

ನವದೆಹಲಿ,ಆ.15: ದೇಶದ 80ನೇ ಸ್ವಾತಂತ್ರ‍್ಯ ದಿನಾಚರಣೆಯ ಹಿನ್ನೆಲೆ ಪ್ರಧಾನಿ ನರೇಂದ್ರ ಮೋದಿಯವರು ಐತಿಹಾಸಿಕ ಕೆಂಪು ಕೋಟೆಯಲ್ಲಿ ಸತತ 13 ನೇ ಬಾರಿಗೆ ತ್ರಿವರ್ಣ ಧ್ವಜಾರೋಹಣ ಮಾಡಿ ಬಳಿಕ ದೇಶವನ್ನುದ್ದೇಶಿಸಿ ಮಾತನಾಡಿದ ಪ್ರಧಾನಿ ಮೋದಿ, ‘ನನ್ನ ಪ್ರೀತಿಯ ದೇಶವಾಸಿಗಳೇ, ನಮ್ಮ ಸಂಕಲ್ಪ ಉನ್ನತವಾಗಿರಬೇಕು. ಏಕೆಂದರೆ ಕನಸುಗಳು ಉನ್ನತವಾಗಿದ್ದರೆ ಮತ್ತು ದೃಢಸಂಕಲ್ಪ ಬಲವಾಗಿದ್ದರೆ, ನಮ್ಮ ಶಕ್ತಿ ಮತ್ತು ಪ್ರಯತ್ನಗಳು ಸಹ ಬೆಳೆಯುತ್ತವೆ. ಆಗ ಮಾತ್ರ ನಾವು ನಮ್ಮ ಕನಸುಗಳನ್ನು ನನಸಾಗಿಸಬಹುದು ಎಂದು ಹೇಳಿದರು.
2047ರ ವೇಳೆಗೆ ಭಾರತವನ್ನು ಸಂಪೂರ್ಣ ಅಭಿವೃದ್ಧಿ ಹೊಂದಿದ ರಾಷ್ಟ್ರವನ್ನಾಗಿ (ವಿಕಸಿತ ಭಾರತ) ಪರಿವರ್ತಿಸುವುದು ಪ್ರತಿಯೊಬ್ಬ 140 ಕೋಟಿ ಭಾರತೀಯರ ಮುಖ್ಯ ಗುರಿಯಾಗಬೇಕು ಎಂದು ಪ್ರಧಾನಿ ಮೋದಿ ಪ್ರತಿಪಾದಿಸಿದರು. ಸ್ವತಂತ್ರ ಭಾರತವು ಶತಮಾನೋತ್ಸವ ಆಚರಿಸುವ ಹೊತ್ತಿಗೆ ದೇಶವು ಪ್ರತಿಯೊಂದು ಕ್ಷೇತ್ರದಲ್ಲಿಯೂ ಅಗ್ರಸ್ಥಾನದಲ್ಲಿರಬೇಕು ಎಂಬ ಸಂಕಲ್ಪವನ್ನು ಪ್ರಧಾನಿ ಪುನರುಚ್ಚರಿಸಿದರು.
‘ಸಪ್ತ ಧಾರಾ’ ಶಕ್ತಿ ಮತ್ತು ಆರ್ಥಿಕ ಸುಧಾರಣೆಗಳು,ದೇಶದ ಹೊಸ ಬೆಳವಣಿಗೆಯ ಎಂಜಿನ್ ಆಗಿ ‘ಸಪ್ತ ಧಾರಾ’ ನೆರವಾಗಲಿವೆ ಎಂದು ಪ್ರಧಾನಿ ಘೋಷಿಸಿದರು.
ತಯಾರಿಕಾ ಕ್ಷೇತ್ರ ಹಾಗೂ ಗ್ಲೋಬಲ್ ಸಪ್ಲೈ ಚೈನ್,ಆಹಾರ ಸಂಸ್ಕರಣೆ ಮತ್ತು ಕೃಷಿ ,ತಂತ್ರಜ್ಞಾನ ಮತ್ತು ಇನ್ನೋವೇಶನ್,ಗತಿ ಶಕ್ತಿ (ಸಂಪರ್ಕ ಮತ್ತು ಮೂಲಸೌಕರ್ಯ),ರಕ್ಷಣೆ ಮತ್ತು ಭದ್ರತೆ,ಹಸಿರು ಹಾಗೂ ನೀಲಿ ಆರ್ಥಿಕತೆ,ಸಾಫ್ಟ್ ಪವರ್,ಆತ್ಮನಿರ್ಭರ ಭಾರತ ಮತ್ತು ತಂತ್ರಜ್ಞಾನ,ವಿದೇಶಗಳ ಮೇಲಿನ ಅವಲಂಬನೆಯನ್ನು ಕಡಿಮೆ ಮಾಡಿ, ದೇಶೀಯ ಸಾಮರ್ಥ್ಯವನ್ನು ಹೆಚ್ಚಿಸಲು ‘ಆತ್ಮನಿರ್ಭರ ಭಾರತ’ ಅಭಿಯಾನಕ್ಕೆ ಹೆಚ್ಚಿನ ಒತ್ತು ನೀಡಲಾಗುತ್ತಿದೆ. ಭಾರತದಲ್ಲೇ ಸೆಮಿಕಂಡಕ್ಟರ್‌ಗಳ ತಯಾರಿಕೆ ಆರಂಭವಾಗಿದ್ದು, ಸೌರಶಕ್ತಿ ಹಾಗೂ ಪರಮಾಣು ಶಕ್ತಿ ಉತ್ಪಾದನೆಯಲ್ಲಿ ಹೊಸ ಮೈಲಿಗಲ್ಲು ಸಾಧಿಸಲಾಗುತ್ತಿದೆ ಎಂದು ತಿಳಿಸಿದರು.
ಯುವಜನತೆ ದೇಶದ ಅಭಿವೃದ್ಧಿಯ ಚಾಲಕ ಶಕ್ತಿಯಾಗಿದೆ ಎಂದು ಬಣ್ಣಿಸಿದ ಪ್ರಧಾನಿ, ಯುವಕರ ಪ್ರಗತಿಗೆ ಸೂಕ್ತ ಅವಕಾಶಗಳನ್ನು ಕಲ್ಪಿಸಲಾಗುತ್ತಿದೆ ಎಂದರು.ಮುAಬರುವ ದಿನಗಳಲ್ಲಿ ಲಕ್ಷಾಂತರ ಯುವಕರಿಗೆ ಆರ್ಟಿಫಿಶಿಯಲ್ ಇಂಟೆಲಿಜೆನ್ಸ್ ಮತ್ತು ಆಧುನಿಕ ತಂತ್ರಜ್ಞಾನದಲ್ಲಿ ತರಬೇತಿ.ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ಸಿದ್ಧರಾಗುವ ವಿದ್ಯಾರ್ಥಿಗಳಿಗೆ ಉಚಿತ ಆನ್‌ಲೈನ್ ಕೋಚಿಂಗ್ ಯೋಜನೆ. 2036ರ ಒಲಿಂಪಿಕ್ಸ್ ಅನ್ನು ಗುರಿಯಾಗಿಸಿಕೊಂಡು ಕ್ರೀಡಾಪಟುಗಳನ್ನು ಗುರುತಿಸಲು ‘ಟ್ಯಾಲೆಂಟ್ ಹಂಟ್’ ಅಭಿಯಾನ ಕೈಗೊಳ್ಳಲಾಗಿದೆ ಎಂದರು.







.
.
.
.
.
.
.
.
.
.
.
.
.
.
.
.
.
.
.
.
