ಕಾರ್ಕಳ: ಅಜೆಕಾರು ವ್ಯವಸಾಯ ಸಹಕಾರ ಸಂಘದ ಚುನಾವಣೆಯಲ್ಲಿ ಕಾಂಗ್ರೆಸ್ ವಿರುದ್ಧ ಬಿಜೆಪಿ ಜಯಭೇರಿ ಬಾರಿಸಿದ್ದು ಸತತ ಮೂರನೇ ಬಾರಿಗೆ ಅಧಿಕಾರ ಪಡೆದುಕೊಂಡಿದೆ. ಈ ಮೂಲಕ ಕಾಂಗ್ರೆಸ್ ಬೆಂಬಲಿತರು ಸ್ಪರ್ಧಿಸಿದ್ದ12 ಸ್ಥಾನಗಳಲ್ಲಿ ಪರಾಭವಗೊಂಡು ಕಾಂಗ್ರೆಸ್ ಗೆ ತೀವ್ರ ಮುಖಭಂಗವಾಗಿದೆ.ನಿರ್ದೇಶಕ ಮಂಡಳಿಗೆ ಅವಿರೋಧ ಆಯ್ಕೆ ಪ್ರಸ್ತಾಪ ಮುರಿದುಬಿದ್ದ ಹಿನ್ನೆಲೆಯಲ್ಲಿ ಚುನಾವಣೆ ನಡೆದಿದೆ.
ಬಿಜೆಪಿ ಸಾಮಾನ್ಯ ವರ್ಗದಿಂದ ಅರುಣ್ ಕುಮಾರ್ ಹೆಗ್ಡೆ 680 ಮತಗಳನ್ನು ಪಡೆದರೆ ದಿನೇಶ್ ನಾಯಕ್ 647, ಬಾಲಕೃಷ್ಣ ಪಿ 672, ರವೀಂದ್ರ ಪಿ 657, ಲಕ್ಷ್ಮಣ ವಾಗ್ಳೆ 658, ಶಾಂತಿರಾಜ್ ಜೈನ್ 704 ಮತಗಳನ್ನು ಪಡೆದರೆ ಮಹಿಳಾ ಮೀಸಲಾತಿಯಲ್ಲಿ ಬಿಜೆಪಿ ಬೆಂಬಲಿತ ಜಲಜ ಶೆಟ್ಟಿ 783, ವಿಜೇತಾ ಪೈ 744 ಮತಗಳನ್ನು ಪಡೆದು ಜಯಶಾಲಿಯಾಗಿದ್ದಾರೆ.
ಹಿಂದುಳಿದ ವರ್ಗ ಎ ಮೀಸಲು ಕ್ಷೇತ್ರದಿಂದ ಸತೀಶ್ ಪೂಜಾರಿ 757 ಮತಗಳನ್ನು ಪಡೆದು ಜಯಗಳಿಸಿದ್ದಾರೆ. ಹಿಂದುಳಿದ ವರ್ಗ ಬಿ ಮೀಸಲು ಕ್ಷೇತ್ರದಿಂದ ಪ್ರಶಾಂತ ಶೆಟ್ಟಿ 773 ಮತಗಳನ್ನು ಪಡೆದು ಜಯಗಳಿಸಿದ್ದಾರೆ. ಪರಿಶಿಷ್ಟ ಪಂಗಡ ಮೀಸಲು ಕ್ಷೇತ್ರದಿಂದ ರಾಕೇಶ್ ನಾಯ್ಕ್ 785 ಮತಗಳನ್ನು ಪಡೆದರೆ ಪರಿಶಿಷ್ಟ ಜಾತಿ ಮೀಸಲು ಕ್ಷೇತ್ರದಿಂದ ರಾಘವೇಂದ್ರ 782 ಮತಗಳನ್ನು ಪಡೆದು ಜಯಗಳಿಸಿದ್ದಾರೆ.
ಬಿಜೆಪಿಯ ಸಹಕಾರ ಭಾರತಿ ತಂಡವು ಎಲ್ಲಾ 12 ಕ್ಷೇತ್ರಗಳನ್ನು ಗೆಲ್ಲುವ ಮೂಲಕ ಸತತ ಮೂರನೇ ಬಾರಿಗೆ ಅಧಿಕಾರದ ಗದ್ದುಗೆ ಏರಿದೆ.
12 ಕ್ಷೇತ್ರಗಳ ಪೈಕಿ ಕಾಂಗ್ರೆಸ್ ನಿಂದ ಸಾಮಾನ್ಯ ವರ್ಗದಿಂದ ಸ್ಪರ್ಧಿಸಿದ್ದ ಆನಂದ ನಾಯ್ಕ್ 556, ಉದಯಕುಮಾರ್ 477, ಜಾನ್ ಟೆಲ್ಲಿಸ್ 464, ವಿಶ್ವನಾಥ ಶೆಟ್ಟಿ 451, ಶಂಕರ್ ಶೆಟ್ಟಿ 472, ಶ್ರೀಧರ ಪೂಜಾರಿ 443 ಮತಗಳನ್ನು ಪಡೆದರೆ ಮಹಿಳಾ ಮೀಸಲು ಕ್ಷೇತ್ರದಿಂದ ಯಶೋಧ ಶೆಟ್ಟಿ 510, ಸುರೇಖಾ ಸೇರ್ವೆಗಾರ್ 402 ಮತಗಳನ್ನು ಪಡೆದಿದ್ದಾರೆ. ಹಿಂದುಳಿದ ವರ್ಗ ಎ ಕ್ಷೇತ್ರದಿಂದ ಆನಂದ ನಾಯಕ್ 539, ಹಿಂದುಳಿದ ವರ್ಗ ಬಿ ಕ್ಷೇತ್ರದಿಂದ ಪ್ರಕಾಶ್ ಶೆಟ್ಟಿ 520, ಪರಿಶಿಷ್ಟ ಪಂಗಡದಿಂದ ಸುರೇಂದ್ರ ನಾಯ್ಕ್ 509 ಹಾಗೂ ಪರಿಶಿಷ್ಟ ಜಾತಿಯಿಂದ ಕಲ್ಯಾಣಿ 509 ಮತಗಳನ್ನು ಪಡೆದಿದ್ದಾರೆ.
ಬಿಜೆಪಿ ವಿರುದ್ಧ ತೀವ್ರ ಸ್ಪರ್ಧೆ ನೀಡಿದ ಕಾಂಗ್ರೆಸ್ ಗೆಲುವು ದಕ್ಕಿಸಿಕೊಳ್ಳಲು ವಿಫಲವಾಯಿತು.
ಚುನಾವಣಾ ಅಧಿಕಾರಿಯಾಗಿ ಸುನಿಲ್ ಕುಮಾರ್ ಚುನಾವಣಾ ಪ್ರಕ್ರಿಯೆಯನ್ನು ನಡೆಸಿಕೊಟ್ಟರು. ವ್ಯವಸಾಯ ಸೇವಾ ಸಹಕಾರಿ ಸಂಘದ ಕಾರ್ಯನಿರ್ವಹಣಾಧಿಕಾರಿ ರಮತಾ ಶೆಟ್ಟಿ ಹಾಗೂ ಸಿಬ್ಬಂದಿಗಳು ಚುನಾವಣೆಯಲ್ಲಿ ಸಹಕರಿಸಿದರು.