Share this news

 

ಕಾಬೂಲ್, ನ.28:ಕಟ್ಟರ್ ಮೂಲಭೂತವಾದಿ ಮುಸ್ಲಿಂ ದೇಶವಾಗಿರುವ ಅಫ್ಘಾನಿಸ್ತಾನದಲ್ಲಿ ತಾಲಿಬಾನ್ ಸರ್ಕಾರ ಮಹಿಳೆಯರ ಸ್ವಾತಂತ್ರö್ಯದ ಮೇಲೆ ಸಾಕಷ್ಟು ನಿರ್ಬಂಧ ಹೇರಿದೆ. ಇದೀಗ ಮಹಿಳೆಯರ ಗುರುತಿನ ಮೇಲೆ ವಿಚಿತ್ರ ನಿರ್ಬಂಧ ವಿಧಿಸಿದ ತಾಲಿಬಾನ್ ಸರ್ಕಾರ, ಮಹಿಳೆಯರನ್ನು ಬೀಬಿ ಅಥವಾ ಪ್ರಾಣಿಗಳ ಹೆಸರಿಂದ ಕರೆಯಲು ಆದೇಶ ಹೊರಡಿಸಿದೆ.
ಉತ್ತರದ ಬಾಲ್ಖ್ ಪ್ರಾಂತ್ಯದ ಸರ್ಕಾರಿ ನೌಕರರು ಮತ್ತು ವೈದ್ಯಕೀಯ ಸಿಬ್ಬಂದಿಗೆ ಅಧಿಕೃತ ದಾಖಲೆಗಳು, ಆಸ್ಪತ್ರೆ ಕಡತಗಳು ಮತ್ತು ಔಷಧ ಚೀಟಿಗಳಲ್ಲಿ ಮಹಿಳೆಯರ ಮೊದಲ ಹೆಸರನ್ನು ಬಳಸುವುದನ್ನು ನಿಲ್ಲಿಸುವಂತೆ ಸೂಚಿಸಿದೆ ಎನ್ನಲಾಗಿದೆ. ಇದರ ಬದಲಾಗಿ ಮಹಿಳೆಯರನ್ನು ‘ಬೀಬಿ’ ಎಂಬ ಸಾಮಾನ್ಯ ಪದದಿಂದ ಕರೆಯಲಾಗುತ್ತಿದ್ದು, ಕೆಲವರನ್ನು ‘ಆಡು’ ಮತ್ತು ‘ಹಸು’ ಎಂಬ ಅಗೌರವಯುತ ಪದಗಳನ್ನು ಬಳಸಿ ಉಲ್ಲೇಖಿಸಲಾಗಿದೆ.

ಅಫ್ಘಾನ್ ಮಾಧ್ಯಮ ಸಂಸ್ಥೆ ಜಾನ್ ಟೈಮ್ಸ್, ದಿ ಗಾರ್ಡಿಯನ್ ಮತ್ತು ಸ್ಪ್ಯಾನಿಷ್ ಪತ್ರಿಕೆ ಎಲ್ ಪೈಸ್ ನಡೆಸಿದ ತನಿಖೆಯ ಪ್ರಕಾರ, ಮೇ ತಿಂಗಳಿನಲ್ಲಿ ಈ ಆದೇಶ ನೀಡಲಾಗಿದ್ದು, ಅಧಿಕೃತ ದಾಖಲೆಗಳಲ್ಲಿ ಮಹಿಳೆಯರ ಮೊದಲ ಹೆಸರನ್ನು ಬಳಸದಂತೆ ಸಾರ್ವಜನಿಕ ನೌಕರರು ಮತ್ತು ಆರೋಗ್ಯ ಸಿಬ್ಬಂದಿಗೆ ಸೂಚಿಸಲಾಗಿದೆ. ಸಾಮಾನ್ಯವಾಗಿ ವಯಸ್ಸಾದ ಮಹಿಳೆಯರನ್ನು ಗೌರವದಿಂದ ಸಂಬೋಧಿಸುವ ಹಾಗೂ ‘ಅಜ್ಜಿ’ ಅಥವಾ ‘ವಯಸ್ಸಾದ ಮಹಿಳೆ’ ಎಂಬ ಅರ್ಥ ನೀಡುವ ‘ಬೀಬಿ’ ಪದವನ್ನು ಈಗ ಮಹಿಳೆಯರ ಹೆಸರಿಗೆ ಬದಲಾಗಿ ಸಾಮಾನ್ಯವಾಗಿ ಬಳಸಲಾಗುತ್ತಿದೆ. ಆದರೆ ಕೆಲವು ಮಹಿಳೆಯರನ್ನು ಪ್ರಾಣಿಗಳಿಗೆ ಸಂಬAಧಿಸಿದ ಪದಗಳನ್ನು ಬಳಸಿ ಉಲ್ಲೇಖಿಸಿರುವುದು ಮಹಿಳೆಯರನ್ನು ನಡೆಸಿಕೊಳ್ಳುವ ರೀತಿ ಮತ್ತು ಅವರ ಗುರುತನ್ನು ಗುರುತಿಸುವ ಬಗೆಯ ಕುರಿತು ಕಳವಳ ಮೂಡಿಸಿದೆ. ಈ ಪದ್ಧತಿಯು ಜನರನ್ನು ಮಾನವೀಯತೆಯಿಂದ ವಂಚಿತರನ್ನಾಗಿ ಮಾಡುವ ವ್ಯವಸ್ಥಿತ ವಿಧಾನದ ಭಾಗವಾಗಿದೆ ಎಂದು ಅಫ್ಘಾನ್ ಕಾರ್ಯಕರ್ತೆ ಲಾಲಾ ಉಸ್ಮಾನಿ ತಿಳಿಸಿದ್ದಾರೆ. ಈ ನಿರ್ಬಂಧವು ಇಲ್ಲಿಯವರೆಗೆ ಬಾಲ್ಖ್ ಪ್ರಾಂತ್ಯದಲ್ಲಿ ಮಾತ್ರ ವರದಿಯಾಗಿದ್ದು, ಅಫ್ಘಾನಿಸ್ತಾನದ ಇತರ ಪ್ರದೇಶಗಳಿಗೆ ಈ ನಿರ್ದೇಶನ ಅನ್ವಯಿಸುವ ಸಾಧ್ಯತೆಗಳಿವೆ.

 

 

 

.

 

.

.

.

 

 

 

 

 

 

 

 

 

 

 

 

 

.

 

 

 

 

 

 

 

 

 

 

 

                 

 

 

 

.

 

 

 

 

 

 

 

 

 

 

 

 

 

 

 

 

 

 

 

 

 

.

 

 

 

 

 

 

 

 

 

 

 

 

 

 

 

 

 

 

 

 

 

 

 

 

 

 

 

 

 

 

 

 

.

 

 

 

 

 

 

 

 

 

 

 

 

                 

 

 

 

.

 

 

 

 

 

 

 

 

 

 

 

 

 

 

 

 

 

 

 

 

 

.

 

 

 

 

 

 

                                       

.

 

 

 

 

 

 

 

 

 

 

 

 

 

 

 

 

 

 

 

 

 

.

 

 

 

 

 

 

 

 

 

 

 

 

                 

 

 

 

.

 

 

 

 

 

 

 

 

 

 

 

 

 

 

 

 

 

 

 

 

 

.

 

 

 

 

 

 

 

 

 

 

 

 

 

 

 

 

 

 

 

 

 

 

 

 

 

 

 

 

.

 

 

 

 

 

 

 

 

 

 

 

 

                 

 

 

 

.

 

 

 

 

 

 

 

 

 

 

 

 

 

 

 

 

 

 

 

 

 

.

 

 

 

 

 

 

 

 

 

 

 

 

 

 

 

 

 

 

 

 

 

 

 

 

 

 

 

 

 

 

 

 

.

 

 

 

 

 

 

 

 

 

 

 

 

                 

 

 

 

.

 

 

 

 

 

 

 

 

 

 

 

 

 

 

 

 

 

 

 

 

 

.

 

 

 

 

 

 

 

 

 

Leave a Reply

Your email address will not be published. Required fields are marked *