ಕಾರ್ಕಳ: ರಾತ್ರಿ ವೇಳೆ ಲಾಡ್ಜ್ ಒಂದರ ಮುಂದೆ ನಿಲ್ಲಿಸಿದ್ದ ಬೈಕನ್ನು ಕಳ್ಳರು ಕಳವುಗೈದಿರುವ ಘಟನೆ ಕಾರ್ಕಳ ತಾಲೂಕಿನ ಬಜಗೋಳಿಯಲ್ಲಿ ಜ.11 ರಂದು ನಡೆದಿದೆ.
ಬಜಗೋಳಿಯ ಚಿರಾಗ್ ಲಾಡ್ಜ್ನ ಮುಂದೆ ಜ.11 ರಂದು ಅಮೃತ್ ರಾಜ್ ಎಂಬವರು ಬೈಕನ್ನು ನಿಲ್ಲಿಸಿ ಕೀಯನ್ನು ತೆಗೆಯಲು ಮರೆತು ಹೋಗಿದ್ದರು. ಆದರೆ ಮರುದಿನ ಬಂದು ನೋಡಿದಾಗ ಬೈಕ್ ಕಳುವಾಗಿದ್ದು, ಕಳವಾದ ಬೈಕ್ ನ ಮೌಲ್ಯ ರೂ.50,000 ಆಗಿರುತ್ತದೆ.
ಈ ಕುರಿತು ಕಾರ್ಕಳ ಗ್ರಾಮಾಂತರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.