ಕಾರ್ಕಳ: ಬೆಂಗಳೂರು ಸಂಚಾರಿ ಕಲಾ ಪರಿಷತ್ ನಡೆಸುವ ಭರತನಾಟ್ಯ ಪರೀಕ್ಷೆಯ ಜೂನಿಯರ್ ವಿಭಾಗದಲ್ಲಿ ಅನ್ವಿ ಹೆಚ್ ಅಂಚನ್ ಮತ್ತು ಅನುಜ್ಞಾ ಎನ್ ರಾವ್ ಶೇಕಡ 90 ಅಂಕ ಪಡೆದು ಪ್ರಥಮ ಸ್ಥಾನ ಗಳಿಸಿದ್ದಾರೆ.
ಇವರು ವಿದುಷಿ ಶ್ರೀಮತಿ ಸುಶ್ಮಿತಾ ನೀರೇಶ್ವಲಾಯ ಇವರ ಕಾರ್ಕಳ ಪುಲ್ಕೇರಿ ಶಾಂತಿ ನೃತ್ಯ ನಿಕೇತನದಲ್ಲಿ ಭರತನಾಟ್ಯ ತರಬೇತಿ ಪಡೆಯುತಿದ್ದು, ತರಬೇತಿ ಶಾಲೆಯ 17 ಮಂದಿ ಭರತನಾಟ್ಯ ವಿದ್ಯಾರ್ಥಿಗಳು ಈ ಬಾರಿ ಜೂನಿಯರ್ ಪರೀಕ್ಷೆ ಬರೆದಿದ್ದು ಇದರಲ್ಲಿ ಇಬ್ಬರು ವಿದ್ಯಾರ್ಥಿಗಳು ಪ್ರಥಮ ಸ್ಥಾನ ಗಳಿಸಿ ಹಾಗೂ ಉಳಿದ ವಿದ್ಯಾರ್ಥಿನಿಯರು ವಿಶಿಷ್ಟ ಶ್ರೇಣಿಯಲ್ಲಿ ತೆರ್ಗಡೆ ಹೊಂದಿದ್ದಾರೆ. ಸೀನಿಯರ್ ವಿಭಾಗದಲ್ಲಿ ಸಮೃದ್ಧಿ ಶೆಟ್ಟಿ ಶೇಕಡ 82 ಅಂಕ ಪಡೆದು ಉತ್ತೀರ್ಣರಾಗಿದ್ದಾರೆ.
ಪ್ರಥಮ ಸ್ಥಾನಿಗಳಾದ ಅನ್ವಿ ಹೆಚ್ ಅಂಚನ್ ಜ್ಞಾನಸುಧಾ ಆಂಗ್ಲ ಮಾಧ್ಯಮ ಪ್ರೌಢಶಾಲೆಯ 10ನೇ ತರಗತಿ ವಿದ್ಯಾರ್ಥಿನಿಯಾಗಿದ್ದು, ಅನುಜ್ಞಾ ಎನ್ ರಾವ್ ಎಸ್.ವಿ.ಟಿ ಆಂಗ್ಲ ಮಾಧ್ಯಮ ಶಾಲೆಯ 6ನೇ ತರಗತಿ ವಿದ್ಯಾರ್ಥಿನಿ ಆಗಿರುತ್ತಾರೆ.