ಕಾರ್ಕಳ: ಸರಿಯಾಗಿ ಕೆಲಸ ಇಲ್ಲದೆ ಖರ್ಚಿಗೆ ಹಣ ಸಾಲದೆ ಬೇಸತ್ತು ಅವಿವಾಹಿತ ವ್ಯಕ್ತಿಯೊಬ್ಬರು ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಮುಂಡ್ಕೂರಿನ ಚಂದ್ರಹಾಸ (32) ಆತ್ಮಹತ್ಯೆ ಮಾಡಿಕೊಂಡ ದುರ್ದೈವಿ.
ಚಂದ್ರಹಾಸ ಅವರಿ ಕೇಟರಿಂಗ್ ಕೆಲಸ ಮಾಡಿಕೊಂಡಿದ್ದರು. ಅವರ ತಂದೆ ತಾಯಿ ಮತ್ತು ಅಣ್ಣ ಮೂವರೂ ಅನಾರೋಗ್ಯಕ್ಕೆ ಒಳಗಾಗಿದ್ದು, ತಂದೆಯ ನಿವೃತ್ತಿ ವೇತನದಿಂದ ಅವರ ಖರ್ಚು ವೆಚ್ಚ ನೋಡಿಕೊಳ್ಳುತ್ತಿದ್ದರು. ಆದರೆ ಇತ್ತೀಚಿನ ದಿನಗಳಲ್ಲಿ ಸರಿಯಾಗಿ ಕೆಲಸವೂ ಇಲ್ಲದೆ ಖರ್ಚಿಗೆ ಹಣ ಸಾಲದೆ ಮನನೊಂದು ಜ.16 ರಂದು ಮುಂಡ್ಕೂರಿನ ಮಸೀದಿ ಬಳಿಯ ಹಾಡಿಯಲ್ಲಿ ನೇಣು ಬಿಗಿದು ಆತ್ಮಹತ್ಯೆಗೆ ಶರಣಾಗಿದ್ದಾರೆ.
ಈ ಕುರಿತು ಕಾರ್ಕಳ ಗ್ರಾಮಾಂತರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.