ಹೆಬ್ರಿ: ತಾಲೂಕಿನ ಬೆಳಂಜೆ ಗ್ರಾಮದ ತುಂಬೆಜಡ್ಡು ಎಂಬಲ್ಲಿ ಬೆಟ್ಟಿಂಗ್ ದಂಧೆ ಹಾಗೂ ಗಾಂಜಾ ಮಾರಾಟ ಮಾಡುತ್ತಿದ್ದ ಮೂವರನ್ನು ಹೆಬ್ರಿ ಪೊಲೀಸರು ಬಂಧಿಸಿದ್ದಾರೆ.
ಸೋಮವಾರ ರಾತ್ರಿ ಬೆಳಂಜೆ ಗ್ರಾಮದ ತುಂಬೆಜಡ್ಡು ಎಂಬಲ್ಲಿರುವ ಮೋಹನ್ ದಾಸ್ ಎಂಬುವವರ ಮನೆಯ ಪಕ್ಕದಲ್ಲಿರುವ ಕಟ್ಟಡದಲ್ಲಿ ಕೆಲವೊಂದು ವ್ಯಕ್ತಿಗಳು ಗಾಂಜಾ ಮಾರಾಟ ಮಾಡುತ್ತಿದ್ದ ಕುರಿತು ಖಚಿತ ಮಾಹಿತಿ ಬಂದ ಹಿನ್ನಲೆಯಲ್ಲಿ ಪೊಲೀಸರು ದಾಳಿ ನಡೆಸಿದಾಗ ಬೆಳಗಿನ ಜಾವ ಕಟ್ಟಡದಲ್ಲಿ ತೇಜಸ್ , ಪ್ರಜ್ವಲ್, ಹಾಗೂ ಪ್ರವೀಣ್ ಎಂಬವರು ಗಾಂಜಾ ಮಾರಾಟ ಹಾಗೂ ಕ್ರಿಕೆಟ್ ಬೆಟ್ಟಿಂಗ್ ದಂಧೆ ನಡೆಸುತ್ತಿರುವುದು ಬೆಳಕಿಗೆ ಬಂದಿದೆ.
ಪೊಲೀಸರು ಆರೋಪಿಗಳ ಸಹಿತ ಸ್ಥಳದಲ್ಲಿದ್ದ ರೂ. 89,000 ನಗದು ಸಹಿತ 8 ಮೊಬೈಲ್ ,7 ಎಟಿಎಂ ಕಾರ್ಡ ಗಳು, 3 ಸಿಮ್ ಕಾರ್ಡ್ ಗಳು, 2 ನೋಟ್ ಪುಸ್ತಕಗಳು ಹಾಗೂ 21 ಗ್ರಾಂ ಗಾಂಜಾ ವಶಪಡಿಸಿಕೊಂಡು ಪ್ರಕರಣ ದಾಖಲಿಸಿದ್ದಾರೆ.