 

 

 

.

 

 

 

 

 

 

 

 

 

 

 

 

 

 

 

 

 

 

 

 

 

.

 

 

 

 

 

 

 

 

 

 

 

 

 

 

 

 

 

 

 

 

 

 

 

 

 

 

 

 

.

 

 

 

 

 

 

 

 

 

 

 

 

                 

 

 

 

.

 

 

 

 

 

 

 

 

 

 

 

 

 

 

 

 

 

 

 

 

 

.

 

 

 

 

 

 

 

 

 

 

 

 

 

 

 

 

 

 

 

 

 

 

 

 

 

 

 

 

 

 

 

 

.

 

 

 

 

 

 

 

 

 

 

 

 

                 

 

 

 

.

 

 

 

 

 

 

 

 

 

 

 

 

 

 

 

 

 

 

 

 

 

.

 

 

 

 

 

 

 

 

 

Leave a Reply

Your email address will not be published. Required fields are marked *