

ಅಜೆಕಾರು,ಅ.03: ಗಾಂಧೀ ಜಯಂತಿ ಅಂಗವಾಗಿ ಎಳ್ಳಾರೆಯ ಮುಳ್ಕಾಡಿನಲ್ಲಿ ನಡೆದ ವಿಶೇಷ ಕಾರ್ಯಕ್ರಮದಲ್ಲಿ ಗ್ರಾಮದ ಅಭಿವೃದ್ಧಿ ಕಾರ್ಯಗಳ ಮನನ ಮಾಡುವ ಜೊತೆಗೆ ಸಾರ್ವಜನಿಕ ಸಂಪರ್ಕ ರಸ್ತೆಗೆ ಸ್ಥಳದಾನ ಮಾಡಿದ ಮಹನೀಯರಿಗೆ ಸನ್ಮಾನ ಹಾಗೂ ಗ್ರಾಮದ ಅಭಿವೃದ್ಧಿಯ ಕುರಿತ ಕೈಪಿಡಿಯನ್ನು ಬಿಡುಗಡೆ ಕಾರ್ಯಕ್ರಮ ನಡೆಯಿತು.
ಕಾರ್ಕಳ ಶಾಸಕ ಸುನೀಲ್ ಕುಮಾರ್ ಮುಖ್ಯ ಅತಿಥಿಗಳಾಗಿ ಭಾಗವಹಿಸಿ ಮುಳ್ಕಾಡು- ಗದ್ದಿಗೆ ಮಾರಿಯಮ್ಮ ಸಂಪರ್ಕ ರಸ್ತೆಯ ನಿರ್ಮಾಣಕ್ಕೆ ಸ್ಥಳದಾನ ಮಾಡಿದವರನ್ನು ಹಾಗೂ ಆಶಾ ಕಾರ್ಯಕರ್ತೆಯಾಗಿ ಸೇವೆ ಸಲ್ಲಿಸಿದ ಬೇಬಿ ಅವರನ್ನು ಸನ್ಮಾನಿಸಿ ಗೌರವಿಸಿ ಎಳ್ಳಾರೆ ಗ್ರಾಮದ ಅಭಿವೃದ್ಧಿಯ ಕೈಪಿಡಿಯನ್ನು ಬಿಡುಗಡೆಗೊಳಿಸಿದರು.
ಕಳೆದ ಎರಡು ಅವಧಿಗೆ ಕಡ್ತಲ ಪಂಚಾಯತಿಯ ಸಕ್ರೀಯ ಗ್ರಾಮ ಪಂಚಾಯತ್ ಸದಸ್ಯರಾಗಿ, ಅಧ್ಯಕ್ಷರಾಗಿ ಸಾಕಷ್ಟು ಅಭಿವೃದ್ಧಿ ಚಟುವಟಿಕೆಗಳನ್ನು ನಡೆಸಿದ ಮುಳ್ಕಾಡು ಸತೀಶ್ ಪೂಜಾರಿಯವರನ್ನು ಗ್ರಾಮಸ್ಥರ ಪರವಾಗಿ ಸನ್ಮಾನಿಸಾಯಿತು. ಈ ಸಂದರ್ಭದಲ್ಲಿ ಗ್ರಾಮದ ಅಭಿವೃದ್ಧಿ ಕಾರ್ಯಗಳು ಹಾಗೂ ಮುಂದಿನ ದಿನಗಳಲ್ಲಿ ಕೈಗೊಳ್ಳಬೇಕಾದ ಯೋಜನೆಗಳ ಕುರಿತು ಕಾರ್ಯಕ್ರಮದಲ್ಲಿ ಗಮನ ಸೆಳೆಯಲಾಯಿತು.
ಕುಮಾರಿ ಸಿಯಾ ಪ್ರಾರ್ಥಿಸಿದರು. ರಕ್ಷಿತ ಸುವರ್ಣ ಸ್ವಾಗತಿಸಿ, ರೂಪಶ್ರೀ ಕೋಟಿಬೆಟ್ಟು ಕಾರ್ಯಕ್ರಮ ನಿರೂಪಿಸಿದರು. ರಾಮಚಂದ್ರ ನಾಯಕ್ ಹಾಗೂ ಕುಕ್ಕುಜೆ ವಿಶ್ವಕರ್ಮ ಸಂಘದ ಅಧ್ಯಕ್ಷ ಈಶ್ವರ್ ಆಚಾರ್ಯ ಎಳ್ಳಾರೆ ಪ್ರಸ್ತಾವನೆಗೈದರು.

ಸದಾ ನಗುಮೊಗದ ಸೇವೆಯ ಜೊತೆಗೆ ಗ್ರಾಹಕರಿಗೆ ಗುಣಮಟ್ಟದ ವಸ್ತುಗಳನ್ನು ನೀಡಬೇಕು ಎನ್ನುವ ಬದ್ಧತೆಯೊಂದಿಗೆ ಕಾರ್ಯಾಚರಿಸುತ್ತಿರುವ ರಿಲಯನ್ಸ್ ಸ್ಮಾರ್ಟ್ ಬಜಾರ್ ಕಾರ್ಕಳ ನಗರ ಹಾಗೂ ತಾಲೂಕಿನ ಗ್ರಾಹಕರ ಖರೀದಿಯ ನೆಚ್ಚಿನ ಮಾರ್ಟ್ ಆಗಿದೆ. ಒಂದೇ ಸೂರಿನಡಿ ದಿನಬಳಕೆಯ ಎಲ್ಲಾ ಸಾಮಾಗ್ರಿಗಳು ಲಭ್ಯವಿದೆ.ಮಾತ್ರವಲ್ಲದೇ ಯಾವುದೇ ವಸ್ತುಗಳ ಬೆಲೆ, ಗುಣಮಟ್ಟವನ್ನು ಪರಿಶೀಲಿಸಿ ಖರೀದಿಸುವ ಅವಕಾಶವಿದೆ. ಆದ್ದರಿಂದ ಈ ವರ್ಷದ ಸಾಲು ಸಾಲು ಹಬ್ಬಗಳನ್ನು ನಿಮ್ಮ ರಿಯಲನ್ಸ್ ಸಾರ್ಟ್ ಬಜಾರ್ ನಲ್ಲಿ ಆಚರಿಸಿಕೊಳ್ಳುವ ಅವಕಾಶ ಕಳದುಕೊಳ್ಳಬೇಡಿ. ಕುಟುಂಬದೊAದಿಗೆ ಬಂದು ಶಾಪಿಂಗ್ ಮಾಡಿ ಅದ್ಭುತ ಅನುಭವ ಪಡೆಯಿರಿ.
(ಜಾಹೀರಾತು)





.
.
.
.
.
.
.
.
.
.
.
.
.
.
.
.
.
.
.
.
