Author: karavalinews

ಮುನಿಯಾಲು ಲಕ್ಷ್ಮೀ ವೆಂಕಟರಮಣ ದೇವಸ್ಥಾನದಲ್ಲಿ ಪಕ್ಷಿ ಜಾಗರಣ ಪೂಜೆ

ಹೆಬ್ರಿ : ಹೆಬ್ರಿ ತಾಲೂಕು ಮುನಿಯಾಲಿನ ಶ್ರೀ ಲಕ್ಷ್ಮೀ ವೆಂಕಟರಮಣ ದೇವಸ್ಥಾನದಲ್ಲಿ ಮಂಗಳವಾರ ಮುಂಜಾನೆ ಪಕ್ಷಿ ಜಾಗರಣ ಪೂಜೆಯು ನಡೆಯಿತು. ಪಕ್ಷಿ ಜಾಗರಣಾ ಪೂಜೆಯು ಮುಂಜಾನೆ 5 ಘಂಟೆಗೆ ಸಾಮೂಹಿಕ ಸುಪ್ರಭಾತ ದೊಂದಿಗೆ ಪ್ರಾರಂಭವಾಗಿ, ಶ್ರೀ ದೇವರಿಗೆ ಸುಮಾರು 50 ನಿಲಾಂಜನ…

ಕಾರ್ಕಳ ಟೈಗರ್ಸ್ ವತಿಯಿಂದ ಜನಸಂಪರ್ಕ ಅಭಿಯಾನ

ಕಾರ್ಕಳ : ಕಾರ್ಕಳ ಟೈಗರ್ಸ್ ಬೋಳ ಪ್ರಶಾಂತ್ ಕಾಮತ್ ಅಭಿಮಾನಿ ಬಳಗ ಮತ್ತು ಭಾರತಿ ಅಂಚೆ ಇಲಾಖೆ ಪುತ್ತೂರು ವಿಭಾಗ ಮತ್ತು ಶಾಲಾ ಶಿಕ್ಷಣ ಇಲಾಖೆ ಕಾರ್ಕಳ ಇವರ ಸಹಯೋಗದೊಂದಿಗೆ ಜನಸಂಪರ್ಕ ಅಭಿಯಾನ ಕಾರ್ಯಕ್ರಮ ಕಾರ್ಕಳದ ಬಿ. ಆರ್. ಸಿ ಯಲ್ಲಿ…

ಮುಡಾ ನಿವೇಶನ ಹಂಚಿಕೆ ಹಗರಣ: ಸಿಎಂ ಪತ್ನಿ ಹೆಸರಿಗೆ ಮಂಜೂರಾದ ನಿವೇಶನಗಳ ಪಟ್ಟಿ ವೈರಲ್

ಮೈಸೂರು: ಮೈಸೂರು ನಗರಾಭಿವೃದ್ಧಿ ಪ್ರಾಧಿಕಾರದ (ಮುಡಾ) 50-50 ನಿವೇಶನ ಹಂಚಿಕೆ ಹಗರಣ ರಾಜ್ಯ ರಾಜಕಾರಣದಲ್ಲಿ ಭಾರೀ ಸಂಚಲನ ಮೂಡಿಸಿದೆ. ಇದೀಗ ಸಿದ್ದರಾಮಯ್ಯ ಅವರ ಪತ್ನಿ ಪಾರ್ವತಿ ಅವರಿಗೆ 14 ನಿವೇಶನಗಳು ಮಂಜೂರಾಗಿತ್ತು ಎನ್ನಲಾಗಿರುವ ಪಟ್ಟಿ ವೈರಲ್ ಆಗಿದೆ. ವೈರಲ್ ಆದ ನಿವೇಶನ…

ನಿಟ್ಟೆ ಕಾಲೇಜಿನ ವಿದ್ಯಾರ್ಥಿ ರಾಷ್ಟ್ರೀಯ ಪದವಿಪೂರ್ವ ಅಥ್ಲೆಟಿಕ್ ಚಾಂಪಿಯನ್ ಶಿಪ್ ಗೆ ಆಯ್ಕೆ

ಕಾರ್ಕಳ: ತುಮಕೂರಿನಲ್ಲಿ ನವೆಂಬರ್ 8 ರಿಂದ 10 ರವರೆಗೆ ನಡೆದ ಕರ್ನಾಟಕ ರಾಜ್ಯ ಪದವಿ ಪೂರ್ವ ಅಥ್ಲೆಟಿಕ್ ಚಾಂಪಿಯನ್ ಶಿಪ್ ನಲ್ಲಿ ನಿಟ್ಟೆಯ ಡಾ.ಎನ್.ಎಸ್.ಎ.ಎಂ ಪದವಿಪೂರ್ವ ಕಾಲೇಜಿನ ದ್ವಿತೀಯ ಪಿಯು ವಾಣಿಜ್ಯ ವಿದ್ಯಾರ್ಥಿ ರಾಘವೇಂದ್ರ ನಾಯಕ್ 19 ವರ್ಷದೊಳಗಿನವರ ಜಾವೆಲಿನ್ ಥ್ರೋನಲ್ಲಿ…

ದೇಗುಲದ ಹಣ ಬೇರೆ ಇಲಾಖೆಗಳಿಗೆ ವರ್ಗಾಯಿಸುವುದಿಲ್ಲ: ಮುಜರಾಯಿ ಇಲಾಖೆ ಸ್ಪಷ್ಟನೆ

ಬೆಂಗಳೂರು: ದೇವಾಲಯಗಳಿಂದ ಸಂಗ್ರಹವಾದದ ಹಣವನ್ನು ಮಸೀದಿ, ಚರ್ಚ್ ಹಾಗೂ ಇತರೆ ಇಲಾಖೆಗಳಿಗೆ ನೀಡಲಾಗುತ್ತಿದೆ ಎನ್ನುವ ಆರೋಪ ಕೇಳಿಬರುತ್ತಿದೆ. ಹೀಗಾಗಿ ದೇವಸ್ಥಾನದ ಹುಂಡಿ ಹಣ ದೇಗುಲದ ಅಭಿವೃದ್ಧಿಗೆ ಮಾತ್ರ ಬಳಕೆ ಮಾಡಲಾಗುತ್ತೆ. ದೇಗುಲದ ಹಣ ಬೇರೆ ಇಲಾಖೆಗಳಿಗೆ ವರ್ಗಾಯಿಸುವುದಿಲ್ಲ ಎಂದು ಎಲ್ಲಾ ದೇವಸ್ಥಾನಗಳಲ್ಲಿ…

ಅಜೆಕಾರು ಶ್ರೀ ರಾಮ ಮಂದಿರಕ್ಕೆ ಗೋಕರ್ಣ ಪರ್ತಗಾಳಿ ಸ್ವಾಮೀಜಿ ಭೇಟಿ

ಕಾರ್ಕಳ : ಅಜೆಕಾರು ಶ್ರೀರಾಮ ಭಜನಾ ಮಂಡಳಿಯ ಸುವರ್ಣ ಮಹೋತ್ಸವ ಹಾಗೂ ಶ್ರೀ ರಾಮ ಮಂದಿರದ ರಜತ ಮಹೋತ್ಸವದ ಶುಭ ಸಂದರ್ಭದಲ್ಲಿ ಶ್ರೀ ಗೋಕರ್ಣ ಪರ್ತಗಾಳಿ ಜೀವೋತ್ತಮ ಮಠಾಧೀಶ ಶ್ರೀಮದ್ ವಿದ್ಯಾಧೀಶ ತೀರ್ಥ ಶ್ರೀಪಾದ ಸ್ವಾಮೀಜಿಯವರು ಭೇಟಿ ನೀಡಿದರು. ದೀಪ ಪ್ರಜ್ವಲನೆ…

ಡಿ. 05 ರಿಂದ 07ರವರೆಗೆ ಶಿರ್ಲಾಲು ಸರ್ಕಾರಿ ಪದವಿಪೂರ್ವ ಕಾಲೇಜಿನ ರಜತ ಮಹೋತ್ಸವ: ಆಮಂತ್ರಣ ಪತ್ರ ಬಿಡುಗಡೆ

ಕಾರ್ಕಳ: ಕಾರ್ಕಳ ತಾಲೂಕಿನ ಶಿರ್ಲಾಲು ನಾಲ್ಕೂರು ನರಸಿಂಗೆ ರಾವ್ ಸ್ಮಾರಕ ಸರ್ಕಾರಿ ಪದವಿಪೂರ್ವ ಕಾಲೇಜಿನ ರಜತ ಮಹೋತ್ಸವ ಸಮಾರಂಭವು ಡಿ.05ರಿಂದ 07ರವರೆಗೆ ನಡೆಯಲಿದೆ. ರಜತ ಮಹೋತ್ಸವದ ಅಂಗವಾಗಿ ಸುಮಾರು 57 ಲಕ್ಷ ರೂ ವೆಚ್ಚದ ಯೋಜನೆ ಹಾಕಿಕೊಂಡಿದ್ದು, ಶಾಲಾ ಆವರಣ ಗೋಡೆ,…

ಬೈಲೂರು: ಪರಶುರಾಮ ಮೂರ್ತಿ ವಿವಾದ ಪ್ರಕರಣ: ಬಂಧನಕ್ಕೊಳಗಾದ ಶಿಲ್ಪಿ ಕೃಷ್ಣ ನಾಯಕ್ ಗೆ 7 ದಿನ ಪೊಲೀಸ್ ಕಸ್ಟಡಿ

ಕಾರ್ಕಳ: ಬೈಲೂರು ಉಮಿಕಲ್ ಬೆಟ್ಟದಲ್ಲಿನ ಪರಶುರಾಮ ಪ್ರತಿಮೆ ಪ್ರಕರಣಕ್ಕೆ ಸಂಬAಧಿಸಿದAತೆ ಆರೋಪಿ ಶಿಲ್ಪಿ ಕೃಷ್ಣ ನಾಯಕ್ ನನ್ನು ಕಾರ್ಕಳ ನಗರ ಠಾಣೆ ಪೊಲೀಸರು ಭಾನುವಾರ ಕೇರಳದ ಕ್ಯಾಲಿಕಟ್ ನಲ್ಲಿ ಬಂಧಿಸಿ, ಇಂದು (ಸೋಮವಾರ) ಕಾರ್ಕಳ ನ್ಯಾಯಾಲಯಕ್ಕೆ ಹಾಜರುಪಡಿಸಿದ್ದು ನ್ಯಾಯಾಲಯ ಅವರನ್ನು 7…

ಪ್ರಜ್ವಲ್ ರೇವಣ್ಣ ಲೈಂಗಿಕ ದೌರ್ಜನ್ಯ ಪ್ರಕರಣ: ಜಾಮೀನು ಅರ್ಜಿ ವಜಾಗೊಳಿಸಿದ ಸುಪ್ರೀಂ ಕೋರ್ಟ್

ನವದೆಹಲಿ: ಅತ್ಯಾಚಾರ ಮತ್ತು ಲೈಂಗಿಕ ದೌರ್ಜನ್ಯ ಆರೋಪದಲ್ಲಿ ಜೈಲು ಸೇರಿರುವ ಹಾಸನದ ಮಾಜಿ ಸಂಸದ ಪ್ರಜ್ವಲ್ ರೇವಣ್ಣಗೆ ಸುಪ್ರೀಂಕೋರ್ಟ್ ಬಿಗ್ ಶಾಕ್ ನೀಡಿದ್ದು, ಪ್ರಜ್ವಲ್ ರೇವಣ್ಣ ಸಲ್ಲಿಸಿದ್ದ ಜಾಮೀನು ಅರ್ಜಿಯನ್ನು ಸರ್ವೋಚ್ಛ ನ್ಯಾಯಾಲಯ ವಜಾ ಮಾಡಿದೆ. ಹೈಕೋರ್ಟ್ ಆದೇಶ ಪ್ರಶ್ನಿಸಿ ಪ್ರಜ್ವಲ್…

ಮಂಗಳೂರು: ಕಾರ್ಕಳ ಮೂಲದ ಮಹಿಳೆ ಮಹಡಿಯಿಂದ ಹಾರಿ ಆತ್ಮಹತ್ಯೆ

ಮಂಗಳೂರು : ಕಾರ್ಕಳ ಮೂಲದ ಬಾಣಂತಿ ಮಹಿಳೆಯೊಬ್ಬರು ಮಂಗಳೂರಿನ ಲೇಡಿಗೋಷನ್ ಆಸ್ಪತ್ರೆಯ ನಾಲ್ಕನೇ ಮಹಡಿಯಿಂದ ಹಾರಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಕಾರ್ಕಳ ತಾಲೂಕು ಮುನಿಯಾಲಿನ ರಂಜಿತಾ (28) ಮೃತಪಟ್ಟವರು. ರಂಜಿತಾ ಹೆರಿಗೆಗೆಂದು ಕಾರ್ಕಳ ಆಸ್ಪತ್ರೆಗೆ ದಾಖಲಾಗಿದ್ದರು. ಆದರೆ ಅವರು ಕೆಲವು ಆರೋಗ್ಯ ಸಮಸ್ಯೆಯಿಂದ…