

ವಿಶೇಷ ವರದಿ: ಕರಾವಳಿ ನ್ಯೂಸ್ |
ವೇತನ ಹೆಚ್ಚಳ, ಪಿಂಚಣಿ ನವೀಕರಣ ಸೇರಿದಂತೆ ಹಲವು ಬೇಡಿಕೆಗಳ ಈಡೇರಿಕೆಗೆ ಒತ್ತಾಯಿಸಿ ದೇಶಾದ್ಯಂತ ಬ್ಯಾಂಕ್ ನೌಕರರ ಒಕ್ಕೂಟವಾದ ‘ಯುನೈಟೆಡ್ ಫೋರಂ ಆಫ್ ಬ್ಯಾಂಕ್ ಯೂನಿಯನ್ಸ್’ ಕರೆ ನೀಡಿರುವ ಮೂರು ದಿನಗಳ ರಾಷ್ಟ್ರವ್ಯಾಪಿ ಮುಷ್ಕರವು ಸೆಪ್ಟೆಂಬರ್ 28 ರಿಂದ ಆರಂಭವಾಗಲಿದೆ. ಸೆಪ್ಟೆಂಬರ್ 28, 29 ಮತ್ತು 30 ರವರೆಗೆ ಸತತ ಮೂರು ದಿನಗಳ ಕಾಲ ಬ್ಯಾಂಕಿಂಗ್’ ಸೇವೆಗಳಲ್ಲಿ ಭಾರೀ ಏರುಪೇರಾಗುವ ಸಾಧ್ಯತೆಯಿದೆ. ಬ್ಯಾಂಕ್ ಶಾಖೆಗಳು ಮೂರು ದಿನ ಬಂದ್ ಇರುವ ಹಿನ್ನಲೆಯಲ್ಲಿ ಪ್ರಮುಖವಾಗಿ ಗ್ರಾಮೀಣ ಪ್ರದೇಶಗಳಲ್ಲಿನ ಗ್ರಾಹಕರಿಗೆ ಬ್ಯಾಂಕಿಂಗ್’ ಸೇವೆಗಳಲ್ಲಿ ವ್ಯತ್ಯಯವಾಗಲಿದೆ. ಜೊತೆಗೆ ನಗದು ಠೇವಣಿ, ವಿತ್ಡ್ರಾವಲ್, ಚೆಕ್ ಕ್ಲಿಯರೆನ್ಸ್ ಹಾಗೂ ಆಡಳಿತಾತ್ಮಕ ಕೆಲಸ ಕಾರ್ಯಗಳಲ್ಲಿ ವ್ಯತ್ಯಯ ಉಂಟಾಗಬಹುದು. ಅಲ್ಲದೇ ಸೆಪ್ಟೆಂಬರ್ 30 ಬ್ಯಾಂಕ್ಗಳ ಅರ್ಧವಾರ್ಷಿಕ ಲೆಕ್ಕಪತ್ರ ಮುಕ್ತಾಯ ದಿನಾಂಕವಾಗಿದ್ದು, ಈ ಸಮಯದಲ್ಲಿ ಮುಷ್ಕರ ನಡೆದಿರುವುದು ಸಾಲ ಮಂಜೂರಾತಿ ಹಾಗೂ ಕ್ಲಿಯರೆನ್ಸ್ ಪ್ರಕ್ರಿಯೆಗಳ ಮೇಲೆ ಪರಿಣಾಮ ಬೀರುವ ಸಾಧ್ಯತೆಯಿದೆ.
ವಾರಾಂತ್ಯದ ರಜೆ ಮತ್ತು ಮೂರು ದಿನಗಳ ಮುಷ್ಕರದಿಂದ ಸತತ ರಜೆ ಎದುರಾಗುವುದನ್ನು ತಪ್ಪಿಸಲು, ಹಣಕಾಸು ಸಚಿವಾಲಯದ ನಿರ್ದೇಶನದಂತೆ ಇಂದು ಎಲ್ಲಾ ಸಾರ್ವಜನಿಕ ವಲಯದ ಬ್ಯಾಂಕ್ಗಳು ಮತ್ತು ಪ್ರಾದೇಶಿಕ ಗ್ರಾಮೀಣ ಬ್ಯಾಂಕ್ಗಳು ಸಾಮಾನ್ಯ ರೀತಿಯಲ್ಲಿ ಕಾರ್ಯನಿರ್ವಹಿಸಲಿವೆ. ಈ ನಡುವೆ ಮುಷ್ಕರವಿದ್ದರೂ ಆನ್ಲೈನ್ ಹಾಗೂ ಡಿಜಿಟಲ್ ಬ್ಯಾಂಕಿಂಗ್’ ಸೇವೆ ಎಂದಿನAತೆ ಲಭ್ಯವಿರಲಿದ್ದು, ಎಟಿಎಂ , ಯುಪಿಐ ಪಾವತಿ, ನೆಟ್ ಬ್ಯಾಂಕಿಂಗ್’ ಹಾಗೂ ಮೊಬೈಲ್ ಬ್ಯಾಂಕಿಂಗ್’ ಸೇವೆಗಳು ಯಥಾರೀತಿ ಲಭ್ಯವಿರಲಿವೆ ಎಂದು ಬ್ಯಾಂಕ್ ಆಡಳಿತ ಮಂಡಳಿಗಳು ತಿಳಿಸಿವೆ.
ಬ್ಯಾಂಕ್ ಸಿಬ್ಬಂದಿಗಳ ಪ್ರಮುಖ ಬೇಡಿಕೆಗಳು:
ವಾರದಲ್ಲಿ 5 ದಿನಗಳ ಕೆಲಸದ ಅವಧಿ: ಪ್ರಸ್ತುತ ಪ್ರತಿ ತಿಂಗಳ 2ನೇ ಮತ್ತು 4ನೇ ಶನಿವಾರ ರಜೆ ಇದ್ದು, ಎಲ್ಲಾ ಶನಿವಾರಗಳನ್ನೂ ರಜಾದಿನವೆಂದು ಘೋಷಿಸಿ ‘ವಾರಕ್ಕೆ 5 ದಿನಗಳ ಬ್ಯಾಂಕಿಂಗ್’ ಜಾರಿಗೆ ತರಬೇಕು ಎಂಬುದು ನೌಕರರ ಪ್ರಮುಖ ಬೇಡಿಕೆಯಾಗಿದೆ.ಇದಲ್ಲದೇ ಹಳೆಯ ಪಿಂಚಣಿದಾರರ ಪಿಂಚಣಿ ಮೊತ್ತವನ್ನು ಇತ್ತೀಚಿನ ವೇತನ ಶ್ರೇಣಿಗೆ ತಕ್ಕಂತೆ ನವೀಕರಿಸುವುದು ಮತ್ತು ಎನ್ಪಿಎಸ್ ನಿಂದ ಹಳೆಯ ಪಿಂಚಣಿ ಯೋಜನೆಗೆ ಬದಲಾಯಿಸಲು ಅವಕಾಶ ನೀಡುವುದು.





.
.
.
.
.
.
.
.
.
.
.
.
.
.
.
.
.
.
.
.
