

ಕಾರ್ಕಳ,ಅ.05: ಕಾರ್ಕಳ ತಾಲೂಕು ಸಾಣೂರು ಗ್ರಾಮದ ಪುಲ್ಕೇರಿ ಬಳಿ ರಾಜ್ಯ ಹೆದ್ದಾರಿಯಲ್ಲಿ ಬೈಕ್ ಲಾರಿಗೆ ಡಿಕ್ಕಿಯಾದ ಪರಿಣಾಮ ಗಂಭೀರವಾಗಿ ಗಾಯಗೊಂಡ ಬೈಕ್ ಸವಾರ ಚಿಕಿತ್ಸೆ ಫಲಿಸದೆ ಮೃತಪಟ್ಟಿದ್ದಾನೆ. ಬೈಕ್ ಸವಾರ ವಿಘ್ನೇಶ್ ಆಚಾರ್ಯ (25ವ) ಮೃತಪಟ್ಟ ಯುವಕ.
ವಿಘ್ನೇಶ್ ಇನ್ನೂ ನೊಂದಣಿಯಾಗದ ಹೊಸ ಹೋಂಡ ಬೈಕಿನಲ್ಲಿ ನಿಟ್ಟೆಯಿಂದ ಪುಲ್ಕೇರಿ ಕಡೆಗೆ ಅತೀವೇಗವಾಗಿ ಹೋಗುತ್ತಿದ್ದು, ಪಡುತಿರುಪತಿ ಪೆಟ್ರೋಲ್ ಪಂಪ್ ಬಳಿ ನಿಟ್ಟೆಯಿಂದ ಪುಲ್ಕೇರಿ ಕಡೆಗೆ ಹೋಗುತ್ತಿದ್ದ ಲಾರಿಗೆ ಹಿಂಬದಿಯಿAದ ಡಿಕ್ಕಿ ಹೊಡೆದಿದ್ದಾನೆ. ಅಪಘಾತದ ರಭಸಕ್ಕೆ ಬೈಕ್ ಸವಾರ ಗಂಭಿರವಾಗಿ ಗಾಯಗೊಂಡಿದ್ದು, ಕಾರ್ಕಳ ಸರಕಾರಿ ಆಸ್ಪತ್ರೆಗೆ ದಾಖಲಿಸಿದ್ದರೂ ಚಿಕಿತ್ಸೆಗೆ ಸ್ಪಂದಿಸದೆ ಮೃತಪಟ್ಟಿದ್ದಾನೆ.
ಈ ಕುರಿತು ಕಾರ್ಕಳ ನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.





.
.
.
.
.
.
.
.
.
.
.
.
.
.
.
.
.
.
.
.
