

ನವದೆಹಲಿ, ಅ.03: ದುಬೈನಿಂದ ಇಸ್ರೇಲ್‌ನ ಟೆಲ್ ಅವೀವ್‌ಗೆ ತೆರಳುತ್ತಿದ್ದ ಫ್ಲೈದುಬೈ ವಿಮಾನದ ಪೈಲಟ್ ಕ್ಯಾಪ್ಟನ್ ಸ್ಮಿತ್ ಮಚ್ಚರ್ ಅವರ ಮೇಲೆ ಚಾಕುವಿನಿಂದ ಇರಿದು ಗಂಭೀರವಾಗಿ ಗಾಯಗೊಳಿಸಿ ಆ ಮೂಲಕ ವಿಮಾನವನ್ನು ಅಪಹರಿಸಿ ಸ್ಪೋಟಿಸಲು ಯತ್ನಿಸಿದ ಸಹ ಪೈಲಟ್ ನನ್ನು ಓಮನ್ ದೇಶದ ಹಮಾಮ್-ಅಲ್-ಹಮಾಮಿ ಎಂದು ಗುರುತಿಸಲಾಗಿದೆ.
ಅಲ್ ಅರೇಬಿಯಾ ಮತ್ತು ಸಿಎನ್‌ಎನ್ ವರದಿಗಳ ಪ್ರಕಾರ, ಹಮಾಮ್-ಅಲ್-ಹಮಾಮಿಗೆ ಈ ಹಿಂದೆ ಸಿರಿಯಾದಲ್ಲಿ ನೆಲೆಸಿದ್ದಾಗ ಉಗ್ರವಾದಿ ವಿಚಾರಧಾರೆಗಳಿಂದ ಪ್ರಭಾವಿತನಾಗಿದ್ದನು. ಆತನ ಅತಿಪಂಥೀಯ ನಿಲುವುಗಳ ಬಗ್ಗೆ ಆತಂಕಗೊAಡಿದ್ದ ಓಮನ್ ಅಧಿಕಾರಿಗಳು ಆತನಿಗೆ ವಿಮಾನ ಹಾರಾಟ ನಡೆಸುವುದನ್ನು ನಿಷೇಧಿಸಿದ್ದರು. ನಂತರ ಓಮನ್ ತೊರೆದ ಆತ ಯುಎಇಗೆ ತೆರಳುವ ಮುನ್ನ ತನ್ನ ಬಹುಪಾಲು ಸಮಯವನ್ನು ಸಿರಿಯಾದಲ್ಲೇ ಕಳೆದಿದ್ದನು. ಓಮನ್‌ನ ರಾಷ್ಟ್ರೀಯ ವಿಮಾನಯಾನ ಸಂಸ್ಥೆಯಲ್ಲಿ ಈ ಹಿಂದೆ ಕೆಲಸ ಮಾಡುತ್ತಿದ್ದಾಗಲೂ ಉಗ್ರವಾದಿ ಒಲವಿನ ಹಿನ್ನೆಲೆಯಲ್ಲಿ ಆತನನ್ನು ಹುದ್ದೆಯಿಂದ ತೆಗೆದುಹಾಕಲಾಗಿತ್ತು. ನಂತರ ತರಬೇತಿಯಲ್ಲಿ ರಾಡಿಕಲ್ ವಿಚಾರಗಳ ಆತಂಕದಿAದ ಆತನಿಗೆ ಬೇರೆ ಹುದ್ದೆಯನ್ನು ನೀಡಲಾಗಿತ್ತು ಎಂದು ರಾಜತಾಂತ್ರಿಕ ಮೂಲಗಳು ತಿಳಿಸಿವೆ.
ಯುಎಇಯಲ್ಲಿ ಒಮನ್ ತಂದೆ ಹಾಗೂ ಸಿರಿಯನ್ ತಾಯಿಗೆ ಜನಿಸಿದ ಹಮಾಮ್-ಅಲ್-ಹಮಾಮಿ, ತನ್ನ ಜೀವನದ ಕೆಲ ವರ್ಷಗಳನ್ನು ಯುಎಇಯಲ್ಲೇ ಕಳೆದಿದ್ದನು. ಸೌದಿ ಅರೇಬಿಯಾದಲ್ಲಿ ವಿಮಾನ ತುರ್ತು ಭೂಸ್ಪರ್ಶ ಮಾಡಿದ ಬಳಿಕ ಆತನನ್ನು ಹೆಚ್ಚಿನ ಭಯೋತ್ಪಾದನಾ ತನಿಖೆಗಾಗಿ ಯುಎಇಗೆ ಸ್ಥಳಾಂತರಿಸಲಾಗಿದೆ. ಆತ ಫ್ಲೈದುಬೈ ಸಂಸ್ಥೆಯಲ್ಲಿ ಕೇವಲ ಎಂಟು ತಿಂಗಳಿAದ ಮಾತ್ರ ಕೆಲಸ ಮಾಡುತ್ತಿದ್ದನು ಎಂದು ಇಸ್ರೇಲಿ ಅಧಿಕಾರಿಯೊಬ್ಬರು ತಿಳಿಸಿದ್ದಾರೆ. ಇಸ್ರೇಲ್ ಅನ್ನು ಅಧಿಕೃತವಾಗಿ ಗುರುತಿಸದ ಓಮನ್ ದೇಶದ ಪ್ರಜೆಯೊಬ್ಬ ಟೆಲ್ ಅವೀವ್‌ಗೆ ತೆರಳುವ ವಿಮಾನದಲ್ಲಿ ಪೈಲಟ್ ಆಗಿ ಕಾರ್ಯನಿರ್ವಹಿಸಲು ಹೇಗೆ ಅನುಮತಿ ಪಡೆದನು ಎಂಬ ಬಗ್ಗೆ ಗಂಭೀರ ಪ್ರಶ್ನೆಗಳು ಎದ್ದಿದ್ದು, ಇಸ್ರೇಲ್‌ನ ಶಿನ್ ಬೆಟ್, ಮೊಸ್ಸಾದ್ ಮತ್ತು ಸಾರಿಗೆ ಸಚಿವಾಲಯಗಳು ಈ ಕುರಿತು ತನಿಖೆ ನಡೆಸುತ್ತಿವೆ.
ಓಮನ್ ಪೈಲಟ್‌ನ ಸಾಮಾನು ಸರಂಜಾಮುಗಳಲ್ಲಿ ‘ಫ್ರೀ ಪೆಲಸ್ತೀನ್’ ಸಂಘಟನೆಗಳ ಕರಪತ್ರಗಳು ಮತ್ತು ಪ್ಯಾಲೆಸ್ಟೀನ್ ಪರವಾದ ವಸ್ತುಗಳು ಪತ್ತೆಯಾಗಿವೆ ಎಂದು . ಸೌದಿ ಅರೇಬಿಯಾದ ಸುದ್ಧಿವಾಹಿನಿ ವರದಿ ಮಾಡಿದೆ. ಪ್ಯಾಲೆಸ್ಟೀನ್ ಪರವಾಗಿ ಒಲವು ಹಾಗೂ ಇಸ್ರೇಲ್ ವಿರುದ್ಧ ತೀವ್ರ ದ್ವೇಷ ಹೊಂದಿದ್ದ ಆತನ ಇಸ್ಲಾಮಿಕ್ ಉಗ್ರವಾದದ ನಂಟಿನ ಬಗ್ಗೆ ತನಿಖೆ ಮುಂದುವರಿದಿದೆ. ಸೆಪ್ಟೆಂಬರ್ 30 ರಂದು ನಡೆದ ಈ ಘಟನೆಯಲ್ಲಿ, ಕಾಕ್‌ಪಿಟ್‌ನಲ್ಲಿ ಹಮಾಮ್-ಅಲ್-ಹಮಾಮಿ ನಡೆಸಿದ ಅನಿರೀಕ್ಷಿತ ದಾಳಿಯಿಂದಾಗಿ ವಿಮಾನವು ಕೇವಲ ಎರಡು ನಿಮಿಷಗಳಲ್ಲಿ ಸುಮಾರು 16 ಸಾವಿರ ಅಡಿಗಳಷ್ಟು ಕೆಳಮುಖವಾಗಿ ಧುಮುಕಿತ್ತು. ತೀವ್ರ ಗಾಯಗೊಂಡರೂ ಧೃತಿಗೆಡದ ಕ್ಯಾಪ್ಟನ್ ಸ್ಮಿತ್ ಮಚ್ಚರ್ ಅವರು ದಾಳಿಕೋರನೊಂದಿಗೆ ಹೋರಾಡಿ ಕಾಕ್‌ಪಿಟ್ ಬಾಗಿಲು ತೆರೆಯುವಲ್ಲಿ ಯಶಸ್ವಿಯಾದರು. ತಕ್ಷಣವೇ ಇತರ ಸಿಬ್ಬಂದಿ ಹಾಗೂ ಪ್ರಯಾಣಿಕರು ಒಳಬಂದು ದಾಳಿಕೋರನನ್ನು ಬಂಧಿಸಿ, ಸೌದಿ ಅರೇಬಿಯಾದ ತಬುಕ್‌ನಲ್ಲಿ ವಿಮಾನವನ್ನು ಸುರಕ್ಷಿತವಾಗಿ ಲ್ಯಾಂಡಿAಗ್ ಮಾಡುವಲ್ಲಿ ಯಶಸ್ವಿಯಾದರು.





.
.
.
.
.
.
.
.
.
.
.
.
.
.
.
.
.
.
.
.
