
ಕಾರ್ಕಳ,ಮೇ.12: ಕಾರ್ಕಳ ತಾಲೂಕಿನ ಮರ್ಣೆ ಗ್ರಾಮ ಪಂಚಾಯತ್ ವ್ಯಾಪ್ತಿಯಲ್ಲಿ ಲಯನ್ಸ್ ಕ್ಲಬ್ ಅಜೆಕಾರು, ಶೌರ್ಯ ವಿಪತ್ತು ಘಟಕ ಅಜೆಕಾರು ವಲಯ, ಧರ್ಮಸ್ಥಳ ಗ್ರಾಮಾಭಿವೃದ್ದಿ ಯೋಜನೆ, ಪ್ರಾಥಮಿಕ ಆರೋಗ್ಯ ಕೇಂದ್ರ ಅಜೆಕಾರು , ಜನನಿ ಸಂಜೀವಿನಿ ಒಕ್ಕೂಟ ಅಜೆಕಾರು ಆಶಾ ಹಾಗೂ ಅಂಗನವಾಡಿ ಕಾರ್ಯಕರ್ತರ ಜಂಟಿ ಸಹಯೋಗದಲ್ಲಿ ಅಜೆಕಾರು ಪೇಟೆಯಿಂದ ಎಣ್ಣೆಹೊಳೆ ಯವರೆಗೆ ಬೃಹತ್ ಸ್ವಚ್ಚತಾ ಕಾರ್ಯಕ್ರಮವು ಇಂದು ನಡೆಯಿತು.
ಗ್ರಾಮ ಪಂಚಾಯತ್ ಆಡಳಿತಾಧಿಕಾರಿ ಸುರೇಂದ್ರನಾಥ್ ಎಂ.ವಿ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು. ಪಂಚಾಯತ್ ಅಭಿವೃದ್ದಿ ಅಧಿಕಾರಿ ಶ್ರೀಮತಿ ಅಂಕಿತಾ ನಾಯಕ್ ಗ್ರಾಮದ ಸ್ವಚ್ಚತೆಯ ಬಗ್ಗೆ ಮಾತನಾಡಿ, ಸ್ವಚ್ಚತೆ ಗ್ರಾಮದ ಪ್ರತಿಯೊಬ್ಬ ಗ್ರಾಮಸ್ಥನ ಕರ್ತವ್ಯವಾಗಿದ್ದು, ಎಲ್ಲರೂ ಗ್ರಾಮ ಪಂಚಾಯತ್ ಜೊತೆ ಕೈಗೂಡಿಸಬೇಕೆಂದು ಮನವಿ ಮಾಡಿದರು. ಇನ್ನು ಮುಂದೆ ಸಾರ್ವಜನಿಕವಾಗಿ ಕಸ ಹಾಕುವುದು ಕಂಡುಬಂದಲ್ಲಿ ಗ್ರಾಮ ಪಂಚಾಯತ್ ನಿಂದ ಗರಿಷ್ಟ 5000 ರೂಪಾಯಿ ದಂಡವಿಧಿಸಲಾಗುವುದು ಎಂದರು.
ಈ ಸ್ವಚ್ಛತಾ ಕಾರ್ಯಕ್ರಮದಲ್ಲಿ ಸುಮಾರು 80 ಜನ ಪಾಲ್ಗೊಂಡು 4km ರಾಜ್ಯ ಹೆದ್ದಾರಿಯನ್ನು ಸಂಪೂರ್ಣವಾಗಿ ಸ್ವಚ್ಛಗೊಳಿಸಿದರು. ರಸ್ತೆ ಬದಿ ಸ್ವಚ್ಛಗೊಳಿಸುವ ವೇಳೆ ಒಂದು ಚೀಲದಲ್ಲಿ ಸಿಕ್ಕಿದ ಖರೀದಿ ವೊಚರ್ ನಲ್ಲಿ ವ್ಯಕ್ತಿಯ ಹೆಸರು ಹಾಗೂ ಫೋನ್ ನಂಬರ್ ಪತ್ತೆ ಮಾಡಿ ಪಂಚಾಯತ್ ರೂ. 1000 ದಂಡ ವಿಧಿಸಲಾಯಿತು.



.
.
.
.
.
.
.
.
.
.
.
.
.
.
.
.
.
.
.
.
