

ಮಂಗಳೂರು,ಅ.30: ರೋಟರಿ ಬೆಂಗಳೂರು ಗ್ಲೋಬಲ್ ಯೋಗ ಸಂಸ್ಥೆಯು ಶಿಕ್ಷಕರ ದಿನಾಚರಣೆ ಪ್ರಯುಕ್ತ, ಶಿಕ್ಷಣ ಕ್ಷೇತ್ರದಲ್ಲಿ ವಿಶೇಷ ಸೇವೆ ಸಲ್ಲಿಸಿದ ಅಗ್ರಗಣ್ಯರಿಗೆ ಗುರುತಿಸಿ ಪ್ರತಿ ವರ್ಷ ರಾಷ್ಟ್ರಮಟ್ಟದ ಪ್ರಶಸ್ತಿ ನೀಡಿ ಗೌರವಿಸುತ್ತಿ ಬರುತ್ತಿದೆ.
ಪ್ರಸ್ತುತ ಕಳೆದ 30 ವರ್ಷಗಳಿಂದ ರಾಷ್ಟ್ರೀಯ ಯೋಗ ತರಬೇತಿದಾರು, ತೀರ್ಪುಗಾರರು,ರಾಜ್ಯ ಯೋಗ ಸಂಘಟಕರಾಗಿ, ಪ್ರತಿ ವರ್ಷ ವಿವಿಧ ಮಟ್ಟದ ಯೋಗ ಸ್ಪರ್ಧೆಗಳನ್ನು, ಸಾವಿರಾರು ಯೋಗ ಶಿಬಿರಗಳನ್ನು, ತರಬೇತಿಗಳನ್ನು ನಡೆಸಿಕೊಂಡು ಬರುತ್ತಿರುವ ಎಸ್.ಡಿ.ಎಂ ಮಂಗಳಜ್ಯೋತಿ ಸಮಗ್ರ ಪ್ರೌಢಶಾಲೆ ವಾಮಂಜೂರಿನ ಯೋಗ ಮತ್ತು ದೈಹಿಕ ಶಿಕ್ಷಣ ಶಿಕ್ಷಕ ಶೇಖರ್ ಕಡ್ತಲ ಇವರಿಗೆ ರಾಷ್ಟ್ರೀಯ ಯೋಗ ರತ್ನ ಪ್ರಶಸ್ತಿಯನ್ನು ಇತ್ತೀಚೆಗೆ ಬೆಂಗಳೂರಿನ ಪುರಭವನದಲ್ಲಿ ನಡೆದ ಕಾರ್ಯಕ್ರಮದಲ್ಲಿ ಪ್ರದಾನ ಮಾಡಲಾಯಿತು.





.
.
.
.
.
.
.
.
.
.
.
.
.
.
.
.
.
.
.
.
