ಕಾರ್ಕಳ: ಕಾರ್ಕಳ ತಾಲೂಕಿನ ಅಜೆಕಾರಿನಲ್ಲಿ ವ್ಯಕ್ತಿಯೊಬ್ಬರು ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡಿದ್ದಾರೆ.
ಅರುಣ (34) ಎಂಬವರು ಕಳೆದ 2 ದಿನಗಳಿಂದ ಕೆಲಸಕ್ಕೆ ಹೋಗದೇ ಮನೆಯಲ್ಲಿಯೇ ಇದ್ದು ವಿಪರೀತ ಮದ್ಯಪಾನ ಮಾಡುತ್ತಿದ್ದ. ಇಂದು (ನ.13) ಬೆಳಿಗ್ಗೆ ತನ್ನ ತಾಯಿಯೊಂದಿಅಜೆಕಾರು ಪೇಟೆಗೆ ರೇಷನ್ ತರಲು ಬಂದಿದ್ದ ಅರುಣ ಮದ್ಯಪಾನ ಮಾಡಿ ಮನೆಗೆ ಹೋಗಿದ್ದ. ತಾಯಿ ವಸಂತಿಯವರು ರೇಷನ್ ತೆಗದುಕೊಂಡು ಮನೆಗೆ ಹೋಗುವ ವೇಳೆಗೆ ಮನೆಯ ಸಮೀಪದ ಮರಕ್ಕೆ ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡಿದ್ದಾರೆ.
ಈ ಕುರಿತು ಅಜೆಕಾರು ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.