

ಕಾರ್ಕಳ, ನ.22: ಬಜಗೋಳಿ ರವೀಂದ್ರ ಶೆಟ್ಟಿ ನೇತೃತ್ವದಲ್ಲಿ ವರ್ಷಂಪ್ರತಿ ನಡೆಯುವ ಗೋದಾನ ಕಾರ್ಯಕ್ರಮವು ನ.28 ರಂದು ಬಜಗೋಳಿಯಲ್ಲಿ ನಡೆಯಲಿದೆ.
ಈ ಕಾರ್ಯಕ್ರಮದ ಕುರಿತು ಕಾರ್ಕಳ ಪತ್ರಿಕ ಭವನದಲ್ಲಿ ಭಾನುವಾರ ನಡೆದ ಪತ್ರಿಕಾಗೋಷ್ಠಿಯಲ್ಲಿ ಆಯೋಜಕರಾದ ರವೀಂದ್ರ ಶೆಟ್ಟಿಯವರು ಮಾಹಿತಿ ನೀಡಿ ಮಾತನಾಡಿ, ಗೋದಾನ ಕಾರ್ಯಕ್ರಮದಲ್ಲಿ ಮೂಡುಬಿದ್ರೆ ಆಳ್ವಾಸ್ ಶಿಕ್ಷಣ ಪ್ರತಿಷ್ಠಾನದ ಅಧ್ಯಕ್ಷ ಡಾ. ಮೋಹನ್ ಆಳ್ವ ಅವರಿಗೆ “ಬೆದರದ ಕಾಮಧೇನು” ಎಂಬ ಪ್ರಶಸ್ತಿ ಪ್ರದಾನ ಮಾಡುವ ಜೊತೆಗೆ ಮೂವರು ವಿದ್ಯಾರ್ಥಿನಿಯರಿಗೆ “ಅಂಬಾಶ್ರೀ” ಹಿರಿದು ಪ್ರದಾನ ಕಾರ್ಯಕ್ರಮ ನಡೆಯಲಿದೆ ಎಂದರು.
ಯಕ್ಷದ್ರುವ ಫೌಂಡೇಶನ್ ಇದರ ಸ್ಥಾಪಕ ಅಧ್ಯಕ್ಷರಾದ ಪಟ್ಲ ಸತೀಶ್ ಶೆಟ್ಟಿ ಕಾರ್ಯಕ್ರಮವನ್ನು ಉದ್ಘಾಟಿಸಲಿದ್ದಾರೆ ಹಾಗೂ ಕಾರ್ಕಳ ಶಾಸಕ ಸುನಿಲ್ ಕುಮಾರ್ ಅವರು ಈ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಲಿದ್ದಾರೆ ಎಂದರು.
ಕಾರ್ಯಕ್ರಮದ ಬಳಿಕ ಆಳ್ವಾಸ್ ಶಿಕ್ಷಣ ಸಂಸ್ಥೆಯ ವಿದ್ಯಾರ್ಥಿಗಳಿಂದ “ನರ ಶಾರ್ದೂಲ” ಯಕ್ಷಗಾನ ಪ್ರದರ್ಶನ ನಡೆಯಲಿದೆ ಎಂದು ವಿವರಿಸಿದರು
ಸುದ್ದಿ ಗೋಷ್ಠಿಯಲ್ಲಿ ಯತೀಶ್ ಶೆಟ್ಟಿ,ಸಂತೋಷ್ ನಂದಳಿಕೆ, ಶ್ರೇಯಾಂಕ್ ಶೆಟ್ಟಿ,ಶಿಕ್ಷರಾದ ನಾಗೇಶ್ ,ಸುಬ್ರಹ್ಮಣ್ಯ ಉಪಸ್ಥಿತರಿದ್ದರು.





.
.
.
.
.
.
.
.
.
.
.
.
.
.
.
.
.
.
.
.
