
ಕಾರ್ಕಳ, ಆ.03: ಸ್ವಂತ ನಿವೇಶನ ಇಲ್ಲದೇ ಬಾಡಿಗೆ ಮನೆಯಲ್ಲಿ ಕಷ್ಟದ ಜೀವನ ನಡೆಸುವ ನಮ್ಮ ಕ್ಷೇತ್ರದ ಎಲ್ಲಾ ಬಡ ನಿವೇಶನ ರಹಿತರಿಗೆ ಹಂತಹಂತವಾಗಿ ಹಕ್ಕು ಪತ್ರ ವಿತರಿಸಲಾಗುತ್ತದೆ ಎಂದು ಶಾಸಕ ಸುನಿಲ್ ಕುಮಾರ್ ಹೇಳಿದರು.
ಅವರು ಕಾರ್ಕಳ ತಾಲೂಕು ಪಂಚಾಯತ್ ಸಭಾಂಗಣದಲ್ಲಿ 94c ಹಾಗೂ 94cc ಅಡಿ ಒಟ್ಟು34 ಹಕ್ಕು ಪತ್ರಗಳನ್ನು ವಿತರಿಸಿ ಮಾತನಾಡಿದರು.
ನಿವೇಶನಕ್ಕಾಗಿ ಅರ್ಜಿ ಸಲ್ಲಿಸಿದವರು ತುಂಬಾ ಬಡವರು. ಹಕ್ಕು ಪತ್ರಕ್ಕಾಗಿ ಹತ್ತಾರು ವರ್ಷಗಳಿಂದ ಹಲವು ಸಮಸ್ಯೆಗಳನ್ನು ಎದುರಿಸುತ್ತಿದ್ದಾರೆ.ನಾನು ಸಚಿವನಾಗಿದ್ದ ಅವಧಿಯಲ್ಲಿ ಡೀಮ್ಡ್ ಅರಣ್ಯ ಸಮಸ್ಯೆಯಿಂದ ಹಕ್ಕು ಪತ್ರ ವಿತರಣೆಗೆ ಇದ್ದ ತೊಡಕು ನಿವಾರಿಸಿ ಸಾವಿರಕ್ಕೂ ಅಧಿಕ ನಿವೇಶನ ರಹಿತರಿಗೆ ಹಕ್ಕು ಪತ್ರ ವಿತರಿಸಲಾಗಿದೆ.ಮುಂದಿನ ದಿನಗಳಲ್ಲಿ ಯಾವುದೇ ಜಾತಿ,ಧರ್ಮ,ಪಕ್ಷ ಎನ್ನುವ ಯಾವುದೇ ತಾರತಮ್ಯ ಮಾಡದೇ ನಿವೇಶನ ಇಲ್ಲದ ಎಲ್ಲರಿಗೂ ನಿವೇಶ ಹಂಚಿಕೆ ಮಾಡುವುದೇ ನಮ್ಮ ಗುರಿಯಾಗಿದೆ ಎಂದರು.
ಇಲ್ಲಿಯ ತನಕ ನಿಮ್ಮದಲ್ಲದ ಸರ್ಕಾರಿ ಜಾಗದಲ್ಲಿ ಬಾಡಿಗೆ ನೆಲೆಯಲ್ಲಿ ಕುಳಿತಿದ್ದೀರಿ ಇನ್ನುಮುಂದೆ ಆ ಜಾಗಕ್ಕೆ ನೀವೇ ನಿಜವಾದ ಮಾಲೀಕರಾಗಿದ್ದೀರಿ.ಮುಂದೆ ಎಲ್ಲಾ ಸರ್ಕಾರಿ ಸವಲತ್ತುಗಳನ್ನು ಪಡೆಯಲು ಇದರಿಂದ ಅವಕಾಶ ಸಿಕ್ಕಂತಾಗಿದೆ ಎಂದರು.
ಈ ಸಂದರ್ಭದಲ್ಲಿ ತಹಶೀಲ್ದಾರ್ ಪ್ರದೀಪ್ ಅರ್, ಕಂದಾಯ ನಿರೀಕ್ಷಕ ರಿಯಾಜ್ ಅಹಮದ್ ಉಪಸ್ಥಿತರಿದ್ದರು.





.
.
.
.
.
.
.
.
.
.
.
.
.
.
.
.
.
.
.
.
